ದಿ ವಿಲನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಸಿನಿಮಾ

ದಿ ವಿಲನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಮೊದಲೇ ಒಂದು ಲೆಕ್ಕ ಹಾಕಲಾಗಿತ್ತು… ಕನ್ನಡದಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವ ಮೂಲಕ ಹೊಸ ದಾಖಲೆಯನ್ನ ನಿರ್ಮಾಣ ಮಾಡಿ ಬಿಡುತ್ತೆ ಅನ್ನೋ ಲೆಕ್ಕಚಾರಕ್ಕೆ ಈಗ ಮತ್ತಷ್ಟು ಪುಷ್ಟಿ ಬಂದಂತ್ತಿದೆ… ಯಾಕಂದ್ರೆ ದಿ ವಿಲನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀರೊ ಆಗಿ ಹೊರಹೊಮ್ಮಿದ್ದಾನೆ…

ವಿಲನ್ ಚಿತ್ರ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ-ಶಿವಣ್ಣ

ಪ್ರೇಮ್ ಹಾಗೆ ನಿರ್ಮಾಪಕರಾದ ಮನೋಹರ್ ಪ್ಲಾನ್ ಪಕ್ಕ ವರ್ಕ್ಔಟ್ ಆಗಿದೆ.. ದಸರಾ ಹಬ್ಬ ಪ್ರಯುಕ್ತ ದೊಡ್ಡ ರಜೆ ಇದೆ.. ಸದ್ಯಕ್ಕೆ ಈಗ ಕನ್ನಡದ ದಿ ವಿಲನ್ ಸಿನಿಮಾಗೆ ಪಕ್ಕ ಎದುರಾಳಿಯಾಗಿ ಯಾವುದೇ ಸಿನಿಮಾ ಬಿಡುಗಡೆಗೊಂಡಿಲ್ಲ.. ಹೀಗಾಗೆ ವಿಲನ್ ಹಾವಳಿ 700ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಶುರುವಾಗಿದ್ದು, ಅಲ್ ಮೋಸ್ಟ್ ಎಲ್ಲ ಹೌಸ್ ಫುಲ್..

ಲೀಕ್ ಆಯಿತು ದಿ ವಿಲನ್ ಚಿತ್ರದ ದೃಶ್ಯಗಳು.. ಅಭಿಮಾನಿಗಳ ಈ ಹುಚ್ಚಾಟ್ಟಕ್ಕೆ ಬೇಸರಗೊಂಡ ಪ್ರೇಮ್ ಹೇಳಿದ್ದೇನು

ಇನ್ನೂ ಭಾನುವಾರದ ವರೆಗೂ ವಿಲನ್ ಅಬ್ಬರನ್ನವನ್ನ ಆರ್ಭಟವನ್ನ ನಿಲ್ಲಿಸೋಕೆ ಸಾಧ್ಯನೇ ಇಲ್ಲ.. ನಿನ್ನೆ ರಾತ್ರಿಯಿಂದಲೇ ವಿಲನ್ ಹಾವಳಿ ಶುರುವಾಗಿದೆ.. ಮಾರ್ನಿಂಗ್ 6,7,8 ಗಂಟೆಗೆ ಸಿನಿಮಾವನ್ನ ಪ್ರದರ್ಶನ ಮಾಡಲಾಗಿದೆ.. ಇದೆಲ್ಲ ವಿಲನ್ ಸಿನಿಮಾ ಒಂದೇ ದಿನದಲ್ಲಿ ಅತೀ ಹೆಚ್ಚು ಪ್ರದರ್ಶನವನ್ನ ಕಾಣಲು ಕಾರಣವಾಗಿದೆ…

ದಿ ವಿಲನ್ ಫಸ್ಟ್ ಷೋ ಪ್ರೇಕ್ಷಕ‌ ಸಿನಿಮಾದ ಬಗ್ಗೆ ಹೇಳಿದ್ದೇನು..? ವರ್ಕ್ಔಟ್ ಆಯ್ತ ಪ್ರೇಮ್ ಸೂತ್ರ..?

ಹೀಗಾಗೆ ದಿ ವಿಲನ್ ಕಲೆಕ್ಷನ್ ನಲ್ಲೂ ಕಮಾಲ್ ಮಾಡಿದೆ.. ಸದ್ಯಕ್ಕೆ ಇಂದಿನ ಇಡೀ ಷೋಗಳಿಂದ ಹರಿದು ಬಂದ ಹಣ ಮೊತ್ತ ಬರೋಬ್ಬರಿ 20 ಕೋಟಿಯಷ್ಟಂತೆ.. 20.5 ಕೋಟಿಯಷ್ಟು ಹಣವನ್ನ ಲೂಟಿ ಮಾಡಿದ್ದಾನಂತೆ ವಿಲನ್…

ಬಿಗ್ ಬಾಸ್​​ ಸೀಸನ್-6ಕ್ಕೆ ಕೌಂಟ್​ಡೌನ್. ಈ 3 ಸ್ಪರ್ಧಿಗಳು ಫಿಕ್ಸ್…

ಈ ಪರಿ ಹಣ ಗಳಿಕಗೆ ಮುಖ್ಯ ಕಾರಣ, ಒಂದು ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್ ಆಗಿರೋದು.. ಮತ್ತೊಂದು ಟಿಕೆಟ್ ರೇಟ್ ಜಾಸ್ತಿ ಮಾಡಿರೋದು.. ಜೊತೆಗೆ ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿರೋದು.. ಇದೇ ಕಾರಣದಿಂದ ದಿ ವಿಲನ್ ಗಳಿಕೆ ಗಗನದತ್ತ ಸಾಗಿದೆ… ಒಂದೇ ದಿನಕ್ಕೆ ಎಲ್ಲ ಸೆಂಟರ್ ಗಳ ಕಲೆಕ್ಷನ್ ಲೆಕ್ಕಚಾರ 20 ಕೋಟಿ ದಾಟಿದೆ ಎಂದಾದ್ರೆ, ಮುಂದಿನ ದಿನಗಳಲ್ಲಿ ಶಿವಣ್ಣ ಕಿಚ್ಚ ಹವಾ ಮತ್ಯಾವ ಹಂತದಲ್ಲಿ ಇರಲಿದೆ ಅನ್ನೋದನ್ನ ಊಹಿಸಿ ನೋಡಿ

ಶೂಟಿಂಗ್ ಸೆಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಶ್ಮಿಕಾ ಮಂದಣ್ಣ..!!!