ಸಕ್ಸಸ್ ಕಂಡ ಸ್ಟ್ರೈಕರ್.. ಸ್ಟಾರ್ ಗಳಿಂದಲು ಚಿತ್ರಕ್ಕೆ ಜೈಕಾರ…

ಸಿನಿಮಾ

ಅಂದುಕೊಂಡ ಹಾಗೆ ಸ್ಟ್ರೈಕರ್ ಸಿನಿಮಾ ಗೆದ್ದು ಬೀಗಿದೆ.. ಬಿಡುಗಡೆಗು ಮೊದಲೆ ಮೂಡಿದ್ದ ಭರವಸೆಯನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.. ಚಿತ್ರದ ಸ್ಟೋರಿ ನೋಡುಗ ಪ್ರೇಕ್ಷಕರಿಗೆ ಫ್ರೆಶ್ ಫೀಲ್ ಕೊಡ್ತಿದ್ದು, ಅಬ್ಬ ಎಂತಹ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಎನ್ನುತ್ತಿದ್ದಾರೆ.. ಸ್ನೇಹಿತನನ್ನ ಕೊಲೆ ಮಾಡಿರುವಂತೆ ಕನಸುಕಂಡು, ಅದೇ ನಿಜವೆಂದು ತಿಳಿದು ನಾಯಕ ಏನೆಲ್ಲ ಸಮಸ್ಯೆ ಅನುಭವಿಸುತ್ತಾನೆ, ಹಾಗೆ ನಾಯಕ ತನ್ನ ಸ್ನೇಹಿತನ ಕೊಲೆ ರಸಹ್ಯವನ್ನ ಹೇಗೆ ಭೇದಿಸ್ತಾನೆ ಅನ್ನೋದೆ ಚಿತ್ರದ ಹೈಲೆಟ್..

ಪ್ರವೀಣ್ ತೇಜ್, ಭಜರಂಗಿ ಲೋಕಿ, ಶಿಲ್ಪಾ ಮಂಜುನಾಥ್ ಇಡೀ ಸಿನಿಮಾದುದಕ್ಕೂ ಉತ್ತಮ ಅಭಿನಯ ತೋರಿದ್ದಾರೆ.. ಭಜರಂಗಿ ಲೋಕಿ ಹಾಗೆ ಪ್ರವೀಣ್ ಕ್ಯಾರೆಕ್ಟರ್ ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತೆ.. ಅದರಲ್ಲು ಚಿತ್ರದ ನಿರ್ದೇಶಕ ಪವನ್ ತ್ರಿವಿಕ್ರಮ್ ಜಾಣ್ಮೆಗೆ ಸಲಾನ್ ಹೇಳಲೇಬೇಕು.. ಸ್ಕ್ರೀನ್ ಪ್ಲೇನಲ್ಲಿ ಹಿಡಿತವನ್ನ ಕಾಯ್ದುಕೊಂಡಿದ್ದಾರೆ. ಸ್ಟ್ರೈಕರ್ ಸಸ್ಪೆನ್ಸ್ ನ ಜೊತೆ ಜೊತೆಗೆ ಇಡೀ ಸಿನಿಮಾವನ್ನ ನೋಡಿಸಿಕೊಳ್ಳುತ್ತೆ..

ಬಿಜೆ ಭರತ್ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲೆಸ್ ಪಾಯಿಂಟ್.. ರಾಕೇಶ್ ಕ್ಯಾಮರ ವರ್ಕ್ ಇಷ್ಟವಾಗುತ್ತೆ.. ಇಂಟ್ರವೆಲ್ ಬ್ಲಾಕ್ ನಲ್ಲಿ ಸಿಗುವ ಟ್ವಿಸ್ಟ್ ಮುಂದೇನು ಎಂಬ ಕೌತುಕವನ್ನ ಮುಂದಿನ ಭಾಗಕ್ಕೆ ಕೊಂಡೊಯ್ಯುತ್ತದೆ.. ಒಟ್ಟಿನಲ್ಲಿ ಮೊದಲ ಮೂರು ದಿನಗಳು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದು, ಪ್ರೇಕ್ಷಕರನ್ನ ಥಿಯೇಟರ್ ಗೆ ಆಹ್ವಾನಿಸುತ್ತಿದೆ..