ಕಣ್ಣು ತೆರೆದ ಹನುಮನ ವಿಗ್ರಹ..!! ಕರ್ನಾಟಕದಲ್ಲಿರುವ ಈ ವಿಗ್ರಹದ ಪವಾಡ ಕೇಳಿದ್ರೆ ಮೈಚುಂ ಎನ್ನುತ್ತೆ

ಲೈಫ್‍ಸ್ಟೈಲ್

ಕರ್ನಾಟಕದ ಇತಿಹಾಸದಲ್ಲಿ ದೇವಾನು ದೇವತೆಗಳು ನೆಲೆಸಿ ಹೋದ ಉದಾಹರಣೆಗಳು ಸಾವಿರಾರು ಸಿಗುತ್ತೆ.. ಇಂದಿಗು ನಮ್ಮ ಕಣ್ಣ ಮುಂದೆ ಇಂತಹ ಹಲವು ಕುರುಹುಗಳು ಇರುವುದೆ ಇದಕ್ಕೆ ಸಾಕ್ಷಿಯಾಗಿದೆ.. ಇನ್ನು ಭಕ್ತರು ಪೂಜೆ ಮಾಡುವ ಹಲವು ವಿಗ್ರಹಗಳು ಮೂಡಿಸುವ ಪವಾಡ ಜನತೆಯನ್ನ ಅಚ್ಚರಿಗೆ ಕೊಂಡೊಯ್ಯುತ್ತದೆ.. ಹೀಗಿರುವಾಗಲೆ ಬೆಳಗಾವಿ ಜಿಲ್ಲೆಯ ಆಂಜನೇಯ ಸ್ವಾಮಿಯ ಮೂರ್ತಿ ಏಕಾಏಕಿ ತನ್ನ ಒಂದು ಕಣ್ಣನ್ನ ತೆರೆದಿರೋದು ಸುತ್ತಮುತ್ತಲಿನ ಜನರ ಅಚ್ಚರಿಗೆ ಕಾರಣವಾಗಿದೆ

ಹೌದು.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನ ನೇಣಿಗೇರಿಸಿದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಇಂತದೊಂದು ಅಚ್ಚರಿಯ ಘಟನೆ ವರದಿಯಾಗಿದೆ.. ಹೀಗಾಗೆ ಈ ಪವಾಡವನ್ನ ಕಣ್ತುಂಬಿಕೊಳ್ಳಲಿ ಸುತ್ತ ಮುತ್ತಲಿನ ಜನತೆ ಇಲ್ಲಿಗೆ ಆಗಮಿಸಿ ಆಂಜನೇಯ ಸ್ವಾಮಿ ವಿಗ್ರಹದ ದರ್ಶನ ಪಡೆಯುತ್ತಿದ್ದಾರೆ.. ಇಲ್ಲಿನ ಬೃಹತ್ತಾದ ಆಲದ ಮರದ ಕೆಳಗೆ ವಾಯುಪುತ್ರನ ಈ ವಿಗ್ರವಿದ್ದು, ಪ್ರತಿ ಶನಿವಾರದಂದು ಪೂಜೆ ನಡೆಸಲಾಗುತ್ತೆ..

ಈ ಹಿಂದೆಯು ಕೂಡ ಇದೇ ವಿಗ್ರಹ ಎರಡು ಕಣ್ಣುಗಳನ್ನ ತೆರೆದಿದ್ದ ಬಗ್ಗೆ ಇಲ್ಲಿನ ಸ್ಥಳೀಯರು ಹೇಳಿದ್ದಾರೆ.. ಈ ಬಾರಿ ತನ್ನ ಒಂದು ಕಣ್ಣು ತೆರೆದಿರುವುದು ಅಚ್ಚರಿಗೆ ಕಾರಣವಾಗಿದ್ದು, ರಾಮದೂತನ ವಿಗ್ರಹದ ಈ ಪವಾಡ  ಶುಭ ಸಂಕೇತವೊ ಅಥವಾ ಅಶುಭದ ಮುನ್ಸೂಚನೆಯೊ ಎಂಬ ಬಗ್ಗೆ ಗ್ರಾಮಸ್ಥರು ಚಿಂತಿಸುವಂತಾಗಿದೆ..