ಕನ್ನಡ ಮೊದಲ ಸ್ಟಾರ್ ಆಗಿ ಟ್ವಿಟರ್ ಬ್ಲೂ ರೂಂಗೆ ಅಡಿ ಇಟ್ಟ ಕಿಚ್ಚ..!!

ಸಿನಿಮಾ

ಪೈಲ್ವಾನ್ ಸಿನಿಮಾ ಯಾವ ಪರಿ ಸೌಂಡ್ ಮಾಡ್ತಿದೆ ಅಂದ್ರೆ, ಬಾಲಿವುಡ್ ಚಿತ್ರಗಳ ಸದ್ದು ಕೂಡ ತಣ್ಣಾಗಿಬಿಟ್ಟಿದೆ.. ಹೇಳಿ ಕೇಳಿ ಭಾರತೀಯ ಸಿನಿಮಾ ರಂಗಕ್ಕೆ ಈಗಾಗಲೇ ಪರಿಚಿತವಾಗಿರುವ ಕಿಚ್ಚ ಪರಿಪೂರ್ಣವಾಗಿ ಪಕ್ಕ ಮಾಸ್ ಸಬ್ಜೆಕ್ಟ್ ನ ಜೊತೆಗೆ ಕನ್ನಡ ತನದ ಸಿನಿಮಾ ಗತ್ತನ್ನ ಬಾಲಿವುಡ್ ಅಂಗಳಕ್ಕೆ ಕೊಂಡೊಯ್ಯುತ್ತಿದ್ದಾರೆ.. ಹೀಗಾಗೆ ಪೈಲ್ವಾನ್ ಚಿತ್ರದ ಮೇಲೆ ಬಾರಿ ನಿರೀಕ್ಷೆ ಇದೆ.. ಸಿನಿಮಾ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದ್ದು, ಟ್ವಿಟರ್ ನಲ್ಲಿ ಆಕ್ಟೀವ್ ಇರುವ ಕಿಚ್ಚನ ಪೈಲ್ವಾನ್ ಕರಾಮತ್ತಿಗೆ ಟ್ವಿಟರ್ ಇಂಡಿಯಾ ತನ್ನ ಬ್ಲೂ ರೂಂಗೆ ಆಹ್ವಾನ ನೀಡಿದೆ…

ಬಿಗ್ ಲಿಟಲ್ ಟೀಮ್ ಮೂಲಕ ಈ ಕೆಲಸ ಸಾಧ್ಯವಾಗಿರೋದು ವಿಶೇಷವಾಗಿದೆ.. ಇಂದು ಸಂಜೆ ಕಿಚ್ಚ ಪೈಲ್ವಾನ್ ಸಿನಿಮಾದ ಕುರಿತು ಟ್ವಿಟರ್ ಬ್ಲೂ ರೂಮ್ ನಿಂದ ಲೈವ್ ಬರಲ್ಲಿದ್ದು, ನೀವು ಅವರನ್ನ ಪ್ರಶ್ನೆ ಕೇಳಬಹುದು..  #AskPailwan ಅಂತ ಟೈಮ್ ಮಾಡಿ ನಿಮ್ಮ ಪ್ರಶ್ನೆಯನ್ನ ಟ್ಯಾಗ್ ಮಾಡಿದ್ರೆ ಸಾಕು.. ಇದಕ್ಕೆ ಸುದೀಪ್ ಉತ್ತರ ನೀಡಲ್ಲಿದ್ದಾರೆ..

ಇಂದು ಸಂಜೆ ಈ ಕಾರ್ಯಕ್ರಮ ಪ್ರಸಾರವಾಗಲ್ಲಿದ್ದು, ಇದೇ ವಾರ ಪೈಲ್ವಾನ್ ತೆರೆ ಕಾಣಲಿದೆ.. ಪಂಚ ಭಾಷೆಗಳಲ್ಲಿ ಮಿಂಚಲು ಹೊರಟ ಸುದೀಪ್ ಅವರ ಪೈಲ್ವಾನ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿನ್ಹಾ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವಿದೆ.. RRR ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದು, ಅರ್ಜುನ ಜನ್ಯ ಮ್ಯೂಸಿಕ್ ಮಾಡಿದ್ರೆ, ಕೃಷ್ಣ ಅವರ ನಿರ್ದೇಶನ ಈ ಚಿತ್ರಕ್ಕಿದೆ..