ಜೊತೆ ಜೊತೆಯಲಿ ಸೀರಿಯಲ್ ಅನು ಕನ್ನಡದ ಖ್ಯಾತ ನಟಿಯ ತಂಗಿ. ಆ ನಟಿ ಯಾರು ಗೊತ್ತಾ…?

ಸಿನಿಮಾ

ಅನು ಸೀರಿಮನೆ ಅಂದ್ರೆ ಈಗ ಕಿರುತೆರೆಯಲ್ಲಿ ಚಿರಪರಿಚಿತ. ಹೌದು, ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅನು ಅಂತಾನೆ ಫೇಮಸ್ ಆಗಿರುವ ಮುದ್ದು ಮುಖದ ಚೆಲುವೆ ಈ ಮೇಘಾ ಶೆಟ್ಟಿ. ಮೂಲತಃ ಮಂಗಳೂರಿನವರಾದ ಮೇಘಾ ಶೆಟ್ಟಿ ಓದಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ. ಐಎಎಸ್ ಆಫೀಸರ್ ಆಗಬೇಕು ಎಂಬ ಕನಸು ಹೊತ್ತಿರುವ ಅನು ಈಗ ಆಕ್ಟಿಂಗ್ ಅತ್ತ ಮುಖ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಪರಿಚಯವಾದ ಮೇಘಾ ಶೆಟ್ಟಿ, ನಂತರ ಜೊತೆ ಜೊತೆಯಲಿ ಅನು ಪಾತ್ರಕ್ಕೆ ಆಯ್ಕೆಯಾದರು..  ಮೊದಲ ಬಾರಿಗೆ ನಟನೆ ಮಾಡಿದರು ಮೇಘಾ ಅವರಿಗೆ ಬಣ್ಣದ ಜಗತ್ತು ಹೊಸದಲ್ಲಾ. ಯಾಕೆಂದರೆ ಆಕೆ ಅಕ್ಕ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದರು. ಆಕೆ ಯಾರು ಗೊತ್ತಾ..?

ಹಾರ್ಧಿಕ ಶೆಟ್ಟಿ, ನಟ ನೀನಾಸಂ ಸತೀಶ್ ಅಭಿನಯದ ಲೂಸಿಯಾ ಚಿತ್ರದಲ್ಲಿ ಪ್ರಮುಖ ಪ್ರಾತ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಗಲಾಟೆ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಅಲ್ಲದೆ ತೆಲುಗು, ತಮಿಳಿನ ಚಿತ್ರರಂಗದಲ್ಲೂ ಕೂಡ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.