ಮಗುವಿನ ಕರುಳ ಬಳ್ಳಿಯ ರಕ್ತದಿಂದ ಕೊರೋನಾಗೆ ಮದ್ದು..?!

ವಾಹಿನಿ ಸುದ್ದಿ

ಕೊರೊನಾ ಸಂಕಷ್ಟದಿಂದ ಈಗಾಗಲೇ ದೇಶಾದ್ಯಂತ ಜನರು ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ವ್ಯಾಕ್ಸಿನ್ ಯಾವಾಗ ಸಿಗುತ್ತೆ ಅಂತ ಕಾಯುತ್ತಿದ್ದಾರೆ. ಕೊರೋನಾದಿಂದ ಗುಣಮುಖರಾದ ರೋಗಿಗಳ ರಕ್ತದಲ್ಲಿನ ಪ್ಲಾಸ್ಮಾದಿಂದ ಕೊರೋನಾಕ್ಕೆ ಚಿಕಿತ್ಸೆ ನೀಡಬಹುದು ಅಂತ ಗೊತ್ತಾಗಿತ್ತು. ಇದರ ಜೊತೆಗೆ ಈಗ ಮಗುವಿನ ಕರುಳ ಬಳ್ಳಿಯಲ್ಲಿ ಇರುವಂತಹ ರಕ್ತದಿಂದ ಕೊರೋನಾಕ್ಕೆ ಚಿಕಿತ್ಸೆ ನೀಡಬಹುದು ಅಂತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಕೆಲವು ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಿ ಉತ್ತಮ ಫಲಿತಾಂಶ ಕೂಡ ಬಂದಿದೆಯಂತೆ. ಆದರೆ ಇದನ್ನು ಎಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಂಡು ದೇಶಾದ್ಯಂತ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತದೆ ನೋಡಬೇಕು.