ನಾನು ಮತ್ತು ಗುಂಡನಿಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್.. ಜಾಕ್ ಮಂಜುರಿಂದ ಚಿತ್ರ ರಿಲೀಸ್..

ಸಿನಿಮಾ

ರಘು ಹಾಸನ್ ನಿರ್ದೇಶನದ ನಾನು ಮತ್ತು ಗುಂಡ ಚಿತ್ರ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ. ನಾಯಿ ಜತೆಗಿನ ಮನುಷ್ಯನ ಪ್ರೀತಿಯನ್ನು ಹೇಳುವ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಶಿವರಾಜ್‌ ಕೆ.ಆರ್‌. ಪೇಟೆ ನಾಯಕನಾಗಿ ನಟಿಸಿದ್ರೆ, ಇವರಿಗೆ ಸಂಯುಕ್ತಾ ಹೊರನಾಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ಗ್ಯಾಪ್‌ ನಂತರ ಸಂಯುಕ್ತಾ ಹೊರನಾಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಸದ್ಯಕ್ಕೆ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ನಾನು ಮತ್ತು ಗುಂಡ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಎಲ್ಲಾ ವರ್ಗದವರು ಕೂತು ನೋಡಬಹುದಾದ ಸಿನಿಮಾ ಎಂದಿರುವ ಸೆನ್ಸಾರ್ ಮಂಡಳಿ ನಾನು ಮತ್ತು ಗುಂಡ ಚಿತ್ರಕ್ಕೆ ‘ಯು/ಎ ಸರ್ಟಿಫಿಕೇಟ್’ ನೀಡಿದೆ. ಚಿದಾನಂದ್‌ ಕ್ಯಾಮೆರಾ, ಕಾರ್ತಿಕ್‌ ಶರ್ಮಾ ಸಂಗೀತ, ಶರತ್‌ ಚಕ್ರವರ್ತಿ ಡೈಲಾಗ್‌, ವಿವೇಕಾನಂದ ಅವರ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಸಂಬಾ ಹೆಸರಿನ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದೇ ಈ ಚಿತ್ರದ ಹೈಲೈಟ್‌.

ಯುಟರ್ನ್, ಒಂದು ಮೊಟ್ಟೆಯ ಕಥೆ ವಿತರಕರಿಂದ ನಾನು ಮತ್ತು ಗುಂಡ ರಿಲೀಸ್ ಮಾಡಲು ಮುಂದಾಗಿದ್ದಾರೆ. ವರ್ಷದ ಪ್ರಾರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾವನ್ನ ತೆಗೆದುಕೊಂಡಿರುವ ಜಾಕ್ ಮಂಜು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮನುಷ್ಯ ಮತ್ತು ಶ್ವಾನದ ನಡುವಲ್ಲಿರೋ ಮೂಕಪ್ರೇಮ
ಹಾಗೂ ಮನಮಿಡಿಯುವ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಶೀಘ್ರದಲ್ಲೇ ಪ್ರಚಾರ ಕಾರ್ಯ ಕೂಡ ಪ್ರಾರಂಭಿಸಲಿದೆ ಚಿತ್ರತಂಡ..