ಗುಂಡನಿಗೆ ಪ್ರೇಕ್ಷಕರ ಫುಲ್ ಮಾರ್ಕ್.. ರಾಜ್ಯಾದ್ಯಂತ ಥಿಯೇಟರ್ ಗಳ ಸಂಖ್ಯೆಯಲ್ಲಿ ಹೆಚ್ಚಳ

ಸಿನಿಮಾ

ಶಿವರಾಜ್‌. ಕೆ.ಆರ್.ಪೇಟೆ ಅಭಿಯನದ ನಾನು ಮತ್ತು ಗುಂಡ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿದೆ. ಕನ್ನಡ‌ ಅಭಿಮಾನಿಗಳಿಂದ ಉತ್ತಮ ಪ್ರಕ್ರಿಯೆ ದೊರೆತ ಕಾರಣ ರಾಜ್ಯಾದ್ಯಂತ ಥಿಯೇಟರ್ ಹೆಚ್ಚಿಸಲಾಗಿದೆ. ಹೌದು, ಶುಕ್ರವಾರದಿಂದ ಕೆ.ಜಿ.ರಸ್ತೆಯಲ್ಲಿರುವ ಅನುಪಮ ಥಿಯೇಟರ್ ನಲ್ಲಿ ನಾನು‌ ಮತ್ತು ಗುಂಡ‌ ಪ್ರದರ್ಶನಗೊಳ್ಳಲಿದೆ.

ಮಲ್ಟಿಫೆಕ್ಸ್ನಲ್ಲೂ ಕೂಡ ನಾನು ಮತ್ತು ಗುಂಡ ಡಬ್ಬಲ್ ಶೋ‌ ಆಗಿದ್ದು, ಗುಂಡನ ಬೆನ್ನಿಗೆ ಥೀಯೇಟರ್ ಮಾಲಿಕರು ನಿಂತಿದ್ದಾರೆ. ಅಲ್ಲದೆ ನೋಡುಗರ ಸಂಖ್ಯೆ ಹೆಚ್ಚಾದ ಕಾರಣ, ಸ್ವಯಂ ಪ್ರೇರಿತರಾಗಿ ಚಿತ್ರಮಂದಿರದ ಮಾಲಿಕರು ಹಾಗೂ ಪ್ರದರ್ಶಕರು ಹೆಚ್ಚಿನ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಉತ್ತಮ ಚಿತ್ರ ಬಂದಾಗ ಕನ್ನಡಿಗರು ಎಂದಿಗೂ ಕೈ ಬಿಡುವುದಿಲ್ಲ‌ ಎಂಬುದಕ್ಕೆ ಉದಾಹರಣೆ ನಾನು ಮತ್ತು ಗುಂಡ ಚಿತ್ರ.

ನಟ ದರ್ಶನ್, ನಟ ಸುದೀಪ್, ನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಟರು ನಾನು ಮತ್ತು ಗುಂಡ ಚಿತ್ರಕ್ಕೆ ಬೆನ್ನು ತಟ್ಟುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಶಿವರಾಜ್.ಕೆ.ಆರ್. ಪೇಟೆ ಭಾವನ್ಮಾಕವಾಗಿ ನಟಿಸಿದ್ದು, ಪ್ರಾಣಿ ಮತ್ತು ಮನುಷ್ಯನ ನಡುವಿನ ಪ್ರೀತಿ, ಮಮತೆ ಮತ್ತು ಬಾಂಧವ್ಯ ಸಾರುವ ಚಿತ್ರ ಇದಾಗಿದೆ. ಅಲ್ಲದೆ ಎಲ್ಲಾ ಕಲಾವಿದರು ಸೂಪರ್ ಆಗಿ ಅಭಿನಯಿಸಿದ್ದು, ಮಿಸ್ ಮಾಡದೆ ಎಲ್ಲರೂ ಸಿನಿಮಾ ನೋಡಿ