ಯೂಟ್ಯೂಬ್ ನಲ್ಲಿ ವಿಲನ್ ಗಳ ದರ್ಬಾರ್..!! ಯಾರ ಟೀಸರ್ ಮುಂದಿದೆ ಗೊತ್ತಾ..?

ವಾಹಿನಿ ಸುದ್ದಿ ಸಿನಿಮಾ

ಯೂಟ್ಯೂಬ್ ನಲ್ಲಿ ವಿಲನ್ ಗಳ ದರ್ಬಾರ್..!! ಯಾರ ಟೀಸರ್ ಮುಂದಿದೆ ಗೊತ್ತಾ..?

ಇತ್ತೀಚೆಗೆ ಸಾಕಷ್ಟು ಕೂತೂಹಲ ಮೂಡಿಸಿದ ಚಿತ್ರಗಳಲ್ಲಿ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರ ಕೂಡ ಒಂದು. ಇಬ್ಬರು ನಟರ ಅಭಿಮಾನಿಗಳು ದಿ ವಿಲನ್ ಚಿತ್ರದ ಟೀಸರ್ ಗಾಗಿ ಕಾದು ಕುಳಿತಿದ್ದರು. ಕೊನೆಗೂ ಈ ಕುತೂಹಲಕ್ಕೆ ನಿನ್ನೆ ತೆರೆ ಬಿದಿದ್ದೆ. ಯಸ್, ದಿ ವಿಲನ್ ಚಿತ್ರದ ಎರಡು ಟೀಸರ್ ಗಳು ನಿನ್ನೆ ಸಂಜೆ ಖಾಸಗಿ ಮಾಲ್ ನಲ್ಲಿ ಬಿಡುಗಡೆಯಾಗಿವೆ.

ಬಂದೇ ಬಿಡ್ತು ಬಹು ನಿರೀಕ್ಷಿತ ಚಿತ್ರದ ಟೀಸರ್..!! ಹೇಗಿದೆ ನೋಡಿ ಶಿವಣ್ಣನ ಖದರ್..!

ಶಿವಣ್ಣ ಹಾಗೂ ಸುದೀಪ್ ಟೀಸರ್ ಗಳು ಪ್ರತ್ಯೇಕವಾಗಿ ಯ್ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದೆ. ಹೀಗೆ ಅಪ್ ಲೋಡ್ ಆದ ಕೆಲ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿವೆ.. ಸ್ಟಾರ್ ನಟರ ಅಭಿಮಾನಿಗಳು ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಅಲ್ಲದೆ ಟೀಸರ್ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ದಾಖಲೆ ಮಾಡಿ ಬಿಟ್ಟಿವೆ..

ಬಿಡುಗಡೆಗೊಂಡ‌ ಕಿಚ್ಚನ ದಿ ವಿಲನ್ ಟೀಸರ್ ಇಲ್ಲಿದೆ ನೋಡಿ…

ಯಾವ ನಟನ ಟೀಸರ್ ಎಷ್ಟು ವೀಕ್ಷಿಣೆಯಾಗಿದೆ?

ಶಿವಣ್ಣನ ರಾಮ ಕಮ್ ರಾವಣನ ಅವತಾರದಲ್ಲಿ ಕಾಣಿಸಿಕೊಂಡ ಟೀಸರ್ ಈಗಾಗಲೇ 7.15 ಲಕ್ಷ ಕ್ಕೂ ಅಧಿಕ ಜನ ವೀಕ್ಷಿಸಲ್ಪಟ್ಟಿದೆ.

ನಿರ್ದೇಶಕ ಪ್ರೇಮ್ ಪ್ರಕಾರ ಕನ್ನಡ ಚಿತ್ರರಂಗಕ್ಕೆ ಇವರೇ ಬಾಸ್ ಅಂತೆ..!!

ಇನ್ನು ಕಿಚ್ಚ ಸುದೀಪ್ ಕಾಣಿಸಿಕೊಂಡ ಮತ್ತೊಂದು ಟೀಸರ್ 15 ಗಂಟೆಗೆ 1 ಮಿಲಿಯನ್ ವ್ಯೂಸ್ ಆಗಿದೆ.  ಈ ಮೂಲಕ ಕಿಚ್ಚನ ಟೀಸರ್ ದಾಖಲೆಯತ್ತ ಮುಖ ಮಾಡಿದ್ದು, 24 ಗಂಟೆಗೂ ಮುನ್ನವೇ ಕಿಚ್ಚ ಟೀಸರ್ ದಾಖಲೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸದೊಂದು ಹವಾ ಕ್ರಿಯೇಟ್ ಮಾಡಿಬಿಟ್ಟಿದೆ..

ದರ್ಶನ್ D-BOSS ಆದ್ರೆ ನಾನು P-BOSS ಎಂದ ಪ್ರಥಮ್.! P ಬಾಸ್ ಅಂದ್ರೆ ಏನಂತೆ ಗೊತ್ತಾ.? ವಿಡಿಯೋ ನೋಡಿ