ರಾಜಣ್ಣ ಮಗ ಸಿನಿಮಾದ ಐಟಂ ಸಾಂಗ್ ನಲ್ಲಿ ನಟಸಾರ್ವಭೌಮ ಖ್ಯಾತಿಯ ಭೂಷಣ್ ಡ್ಯಾನ್ಸ್ ಧಮಾಕ..!!

ಸಿನಿಮಾ

ಚಿತ್ರದ ಶೀರ್ಷಿಕೆಯಿಂದಲೇ ಮೊದಲು ಸುದ್ದಿಯಾದ ಈ ಸಿನಿಮಾ ಆನಂತರ ತನ್ನ ಆಕ್ಷನ್ ಸನ್ನಿವೇಶಗಳು ಹಾಗೆ ಚರಣ್ ರಾಜ್ ಅವರ ಹಾಡೊಂದರ ಮೂಲಕ ಮತ್ತಷ್ಟು ಪ್ರಚಾರವನ್ನ ಪಡೆದುಕೊಳ್ತು.. ಪಕ್ಕ ಆಕ್ಷನ್ ಎಲಿಮೆಟ್ಸ್ ತುಂಬಿರುವ ರಾಜಣ್ಣನ ಮಗ ರಿಲೀಸ್ ಗೆ ರೆಡಿಯಾಗಿದ್ದು, ಸದ್ಯ ಯೂಟ್ಯೂಬ್ ಅಂಗಳದಲ್ಲಿ ಬಿಡುಗಡೆಗೊಂಡಿರುವ ಇದೇ ಚಿತ್ರದ ಹಾಡು ಸಖತ್ತಾಗೆ ಸೌಂಡ್ ಮಾಡ್ತಿದೆ..

ನಟಸಾರ್ವಭೌಮ ಚಿತ್ರ ಖ್ಯಾತಿಯ ಭುಷಣ್ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ತೆಲುಗಿನ ಢೀ ಡ್ಯಾನ್ಸ್ ಷೋ ಮೂಲಕ ಹೆಸರು ಪಡೆದಿರುವ ಅಕ್ಸಾ ಖಾನ್ ಸಖತ್ತಾಗೆ ಸೊಂಟ ಬಳುಕಿಸಿದ್ದಾರೆ.. ರವಿಬಸ್ರೂರ್ ಮ್ಯೂಸಿಕ್ ನಲ್ಲಿ‌ ಮೂಡಿ ಬಂದಿರುವ ಈ ಡ್ಯಾನ್ಸ್ ನಂಬರ್ ಹಾಡಿಗೆ ಸೂಪರ್ ಸ್ಟೆಪ್ ಗಳನ್ನ ಸಂಯೋಜನೆ‌ ಮಾಡಲಾಗಿರೋದು ಹಾಡಿನಲ್ಲಿ ಎದ್ದು ಕಾಣ್ತಿದೆ.. 

ಕೋಲಾರ‌ ಸೀನು ಅವರ ನಿರ್ದೇಶನದಲ್ಲಿ ಅಕ್ಷತಾ ಹಾಗು ಹಿರಿಯ ನಟ ಚರಣ್ ರಾಜ್ ಮುಖ್ಯಭೂಮಿಕೆಯಲ್ಲಿರುವ ರಾಜಣ್ಣನ ಮಗ ಸಿನಿಮಾ‌, ಅಪ್ಪ ಮಗನ ಬಾಂದವ್ಯದ ಜೊತೆಗೆ ಆದಷ್ಟು ಬೇಗಾ ತೆರೆಗೆ ಬರಲು ಸಿದ್ದವಾಗಿದೆ..