ನೆನಪುಗಳನ್ನ ನೆನೆಪಿಸುವ ಅದ್ಭುತ ದೃಶ್ಯಕಾವ್ಯ ‘ಮಾಲ್ಗುಡಿ ಡೇಸ್

ಸಿನಿಮಾ
  1. ಈಗಿನ ಲಾಂಗ್ ಮಚ್ಚು ಕ್ರೈಮ್ ಸಿನಿಮಾಗಳ ನಡುವೆ ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಫ್ರೆಶ್ ಫೀಲ್ ಕೊಡುವ ಸಿನಿಮಾವಾಗಿ ಹೊರ ಹೊಮ್ಮಿದೆ.. ಹೌದು, ಬೇಸಿಗೆಯ ಬಿಸಿಗೆ ತಂಪೆರೆಯುವ ಸಿನಿಮಾವಾಗಿ ಹೊರಹೊಮ್ಮಿದೆ ಕಿಶೋರ್ ಮೂಡಬಿದ್ರೆ ಅವರ ಈ ಸಿನಿಮಾ.. ಬರವಣಿಗೆಯನ್ನೆ ಉಸಿರಾಗಿಸಿಕೊಂಡ ಸಾಹಿತಿ ವೃದ್ಧಾಪ್ಯದಲ್ಲಿ ವಿದೇಶದಲ್ಲಿರುವ ತನ್ನ ಮಕ್ಕಳ ಜೊತೆಗೆ ಹೊಗಲು ನಿರಾಕರಿಸಿ ಮನೆ ಬಿಟ್ಟು ಹೊರ ಬರುತ್ತೆ…

ಇದೇ ಸಮಯಕ್ಕೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರಕೃತಿ  ಹೊರ ಬರುತ್ತಾರೆ.. ನಂತರ ಸಾಹಿತಿ
ಲಕ್ಷ್ಮೀ ನಾರಾಯಣ ಹಾಗು ಈ ಯುವತಿ ಭೇಟಿಯಾಗಿ ಮಾಲ್ಗುಡಿಗೆ ಹೊಗಲು ನಿರ್ಧಾರ ಮಾಡುತ್ತಾರೆ.. ಈ ಸಂದರ್ಭದಲ್ಲಿ ತಮ್ಮ‌ ಫ್ಲ್ಯಾಶ್‌‌‌ ಬ್ಯಾಕ್ ಗೆ ಹೋಗುತ್ತಾರೆ.. ಈ ಸಿನಿಮಾದ ಕಥೆ ಥಿಯೇಟರ್ ನಲ್ಲಿ ಕುಳಿತ ಪ್ರೇಕ್ಷಕರನ್ನು ಕೂಡ ತಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತದೆ…

ಸುಂದರ ಹಸಿರ ಮಡಲಲ್ಲಿ, ವಿಹಂಗಮ ದೃಶ್ಯಗಳ ನಡುವೆ ಮಾಲ್ಗುಡಿ ಡೇಸ್ ನ ಪಯಣ ಹಿತವಾದ ಮನಂಜನೆಯನ್ನ ನೀಡುತ್ತ ಸಾಗುತ್ತದೆ.. ನಿರ್ದೇಶಕರಾದ ಕಿಶೋರ್ ಮೂಡಬಿದ್ರೆ ಅಂದುಕೊಂಡ ಹಾಗೆ ಉತ್ತಮ ಮನರಂಜನಾತ್ಮಕ ಸಿನಿಮಾವನ್ನ ಪ್ರೇಕ್ಷಕರಿಗೆ ನೀಡಿದ್ದಾರೆ.. ವಿಜಯ್ ರಾಘವೇಂದ್ರ ಅವರ ನಟೆಯ ಬಗ್ಗೆ ಎರಡು ಮಾಡುತ್ತಿಲ್ಲ… ನೀಟ್ ಅಂಡ್ ಪರ್ಫೆಕ್ಟ್..

ಸಂಗೀತದ ವಿಚಾರಕ್ಕೆ ಬರೋದಾದ್ರೆ ಗಗನ್ ಬಡಾರಿಯಾ ಹಾಡುಗಳು ಚಿತ್ರದ ಮೈಲೇಜ್ ಗೆ ಒಗ್ಗಿಕೊಂಡಿದೆ.. ಸಿನಿಮಾದಲ್ಲಿ ಪರಿಚಿತ ನಟರಾಗಿ ವಿಜಯ್ ರಾಘವೇಂದ್ರ ಇದ್ರೆ, ಬಹುತೇಕ ಮಿಕ್ಕವರೆಲ್ಲ ಹೊಸ ಪ್ರತಿಭೆಗಳೆ.. ತಮಗೆ‌ ನೀಡಿರುವ ಕೆಲಸವನ್ನ ಶ್ರದ್ಧೆಯಿಂದನ ಮಾಡಿದ್ದಾರೆ..

ಹಾವಿನೊಂದಿಗೆ ಸರಸ, ಮತೋನ್ಮಾದ ಕಿಚ್ಚು, ತಾಯಿಯಿಂದ, ಪ್ರೀತಿಯಿಂದ ದೂರವಾಗಿ, ಹುಟ್ಟಿದ ಊರು ಬಿಡಬೇಕಾದ ಪರಿಸ್ಥಿತಿ… ಹೀಗೆ ಹಲವು ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಈ ಹಂತದಲ್ಲಿ ಲಕ್ಷ್ಮಿ ನಾರಾಯಣ ಅವರ ಬಾಲ್ಯದ ಪ್ರೀತಿಯ ಗೆಳತಿ ಲೆನಿಟಾ ಪಾತ್ರ ಬರುತ್ತದೆ. ಲೆನಿಟಾ ಅವರನ್ನು ಭೇಟಿಯಾಗಿ ಕ್ಷಮೆ ಕೇಳಬೇಕು ಎಂದು ಲಕ್ಷ್ಮಿ ನಾರಾಯಣ ಬಯಸುತ್ತಾರೆ ಲಕ್ಷ್ಮೀ ಮತ್ತು ಲೆನಿಟಾ ಅವರ ಬಾಲ್ಯದ ಸುಂದರ ಪ್ರೇಮದ ಕಥೆ ಕೇಳಿ ಬೆರಗಾಗುವ  ಪ್ರಕೃತಿ ಹಾಗೂ ಆಕೆಯ ಕಾಲೇಜಿನ ಸ್ನೇಹಿತ, ಲೆನಿಟಾ ಮತ್ತು ಲಕ್ಷ್ಮಿ ನಾರಾಯಣ ಅವರನ್ನು ಭೇಟಿ ಮಾಡಿಸುವ ನಿರ್ಧಾರ ಮಾಡುತ್ತಾರೆ. ಲೆನಿಟಾ ಅವರನ್ನು ಹುಡುಕಲು ಮಲೆನಾಡಿನ ಬಹುತೇಕ ಪ್ರದೇಶಗಳನ್ನು ಸುತ್ತುತ್ತಾರೆ.

ಲೆನಿಟಾ ಯಾರು, ಲಕ್ಷ್ಮಿ ನಾರಾಯಣ ಲೆನಿಟಾ ಅವರಲ್ಲಿ ಕ್ಷಮೆ ಕೇಳಬೇಕು ಅಂತ ಅಂದುಕೊಂಡಿದ್ದು ಯಾಕೆ, ಕೊನೆಗೂ ಅವರು ಭೇಟಿಯಾದರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಚಿತ್ರ .
ನಮ್ ರೇಟಿಂಗ್ 4/5