LIVE UPDATE.. ಬಿಗ್ ಬಾಸ್ ಮನೆ ಸ್ಪರ್ಧಿಗಳು ಯಾರ್ಯಾರು..? ಇವರ ಹಿನ್ನೆಲೆ ಏನು..?

ವಾಹಿನಿ ಸುದ್ದಿ ಸಿನಿಮಾ

ಕಲರ್ಸ್ ಸೂಪರ್ ತನ್ನ ಘನತೆಗೆ ತಕ್ಕಹಾಗೆ ಬಿಗ್ ಬಾಸ್ ಸೀಸನ್ ೫ಗೆ ಅದ್ದೂರಿಯಾಗಿ ಚಾಲನೆ ನೀಡಿದೆ.. ಇಷ್ಟು ದಿನ ಬಿಗ್ ಬಾಸ್ ಮನೆ ಸೇರಿಲಿರೋ ಕಂಟೆಸ್ಟೆಂಟ್ ಯಾರು ಅನ್ನೋ ಕುತೂಹಲಗಳಿಗೆ ತೆರೆ ಬಿದ್ದಿದೆ.. ಸದ್ಯಕ್ಕೆ ಬಿಗ್‌ಬಾಸ್ ಮನೆಯನ್ನ ಸೇರಲಿರೋ ಜನ ಸ್ಪರ್ಧಿಗಳು ಯಾರ್‍ಯಾರು ಅನ್ನೋ ಜಾತಕ ಇಲ್ಲಿದೆ ನೋಡಿ..


1. ಖ್ಯಾತ ಸಂಖ್ಯಾಶಾಸ್ತ್ರಜ್ಞ ಜೈ ಶ್ರೀನಿವಾಸನ್

ಇವ್ರು ಟಿವಿಯಲ್ಲಿ ತನ್ನ ಸಂಖ್ಯಾಶಾಸ್ತ್ರಜ್ಞನಾಗಿ ಗುರುತಿಸಿಕೊಂಡಿರುವ ಜೈ ಶ್ರೀನಿವಾಸ್, ಸಂಖ್ಯಾ ಶಾಸ್ತ್ರದ ಪ್ರಕಾರ ಮೊದಲ ಕಂಟೆಸ್ಟೆಂಟ್ ಆಗಿ ಮನೆ ಸೇರಿದ್ದಾರೆ

ಕೃಪೆ: ಕಲರ್ ಸೂಪರ್

2. ಮೇಘ

ಈ ಮೊದಲೇ ಹೇಳಿದಂತೆ ಬಿಗ್‌ಬಾಸ್ ಮನೆಗೆ ಜನ ಸಾಮಾನ್ಯರಿಗೂ ಎಂಟ್ರಿ ಸಿಕ್ಕಿದೆ.. ಅದರಲ್ಲಿ ಮೊದಲ ಸಾಮಾನ್ಯ ಜನಗಳ ಸಾಲಿನಲ್ಲಿ ಮನೆ ಸೇರಿದ ಕಂಟೆಸ್ಟೆಂಟ್ ಮೇಘ.. ಕೊಡಗಿನ ಮೂಲದ ಹುಡುಗಿ ಈಕೆ.. ತಾನೂ ನೋಡೋಕೆ ಹುಡುಗಿ ತರ ಅಸ್ಟೆ, ಆದ್ರೇ ಯಾವ್ ಹುಡುಗರಗಿಗೂ ಕಡಿಮೆ ಇಲ್ಲ ಅಂತ ಮನೆ ಸೇರಿದ್ದಾರೆ..

ಕೃಪೆ: ಕಲರ್ ಸೂಪರ್

3. ದಯಾಳ್ ಪದ್ಮನಾಭ್

13 ಸಿನಿಮಾಗಳನ್ನ ನಿರ್ದೇಶನ ಮಾಡಿರೋ ದಯಾಳ್ ಪದ್ಮನಾಭ್ ಈಗ ಬಿಗ್ ಬಾಸ್ ಮನೆ ಸೇರಿದ್ದಾರೆ.. ಸದ್ಯಕ್ಕೆ ಇವ್ರೇ ನಿರ್ದೇಶನ ಮಾಡಿರೋ ಸತ್ಯ ಹರಿಶ್ಚಂದ್ರ ಇದೇ ವಾರ ತೆರೆಗೆ ಬರ್‍ತೀದೆ.. ಇಂಡಿಯನ್ ಸೈಂಟಿಸ್ಟ್ ಇನ್ಸ್ಟಿಟ್ಯೂಟ್ ನಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿದ್ರು.. ಸ್ಲಂ ನಲ್ಲಿ ಹುಟ್ಟಿ ಬೆಳೆದು ಈ ಮಟ್ಟಿಗೆ ಬೆಳೆದ ಪದ್ಮನಾಭ್ ಈಗ ಬಿಗ್ ಬಾಸ್ ಮನೆಗೆ ೩ ನೇ ಸ್ಪರ್ಧಿಯಾಗಿ ಹೋಗಿದ್ದಾರೆ..

ಕೃಪೆ: ಕಲರ್ಸ್ ಸೂಪರ್

4. ಸಿಹಿ ಕಹಿ ಚಂದ್ರು

ಹೌದು.. ಈ ಬಾರಿ ಬಿಗ್ ಬಾಸ್ ಮನೆಯ 4 ನೇ ಸದಸ್ಯರಾಗಿ ಎಂಟ್ರಿ ನೀಡಿದ್ದು ಸಿಹಿಕಹಿ ಚಂದ್ರು ಅವ್ರು.. ಈಗಾಗ್ಲೇ ಟಿವಿ ಷೋ ಹಾಗೆ ಎಫ್ಎಂ ನಲ್ಲಿ ಹೆಚ್ಚು ಸೌಂಡ್ ಮಾಡ್ತಿದ್ದ ಚಂದ್ರು ಅವ್ರು, ಬಿಗ್ ಬಾಸ್ ಮನೆಯಲ್ಲಿ ಹೇಗೆ ಸೌಂಡ್ ಮಾಡ್ತಾರೆ ಕಾದು ನೋಡ್ಬೇಕು..

ಕೃಪೆ: ಕಲರ್ಸ್ ಸೂಪರ್

5. ಶೃತಿ ಪ್ರಕಾಶ್

ಬೆಳಗಾವಿಯ ಹುಡುಗಿ.. ಲೈವ್ ಷೋಗಳಲ್ಲಿ ಹಾಡುವ ಹಾಗೆ ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾಳೆ.. ಸದ್ಯಕ್ಕೆ ಸೌತ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವ ಆಸೆಯಲ್ಲಿದ್ದಾರೆ…

ಕೃಪೆ: ಕಲರ್ಸ್ ಸೂಪರ್

6. ಅನುಪಮಾ

ಅಕ್ಕ ಸೀರಿಯಲ್‌ನಲ್ಲಿ ಅಕ್ಕನಾಗಿದ್ದ ಅನುಪಮಾ ಈ ಬಾರಿ ಬಿಗ್ ಬಾಸ್ ಮನೆಯನ್ನ ಸೇರಿಕೊಂಡಿದ್ದಾರೆ.. ಕಷ್ಟದಿಂದ ಬೆಳೆದು ಬಂದ ಅನುಪಮಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡ್ತಾರ ಅನ್ನೋದನ್ನ ಕಾದು ನೋಡ್ಬೇಕು..

ಕೃಪೆ: ಕಲರ್ಸ್ ಸೂಪರ್

7.ರಿಯಾಜ್ ಪಾಷ

ಕಂಠದಾನ ಕಲಾವಿದ, ಆರ್ ಜೆ, ಹಲವು ಸ್ಟೇಜ್ ಷೋಗಳನ್ನ ನಡೆಸಿಕೊಟ್ಟ ಬೆಂಗಳೂರಿನ ರಿಯಾಜ್ ಪಾಷ.. ಈಗಾಗ್ಲೇ ಹಲವು ದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.. ಇನ್ನೂ ವಿಶೇಷ ಅಂದ್ರೆ ಇವರನ್ನ ಮನೆ ಒಳಗೆ ಕಳಿಸಲು ಬಿಗ್ ಬಾಸ್ ಸೀಸನ್ ೪ರ ರನ್ನರ್‌ಅಪ್ ಕಿರಿಕ್ ಕೀರ್ತಿ ಸ್ಟೆಜ್ ಪಾರ್ಫಮೆನ್ಸ್  ಮೂಲಕ ರಿಯಾಜ್ ಪಾಷರನ್ನ ಒಳಗೆ ಕಳಿಸಿಕೊಟ್ರು..

ಕೃಪೆ: ಕಲರ್ಸ್ ಸೂಪರ್

8.ನಿವೇದಿತಾ

ಫೇಸ್‌ಬುಕ್‌ನಲ್ಲಿ ಡಬ್‌ಸ್ಮಾಶ್‌ನ ಮೂಲಕ ಸಿಕ್ಕಾಪಟ್ಟೆ ಗುರುತಿಸಿಕೊಂಡಿದ್ದ ಗೊಂಬೆ ಮೈಸೂರಿನ ನಿವೇದಿತಾ ಈಗ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ..

9.ಸಮೀರ್ ಆಚಾರ್ಯ

ಸಂಸ್ಕಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸ ಬೇಕು ಅನ್ನೋ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರಂತೆ.. ಜನರಿಗೆ ಒಳ್ಳೆಯದನ್ನ ತಲುಪಿಸಬೇಕು ಹಂಬಲವಿರುವ ವ್ಯಕ್ತಿ.. ಮೂಲತಃ ಉತ್ತರ ಕರ್ನಾಟಕದವರಾದ ಇವ್ರು ಈ ಬಿಗ್‌ಬಾಸ್ ಹಣದಿಂದ ದೇವಸ್ಥಾನ ಹಾಗೆ ಸ್ಕೂಲ್‌ನ ಜೀರ್ಣೋದ್ಧಾರ ಮಾಡೋ ಹಂಬಲವನ್ನ ವ್ಯಕ್ತ ಪಡೆಸಿದ್ದಾರೆ.

ಕೃಪೆ: ಕಲರ್ಸ್ ಸೂಪರ್

10.ಜೆ.ಕೆ

ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಅಂತ ಖ್ಯಾತಿಯಾಗಿರೋ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ೧೦ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿಂದಿಯಲ್ಲಿ ಕೂಡ ರಾವಣ ಪಾತ್ರದಲ್ಲಿ ಮಿಂಚಿದ್ರು. ಅಲ್ಲದೆ ಜೆಕೆ, ಸಿಸಿಎಲ್‌ನಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಹಾಟ್ ಫೇವರೆಟ್ ಆಗಿರೋ ಜೆಕೆ ಒಂದು ಚೇಂಜ್ ಇರಲಿ ಅಂತ ಬಿಗ್ ಬಾಸ್‌ಗೆ ಈ ಬಾರಿ ಎಂಟ್ರಿಯಾಗಿದ್ದಾರಂತೆ.

ಕೃಪೆ: ಕಲರ್ಸ್ ಸೂಪರ್

11. ಆಶಿತಾ
ಕಿರುತೆರೆಯಲ್ಲಿ ನಟಿಸಿರುವ ಆಶಿತಾ ಈ ಬಾರಿ ಬಿಗ್ ಬಾಸ್ ಮನೆ ಸೇರಿದ್ದಾರೆ .. ಕಿಚ್ಚ ಫ್ಯಾನ್ ಆಗಿ ಮನೆಗೆ ಎಂಟ್ರಿ ನೀಡಿದ್ದಾರೆ..

12. ದಿವಾಕರ:
ಸೇಲ್ಸ್‌ಮನ್.. ನರಸೀಪುರದಲ್ಲಿ ಹುಟ್ಟಿ ಮಡಕೇರಿಯಲ್ಲಿ ಬೆಳೆದ ಸಾಮಾನ್ಯ ವ್ಯಕ್ತಿ.. ಓದಿರೋದು ೨ ತರಗತಿ.. ಸದ್ಯಕ್ಕೆ ಬಿಗ್‌ಬಾಸ್ ಸ್ಪರ್ಧಿಯಾಗಿ ಮನೆ ಸೇರುತ್ತಿರುವ ಸಾಮಾನ್ಯ ವ್ಯಕ್ತಿ

ಕೃಪೆ: ಕಲರ್ಸ್ ಸೂಪರ್

13.ತೇಜಸ್ವಿನಿ

ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನ ಮಾಡಿದ್ದ  ಹಾಗೆ ಕೆಲ ಸಿನಿಮಾಗೆ ನಾಯಕಿಯಾಗಿದ್ದ ನಟಿ ತೇಜಸ್ವಿನಿ.. ಇದ್ರ ಜೊತೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು..

14.ಚಂದನ್ ಶೆಟ್ಟಿ

ರ್‍ಯಾಪರ್ ಚಂದನ್ ಶೆಟ್ಟಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಸೇರಿದ್ದಾರೆ.. ಸದ್ಯಕ್ಕೆ ತನ್ನ ರ್‍ಯಾಪ್ ಹಾಡುಗಳ ಮೂಲಕವೇ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟಿಹಾಕಿರುವ ಚಂದನ್ ಬಿಗ್ ಬಾಸ್‌ನಲ್ಲಿ ಕೊನೆಯವರು ಇರುತ್ತಾರ ಅನ್ನೋದನ್ನ ಕಾದು ನೋಡ್ಬೇಕು.. ಇನ್ನೂ ವಿಶೇಷ ಅಂದ್ರೆ ಈತನನ್ನ ಕಳಿಸಿಕೊಡುವ ಮೊದಲು ಐಂದ್ರಿತಾ ರೈ ಸ್ಟೆಜ್ ಮೇಲೆ ನೃತ್ಯ ಮಾಡಿದ್ರು

15. ಸುಮಾ ರಾಜಕುಮಾರ್

ಮ್ಯಾಜಿಕ್ ಮಾಡ್ತಾರೆ, ಬೊಂಬೆಯನ್ನ ಕೈಲಿಡು ಮಾತಾನಾಡಿಸ್ತಾರೆ, ಗೃಹಿಣಿಯಾಗಿರೋ ಈ ಮಹಿಳೆ ಮೈಸೂರಿನಿಂದ ಬಂದಿದ್ದು ಬಿಗ್‌ಬಾಸ್ ಮನೆಗೆ ೧೫ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ

ಕೃಪೆ: ಕಲರ್ಸ್ ಸೂಪರ್

ಜಗ್ಗನ್ & ತಾಪಂಡ

ಕಲರ್‍ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಗಾಂಧರಿ ಸೀರಿಯಲ್‌ನ ನಾಯಕ ಜಗನ್ ಈ ಬಾರಿ ಬಿಗ್‌ಬಾಸ್ ಮನೆ ಸೇರಿದ್ದಾರೆ.. ಇನ್ನೂ ಈತನೊಂದಿಗೆ ಮತ್ತೊಬ್ಬ ಸ್ಪರ್ಧಿಯಾಗಿ ನಟಿ ಕೃಷಿ ತಾಪಂಡ ಮನೆ ಸೇರಿದ್ರು

ಹೀಗೆ 17 ಜನ ಬಿಗ್ ಬಾಸ್ ಮನೆಯನ್ನ ಸೇರಿದ್ದಾರೆ.. ಇದರಲ್ಲಿ 11 ಜನ ಸೆಲೆಬ್ರೆಟಿಗಳು, 6 ಜನ ಸಾಮಾನ್ಯ ಜನರು ಬಿಗ್ ಬಾಸ್ ಅಂಗಳವನ್ನ ಸೇರಿದ್ದಾರೆ… ಮುಂದಿನ ದಿನಗಳಲ್ಲಿ ಇವರಿಂದ ಯಾವ ರೀತಿ ಮನರಂಜನೆ ಸಿಗಲಿದೆ ಕಾದು ನೋಡ್ಬೇಕು.