ಲಾಕ್ ಡೌನ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಕಾಲವೇ ಮೋಸಗಾರ ಟೀಸರ್.

ವಾಹಿನಿ ಸುದ್ದಿ ಸಿನಿಮಾ

ಸ್ಯಾಂಡಲ್ ವುಡ್‌ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರ ಕಾಲವೇ ಮೋಸಗಾರ ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದೆ. ಲಾಕ್ ಡೌನ್ ನಡುವೆ ಎಲ್ಲೆಡೆ ಸದ್ದು ಮಾಡುತ್ತಿರುವ ಈ ಟೀಸರ್ ನಲ್ಲಿ ಲವ್, ಮಾಸ್, ಎಮೋಷನ್ಸ್ ಎಲ್ಲವೂ ಕಾಣಬಹುದು. ‌

ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಅವರ ಸ್ಟುಡಿಯೋದಲ್ಲಿ ಕಾಲವೇ ಮೋಸಗಾರ ಹಾಡುಗಳ ರೆಕಾರ್ಡಿಂಗ್ ಮಾಡಲಾಗಿದೆ. ಒಟ್ಟು ನಾಲ್ಕು ಹಾಡುಗಳಿದ್ದು, ಅಂಥೋನಿ ದಾಸ್, ಸಂಚಿತ್ ಹೆಗ್ಡೆ, ಅನುರಾದ ಭಟ್, ಇಂಚರಾ ರಾವ್ ಸೇರಿದಂತೆ ಪ್ರಮುಖ ಗಾಯಕರು ಹಾಡಿದ್ದಾರೆ.

ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಕಾಲವೇ ಮೋಸಗಾರ ಚಿತ್ರದಲ್ಲಿ ಯುವ ನಾಯಕ ನಟ ಭರತ್ ಸಾಗರ್ ಮತ್ತು ಯಶಸ್ವಿನಿ ಅಭಿನಯಿಸಿದ್ದಾರೆ. ಚಿತ್ರವನ್ನು ಸಂಜಯ್ ಎಂಬುವರು ನಿರ್ದೇಶಿಸಿದ್ದು, ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಯಶಸ್ವಿನಿ ರವೀಂದ್ರ, ಶಂಕರ್ ಮೂರ್ತಿ, ಬ್ಯಾಕ್ ಜನಾರ್ಧನ್, ಕುರಿಪ್ರತಾಪ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಭಾವಸ್ಪಂದನ ಪ್ರೊಡಕ್ಷನ್ ಹಾಗೂ ಬಿ.ಎಂ.ಡಬ್ಲ್ಯೂ ಬ್ಯಾನರ್​ನಡಿ ನಿರ್ಮಾಣವಾಗಿರುವ ಕಾಲವೇ ಮೋಸಗಾರ  ಪ್ರಮುಖವಾಗಿ ಯುವ ಮನಸ್ಸುಗಳನ್ನು ಆಕರ್ಷಿಸುತ್ತಿದೆ. ಒಟ್ಟಿನಲ್ಲಿ‌ ಅಪ್ಪಟ ಮಾಸ್ ಚಿತ್ರವಾಗಿರುವ ಕಾಲವೇ ಮೋಸಗಾರ ಟೀಸರ್ ಪವರ್ ಫುಲ್ ಆಗಿ ಮೂಡಿಬಂದಿದ್ದು, ಗಾಂಧಿ ನಗರದಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಚಿತ್ರತಂಡ ಶೀಘ್ರದಲ್ಲೇ ತೆರೆಗೆ ತರಲು ಎಲ್ಲಾ ರೀತಿ ತಯಾರಿ ಮಾಡಲಾಗಿದೆ..