ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೇ ನೋಡಿ..

ವಾಹಿನಿ ಸುದ್ದಿ

ಬಿಗ್ ಬಾಸ್ ಫಿನಾಲೆಗೆ ಕೆಲವೇ ಕೆಲವು ದಿನಗಳು ಉಳಿದಿದೆ. ಫಿನಾಲೆಗೆ ಯಾರು ಹೋಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಸಂದರ್ಭದಲ್ಲಿ ಇಂದು ಆಕ್ಷತಾ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ರಾಕೇಶ್, ಶಶಿ, ಕವಿತಾ, ಆ್ಯಂಡಿ, ಧನರಾಜ್, ರಶ್ಮಿ ಹಾಗೂ ನವೀನ್ ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಇಂದು ಫಿನಾಲೆಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಪಡೆದುಕೊಂಡ ಅದೃಷ್ಟ ಸ್ಪರ್ಧಿ ಇವರೇ ನೋಡಿ.

ಫಿನಾಲೆಗೆ ಟಿಕೆಟ್ ಪಡೆದುಕೊಂಡ ಸ್ಪರ್ಧಿ ನವೀನ್ ಸಜ್ಜು. ಮೊದಲ ದಿನದಿಂದಲೂ ಯಾವುದೇ ವಿವಾದಗಳಿಲ್ಲದೆ, ಗಾಯನ ಮೂಲಕ ಎಲ್ಲರನ್ನು ಮನರಂಜಿಸಿದ ನವೀನ್ ಇಂದು ಫಿನಾಲೆಗೆ ಎಂಟ್ರಿ ಟಿಕೆಟ್ ಪಡೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚು ಸುದೀಪ್ ಕೂಡ ಅಭಿನಂದಿಸಿದರು. ಉಳಿದ ಸ್ಪರ್ಧಿಗಳಲ್ಲಿ ಯಾರು ಫಿನಾಲೆಗೆ ಹೋಗ್ತಾರೆ ಅನ್ನೋದು ಮುಂದಿನ ವಾರ ತಿಳಿಯಲಿದೆ.