ನಕ್ಕು ನಗಿಸೋ ಡಬ್ಶ್ಮಾಶ್ ಕಾಮಿಡಿ ಕಿಲಾಡಿ ನಿಖಿಲ್ ಗೌಡ ಸಂದರ್ಶನ.!!

ವಾಹಿನಿ ಸುದ್ದಿ

ಡಬ್ಶ್ಮಾಶ್ ಅನ್ನೋದು ಈಗ ಟ್ರೆಂಡ್ ಆಗಿದೆ.. ಹಲವರು ಡಬ್ಶ್ಮಾಶ್ ಗಳನ್ನ ತಮ್ಮದೇ ಶೈಲಿಯಲ್ಲಿ ಮಾಡಿ ಅಪ್ ಲೋಡ್ ಮಾಡ್ತಿದ್ದಾರೆ.. ಸಾವಿರದಲ್ಲಿ ಇದನ್ನ ಮಾಡೋರಿದ್ರು ಬೆರಳೆಣಿಕೆಯಷ್ಟು ಪ್ರತಿಭೆಗಳು ಮಾತ್ರ ಎಲ್ಲರ ಮನ್ನಣೆ ಪಡೆಯುತ್ತಿದ್ದಾರೆ.. ಹೀಗಾಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಹುಡುಗ ನಿಖಿಲ್ ಗೌಡ..

ನೀವು ಈ ಹುಡುಗನ ಹಲವು ಡಬ್ಶ್ಮಾಶ್ ವಿಡಿಯೋಗಳನ್ನ ನೋಡಿ ನಕ್ಕಿರುತ್ತೀರಿ.. ನಗಿಸುವವರ ಹಿಂದೆ ನೋವಿನ ದಿನಗಳು, ಘಟನೆಗಳು ಇರುತ್ತೆ.. ಅದು ನಿಖಿಲ್ ಜೀವನದಲ್ಲು ನಡೆದಿದೆ.. 7 ವರ್ಷಗಳ ಹಿಂದೆ ನಡೆದ ಆ ಘಟನೆ ಇನ್ನು ಕಾಡದೆ ಇರದು..

ಮೂಲತಃ ಶಿವಮೊಗ್ಗದವರಾದ ನಿಖಿಲ್ ಗೆ ತಾನು ಈ ಪರಿ ಡಬ್ಶ್ಮಾಶ್ ಮೂಲಕ ಗುರುತಿಸಿಕೊಳ್ತೀನಿ ಅನ್ನೋ ಆಲೋಚನೆಯೆ ಇರಲಿಲ್ಲ.. ಬಟ್ ಈಗ ನಿಖಿಲ್ ಡಬ್ಶ್ಮಾಶ್ ಗಳು ಜನರ ಮೆಚ್ಚುಗೆ ಗಳಿಸುತ್ತಿವೆ.. ಸಿಕ್ಕ ಸಿಕ್ಕ ಹಾಗೆ ವಿಡಿಯೋ ಮಾಡೋದಿಲ್ಲ ಈ ಹುಡುಗ.. ಅದಕ್ಕಾಗಿ ನಿಖಿಲ್ ಹಲವು ತಯಾರಿಗಳನ್ನ ಮಾಡಿಕೊಳ್ತಾರೆ..

ಡಬ್ಶ್ಮಾಶ್ ಮಾಡುವ ಮುನ್ನ ಮಾಡಿಕೊಳ್ಳುವ ತಯಾರಿ ಹೇಗಿರಬೇಕು..? ಡಬ್ಶ್ಮಾಶರ್ ಆಗಿ ಹೆಸರು ಮಾಡಲು ಏನು ಮಾಡಬೇಕು..? ಶಿವಮೊಗ್ಗದ ಹುಡಗನೊಬ್ಬ ಈಗ ಈ ಪರಿ ಹೆಸರು ಮಾಡಿದ್ದು ಹೇಗೆ..? ಸಿನಿಮಾ ಆಫರ್ ಸಿಕ್ಕಿದ್ಯಾ..? ಬಿಗ್ಬಾಸ್ ಹೋಗುವ ಹಂಬಲವಿದ್ಯಾ..? ಬಿಗ್ ಬಾಸ್ ಗೆ ಹೋಗ್ತೀರಾ ಅಂದ್ರೆ ಹೇಳಿದ್ದೇನು..? ಫ್ಯೂಚರ್ ಪ್ಲಾನ್ ಏನು..?ವಿಡಿಯೋ ನೋಡಿ..