ಈ ಲೇಡಿ ಬೆತ್ತಲಾಗಿ ನಿಂತ್ರೆ, ಕಾರ್ಟೂನ್ ಚಾನೆಲ್ ಆನ್ ಆಗುತ್ತೆ..!

ವಾಹಿನಿ ಸುದ್ದಿ

ಹೌದು ಮ್ಯಾನ್ಚೆಸ್ಟರ್ ನ 32 ವರ್ಷದ ಈ ಲೇಡಿ ಬೆತ್ತಲಾಗಿ ನಿಂತ್ರೆ ಇಡೀ ಡಿಸ್ನಿ ಪ್ರಪಂಚವೇ ಕಾಣುತ್ತೆ. ಜೋಡಿ ಡನ್ ಲಾಪ್ ಹೆಸರಿನ ಈಕೆಗೆ ಟ್ಯಾಟು ಅಂದ್ರೆ ತುಂಬಾ ಹುಚ್ಚು ಜೊತೆಗೆ ಕಾರ್ಟೂನ್ ಅಂದ್ರೆ ಪ್ರಾಣ. ಇವರ ತಂದೆ ತೀರಿಕೊಂಡ ಮೇಲೆ ಅವರ ನೆನಪಲ್ಲಿ ಜಂಗಲ್ ಬುಕ್ ಕಾರ್ಟೂನ್ ನ ಕೈ ಮೇಲೆ ಹಾಕಿಸಿಕೊಂಡ ಜೋಡಿ. ನಂತ್ರ ಡಿಸ್ನಿಯಲ್ಲಿ ಬರುವ ಒಂದೊಂದೇ ಕ್ಯಾರೆಕ್ಟರ್  ಗಳನ್ನ ತಮ್ಮ ದೇಹದ ಎಲ್ಲಾ ಭಾಗಗಳ ಮೇಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇವ್ರ ದೇಹ ನೋಡಿದರೆ ಒಂದು ಡಿಸ್ನಿ ಕಾರ್ಟೂನ್ ಚಾನೆಲ್ ನೋಡಿದ ಹಾಗೆ ಆಗುತ್ತೆ ಅಂತಾರೆ ಇವರ ಪತಿ ಹಾಗೂ ಸ್ನೇಹಿತರು. ಜೋಡಿ ಇನ್ನೂ ಸಾಕಷ್ಟು ಕಾರ್ಟೂನ್ ಪಾತ್ರಗಳನ್ನ  ತಮ್ಮ ಮೈ ಮೇಲೆ ಟ್ಯಾಟು ಹಾಕಿಸಿಕೊಳ್ಬೇಕು ಅಂದುಕೊಂಡಿದ್ದಾರೆ. ಆದ್ರೆ ಈಗ ಅವರ ಮೈ ಮೇಲೆ ಮುಖ ಬಿಟ್ಟರೆ ಬೇರೆ ಜಾಗ ಉಳಿದಿಲ್ಲ.. ಹಾಗಾಗಿ ಬೇಜಾರು ಮಾಡಿಕೊಳ್ತಾರೆ ಜೋಡಿ.. ಎಂಥೆಂಥಾ ಜನ ಇರ್ತಾರೆ ನೋಡಿ.