ದಾಖಲೆ ಬರೆದ ನಾನು ಮತ್ತು ಗುಂಡ.. ಶ್ವಾನ ಪಾತ್ರಕ್ಕೆ ಶ್ವಾನವೇ ಡಬ್ಬಿಂಗ್ ..!!!

ಸಿನಿಮಾ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್.ಕೆ.ಆರ್. ಪೇಟೆ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ನಾನು ಮತ್ತು ಗುಂಡ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಂಬಾ ಖ್ಯಾತಿಯ ನಾಯಿ ಇದೀಗ ಇತಿಹಾಸ ಸೃಷ್ಟಿಸಿದೆ. ಹೇಗೆ ಅಂತೀರಾ, ಮೊದಲ ಬಾರಿಗೆ ನಾಯಿ ಅಂದ್ರೆ ಸಿಂಬಾ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿದೆ. ಈ ಮೂಲಕ ಸಿಂಬಾ ಇತಿಹಾಸ ಪುಟ ಸೇರಿದೆ.

ನಾನು ಮತ್ತು ಗುಂಡ ಚಿತ್ರತಂಡ ಡಬ್ಬಿಂಗ್ ಮಾಡುತ್ತಿರುವ ವೀಡಿಯೋ ಬಿಡುಗಡೆ ಮಾಡಿದೆ, ಬಿಡುಗಡೆಯಾದ ಕೆಲ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇದೇ ಮೊದಲ ಬಾರಿಗೆ ಸಿಂಬಾ  ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ತಮ್ಮ ಪಾತ್ರಕ್ಕೆ ಧ್ವನಿ ನೀಡಿದೆ. ಅಲ್ಲದೇ ಸಿಂಬಾನಿಗೆ ವಿಶೇಷ ತರಬೇತಿ ನೀಡಿದ ಬಳಿಕ ಈ ರೆಕಾರ್ಡಿಂಗ್ ಸ್ಟುಡಿಯೋಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಸಿಂಬಾ ಈ ಹಿಂದೆ ಮಲಯಾಳಂ ಸಿನಿಮಾ  ಬೆಂಗಳೂರು ಡೇಸ್ ನಲ್ಲಿ ಕೂಡ ಅಭಿನಯಿಸಿತ್ತು.

ರಾಕ್ ಲೈನ್ ಸುಧಾಕರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ಗೌಡ, ಬಾಡಿ ಬಿಲ್ಡರ್ ಎವಿ ರವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಚಿದಾನಂದ ಹೆಚ್ ಕೆ ಅವರ ಛಾಯಾಗ್ರಾಹಣ ಚಿತ್ರಕ್ಕಿದೆ. ಪೊಯಮ್ ಪಿಕ್ಚರ್ ಪ್ರೊಢಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದ್ದು, ಜನವರಿ 24ಕ್ಕೆ ತೆರೆ ಮೇಲೆ ಬರಲಿದೆ.