ಮತ್ತೆ ಮೋಡಿ ಮಾಡಿದ ಶ್ರೇಯಾ ಘೋಷಾಲ್ – ಮನೋಮೂರ್ತಿ ಜೋಡಿ.. ಹಾಡು ಸೂಪರ್ ಹಿಟ್..!!

ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾದ ಮನೋಮೂರ್ತಿ ಅವರಿಗೆ ವಿಶೇಷ ಸ್ಥಾನವಿದೆ.. ಅದರಲ್ಲು ಅವರನ್ನ ಹಾಡನ್ನ ಇಷ್ಟ ಪಡುವ ದೊಡ್ಡ ಸಂಗೀತ ರಸಿಕರ ಬಳಗವಿದೆ.. ಇನ್ನು ಮನೋಮೂರ್ತಿ ಹಾಗು ಗಾಯಕಿ ಶ್ರೇಯಾ ಘೋಷಾಲ್ ಅವರ ಕಾಂಬಿನೇಷನ್ ಬಂದ ಹಾಡುಗಳಂತು ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿವೆ.. ಈಗ ಇದೇ ಸಾಲಿಗೆ ಸವರ್ಣದೀರ್ಘ ಸಂಧಿ ಸಿನಿಮಾದ ಹಾಡೊಂದು ಸೇರುವ ಎಲ್ಲ ಲಕ್ಷಣಗಳು ಎದ್ದು ಕಾಣ್ತಿದೆ..

ಹೌದು, ಕೊಳಲಾದೆ ನಾ ಅಂತ ಶ್ರೇಯಾ ಘೋಷಾಲ್ ಹಾಡಿದ್ದು, ವೀರೇಂದ್ರ ಶೆಟ್ಟಿ ಸಾಹಿತ್ಯ ಬರೆದಿದ್ದು, ಮನೋಮೂರ್ತಿ ಅವರ ಸಂಗೀತ ಮಾಧುರ್ಯ ಹಾಡಿನ ಇಂಪನ ಮತ್ತಷ್ಟು ಹೆಚ್ಚಿಸಿದೆ.. ಸದ್ಯಕ್ಕೆ ಈ ಹಾಡಿನ ಲಿರಿಕ್ ವಿಡಿಯೋವನ್ನ ಬಿಡುಗಡೆಯಾಗಿದ್ದು, ಹಿಟ್ ಸಾಲಿಗೆ ಸೇರುವ ಎಲ್ಲ ಲಕ್ಷಣನ್ನ ನೀಡಿದೆ..

ಸವರ್ಣದೀರ್ಘ ಸಂಧಿ ಸಿನಿಮಾ ಕ್ರೈಮ್ ಆ್ಯಂಗಲ್ ನ ಜೊತೆಗೆ ಕಾಮಿಡಿ ಎಲಿಮೆಂಟ್ ಇರೋ ಚಿತ್ರ ಅನ್ನೋದು ಟ್ರೇಲರ್ ನಲ್ಲಿ ಎದ್ದು ಕಾಣ್ತಿದೆ.. ವೀರು  ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ, ವೀರೇಂದ್ರ ಶೆಟ್ಟಿಯ ಜೊತೆಗೆ ಕೃಷ್ಣ, ಪದ್ಮಜರಾವ್ ಸೇರಿದಂತೆ ಪ್ರತಿಭಾವಂತ ಕಲಾವಿದ್ರ ದಂಡೇ ಈ ಚಿತ್ರದಲ್ಲಿದೆ.. ಕೋಸ್ಟಲ್ ವುಡ್ ನಲ್ಲಿ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಕಮ್ ನಟ ವೀರೇಂದ್ರ ಶೆಟ್ಟಿ ಈ ಚಿತ್ರವನ್ನ ಕನ್ನಡ ಸಿನಿ ಪ್ರೇಮಿಗಳಿಗೆ ಸದ್ಯದಲ್ಲೆ ನೀಡಲ್ಲಿದ್ದು, ಆದಷ್ಟು ಬೇಗ ತೆರೆಗೆ ಬರಲು ಸಿದ್ದವಾಗಿದೆ..