ಜೊತೆಜೊತೆಯಲಿ ಶೂಟಿಂಗ್ ಸ್ಪಾಟ್ ನಲ್ಲಿ ನಾಯಕಿ ಅನು ಹಾಗು ಮೀರಾ ಮಾಡ್ತಿರೋದೇನು?ವಿಡಿಯೋ ನೋಡಿ..

ಸಿನಿಮಾ

ದಿನದಿಂದ ದಿನಕ್ಕೆ ಜನಪ್ರಿಯತೆಯ ಉತ್ತುಂಗಕ್ಕೆ ಏರುತ್ತಿರುವ ಧಾರಾವಾಹಿ “ಜೊತೆಜೊತೆಯಲಿ” ಟಿಆರ್ ಪಿಯ ಲೆಕ್ಕದಲ್ಲಿ ಇತಿಹಾಸ ಬರೆದ ಜಿ ಟಿವಿ ಕನ್ನಡದ ಪ್ರೈಮ್ ಸೀರಿಯಲ್. ಶೀಘ್ರವಾಗಿ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ಈ ಧಾರಾವಾಹಿ, ಸ್ಟ್ರಿಕ್ಟ್ ನಾಯಕ ಆರ್ಯವರ್ಧನ್ ಹಾಗು ತುಂಟ ಹಾಗು ಮುಗ್ಧ ನಾಯಕಿ ಅನು ಹಾಗು ಇವರ ನಡುವೆ ಫೀಮೇಲ್ ವಿಲನ್ ಮೀರಾ ನಡುವೆ ನಡೆಯುತ್ತಿರುವ ಸನ್ನಿವೇಶಗಳಿಂದ ದಿನದಿಂದ ದಿನಕ್ಕೆ ಕುತೂಹಲಭರಿತವಾಗಿ ಜನರನ್ನು ರಂಜಿಸುತ್ತಿದೆ. ಹಲವಾರು ಭಿನ್ನಾಭಿಪ್ರಾಯಗಳನ್ನೂ ಮೀರಿ ನಾಯಕ ಆರ್ಯವರ್ಧನ್(ಅನಿರುದ್ಧ), ಅನುವನ್ನು ಮೀರಾಳಿಂದ ರಕ್ಷಿಸುವ ಅವನ ಗುಣವೇ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಆದರೆ ನಾವಿಲ್ಲಿ ಹೇಳಹೊರಟಿರೋದು ಜೊತೆಜೊತೆಯಲಿ ಆಫ್ ಸ್ಕ್ರೀನ್ ವಿಷ್ಯ. ಅನು ಪಾತ್ರಧಾರಿ ಮೇಘಾ ಶೆಟ್ಟಿ ಹಾಗು ಮೀರಾ ಪಾತ್ರಧಾರಿ ಮಾನಸ ಅರ್ಜುನ್ ಶೂಟಿಂಗ್ ಸ್ಪಾಟ್ ನಲ್ಲಿ ಬಹಳ ಗಂಭೀರವಾಗಿ ನಟಿಸಿದ್ದಾರೆ. ಅನು ಮೇಲೆ ಮೀರಾ ಕತ್ತಿ ಮಸೆಯುವ ಪಾತ್ರದಿಂದ ವಿಲನ್ ಪಾತ್ರಕ್ಕೆ ಬಣ್ಣ ತುಂಬಿದ್ದಾರೆ. ಆದರೆ ಶೂಟಿಂಗ್ ನಂತರದ ಬಿಡುವಿನ ವೇಳೆಯಲ್ಲಿ ಇವರಿಬ್ಬರು ಮಾಡಿರೋ ಟ್ರಿಕ್ ಟಾಕ್ ಈಗ ಇನ್ಸ್ಟಾಗ್ರಾಮ್ ನಲ್ಲಿ ಬಹಳವೇ ಸದ್ದು ಮಾಡ್ತಿದೆ. ನೀವೂ ನೋಡಿ ಮಜಾ ಮಾಡಿ.