ಜೀ ಮ್ಯೂಸಿಕ್ ಮೆಚ್ಚುಗೆ ಪಡೆದ ಕನ್ನಡದ ‘ಖುಷಿ’..! ಇದೇ 9ಕ್ಕೆ ಬಿಡುಗಡೆ..

ಸಿನಿಮಾ

ಖುಷಿ.. ಈ ಒಂದು ಶಬ್ದ ಮನಸಿಗೆ ಅದೆಷ್ಟೊ ಹಿತವನ್ನ ನೀಡುತ್ತೆ.. ಎಲ್ಲರಿಗೂ ಖುಷಿಯಾಗಿ ಇರಬೇಕು ಅನ್ನೋ ಆಸೆ ಇದ್ದೆ ಇರುತ್ತೆ.. ಆ ಖುಷಿ ಇರೋದಾದ್ರು ಎಲ್ಲಿ..? ಆ ಖುಷಿಯನ್ನ ಪಡೆಯೋದಾದ್ರು ಹೇಗೆ..? ಇಂತಹ ಪ್ರಶ್ನೆಗೆ ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ.. ಸದ್ಯ ಈಗ ಖುಷ್ ಖುಷ್ಯಾಗಿರೋ ನಿಮಗೆ ಖುಷಿ ಬಗ್ಗೆ ಯಾಕೆ ಹೇಳ್ತಿದ್ದೀವಿ ಅನ್ನೋ ಗೊಂದಲ ಇದ್ರೆ ಅದಕ್ಕು ಈ ‘ಖುಷಿ’ಯೆ ಕಾರಣ’

ನೋಡಿದ್ರಲ್ಲ, ಇದೆ ಆ ಖುಷಿ.. ಇದೇ 9ನೇ ತಾರೀಖು ಬಿಡುಗಡೆಯಾಗಲು ಸಜ್ಜಾಗಿರುವ ಕನ್ನಡದ ಸಾಂಗ್ ಇದು.. ಕನ್ನಡದ ಈ ಖುಷಿಗೆ ಹಿಂದಿವಾಲಾಗಳು ಫಿದಾ ಆಗಿ ನಿಮ್ಮ ಈ ಖುಷಿಯನ್ನ ಹಿಂದಿಯಲ್ಲಿ ಮಾಡಿಕೊಂಡು ಎಂದಿದ್ರಂತೆ.. ಹಿಂಗಾಗೆ ಈ ಹಾಡು ಕನ್ನಡ ಮಾತ್ರವಲ್ಲದೆ ಹಿಂದೆ ವರ್ಷನ್ ನಲ್ಲು ಬಿಡುಗಡೆಗೊಳಿಸಲಾಗ್ತಿದೆ.. ಅಂದಹಾಗೆ ಕನ್ನಡದ ಆಲ್ಬಂ ಸಾಂಗ್ ಒಂದು ಇದೇ ಮೊದಲ ಬಾರಿಗೆ ಹಿಂದಿಯಲ್ಲು ಸಿದ್ದವಾಗಿ ಬಿಡುಗೆಯಾಗ್ತಿರೋದು.. ಇದು ‘ಖುಷಿ’ ವಿಚಾರನೆ ಅಲ್ವ..?

ಯುಥ್ ಟೀಮ್ ಸೇರಿ ರೆಡಿ ಮಾಡಿರೋ ಈ ಗೀತೆಯನ್ನ ಪ್ರತಿಷ್ಠಿತ ಜೀ ಮ್ಯೂಸಿಕ್ (ಹಿಂದಿ) ಹಾಗು ಜೀ ಮ್ಯೂಸಿಕ್ ಸೌತ್ ಬಿಡುಗಡೆ ಮಾಡುತ್ತಿದೆ.. ಸಂಜನಾ ಪ್ರಕಾಶ ಈ ಹಾಡನ್ನ ನಿರ್ದೇಶಿಸಿ ತಾವೇ ಅಭಿನಯಿಸಿದ್ದಾರೆ.. ಪ್ರಶಾಂತ್ ಬರೆದಿರುವ ಲಿರಿಕ್ಸ್ ಗೆ ಸ್ಟೀಫನ್ ಪ್ರತಿಕ್ ಮ್ಯೂಸಿಕ್ ನೀಡಿ ಸ್ವತಹ ಇವರೇ ಹಾಡಿದ್ದಾರೆ. ಕೇಳೊಕಂತು ಅದ್ಭುತವಾಗಿದ್ದು, ಇದರ ಜೊತೆಗೆ ಪ್ರೀತಮ್ ತೆಗ್ಗಿನಮನೆ ಕ್ಯಾಮರ ವರ್ಕ್ ಅಲ್ಟಿಮೇಟ್ ಅನ್ನಿಸುತ್ತೆ..

ಸಂಜನಾ ಹಾಗು ಇನಮ್ ನಟನೆ ಖುಷಿಯ ಕಿಕ್ ಅನ್ನ ಮತ್ತಷ್ಟು ರಂಗೇರಿಸಿದೆ.. ಜೆಐ ಸ್ಟೂಡಿಯೋ ವತಿಯಿಂದ NKN ಬಂಡವಾಳ ಹೂಡಿದ್ದು, ಟೆಕನಿಕಲ್ ಪಾಟ್ನರ್ಸ್ ಆಗಿ ಭುವನ್ ಸಿನಿಮಾಸ್ ಸಾತ್ ನೀಡಿದ್ದು, ಶಮಂತ್ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಈ ಹಾಡನ್ನ ಸಿದ್ದ ಮಾಡಿದ್ದಾರೆ.. ಬೆಂಗಳೂರು ಹಾಗು ಮಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ದು, ಹಿಂದಿ ಅವತರಣಿಕೆಗೆ ಪವನ್ ಉಪಾಧ್ಯಾಯ ಲಿರಿಕ್ಸ್ ಬರೆದಿದ್ರೆ, ಕಾಸ್ಟೂಮ್ ಡಿಸೈನ್ ಮಾಡಿರೋದು ಸುನೈನಾ (OKI couture)…

ಒಟ್ಟಿನಲ್ಲಿ ಯುವ ತಂಡವೊಂದು ಸಖತ್ ಜೋಷ್ ನಲ್ಲಿ ಸಿದ್ದ ಮಾಡಿರೋ ‘ಖುಷಿ’ ಆಲ್ಬಂ ಸಾಂಗ್ ನೋಡಿ ಜೀ ಮ್ಯೂಸಿಕ್ ಸಂಸ್ಥೆ ಬೆಂಬಲ ನೀಡಿದ್ದು, ಇದೇ 9ಕ್ಕೆ ಹಾಡನ್ನ ಬಿಡುಗಡೆ ಮಾಡಲಿದೆ.. ಈ ಯುವ ಪ್ರತಿಭೆಗಳಿಗೆ ನಿಮ್ಮ ಪ್ರೋತ್ಸಾಹದ ಅವಶ್ಯತೆ ಇದೆ.. ಈ ‘ಖುಷಿ’ಯನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿಯನ್ನ ಇಡೀ ಟೀಮ್ ನಿಮ್ಮ ಮೇಲೆ ಹಾಕಿದ್ದು, ಖುಷಿಯನ್ನ ಅಪ್ಪಿ ಒಪ್ಪಬೇಕಾದ ಕೆಲಸ ನಿಮ್ಮದು..