ದಾಖಲೆಯ ಬೆಲೆಗೆ ಸೋಲ್ಡೌಟ್ ಆಯ್ತು ಏಕ್ ಲವ್ ಯಾ ಆಡಿಯೋ…

ಸಿನಿಮಾ

ವಿಲನ್ ಚಿತ್ರದ ನಂತರ ಏಕ್ ಲವ್ ಯಾ ಚಿತ್ರದಲ್ಲಿ ಬ್ಯೂಸಿಯಾಗಿರುವ ಜೋಗಿ ಪ್ರೇಮ್, ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ಚಿತ್ರ ಅಂದ್ರೆ ಅಲ್ಲಿ ಹಾಡುಗಳು ಹಬ್ಬ ಅಂತಾನೆ ಹೇಳಬಹುದು. ಇದೀಗ ಏಕ್ ಲವ್ ಯಾ ಚಿತ್ರದಲ್ಲೂ ಬೊಂಬಾಟ್ ಹಾಡುಗಳು ತಯಾರಿಯಾಗಿದೆ. ಇದೀಗ ಈ ಮ್ಯೂಸಿಕ್ ಬ್ರ್ಯಾಂಡಿಗೆ ಆಡಿಯೋ ಕಂಪನಿಗಳು ಮುಗಿಬಿದಿದೆ. ಏಕ್ ಲವ್ ಯಾ ಹಾಡುಗಳ ಆಡಿಯೋ ರೈಟ್ಸ್ ದಾಖಲೆ ಮಟ್ಟಕ್ಕೆ ಸೇಲ್ ಆಗಿದೆ.

ದಾಖಲೆಗಳ ಸರ್ದಾರ ಎಂದೇ ಖ್ಯಾತಿಯಾಗಿರುವ ಜೋಗಿ ಪ್ರೇಮ್ ಅವರಿಂದ ಮತ್ತೊಂದು ದಾಖಲೆಯಾಗಿದೆ. ಹೌದು, ದಾಖಲೆಯ ಬೆಲೆಗೆ ಏಕ್ ಲವ್ ಯಾ ಆಡಿಯೋ ಸೋಲ್ಡೌಟ್ ಆಗಿದೆ. 81 ಲಕ್ಷ ಕೊಟ್ಟು ಏಕ್ ಲವ್ ಯಾ ಆಡಿಯೋ ರೈಟ್ಸ್ ಖರೀದಿಸಿದೆ A2 ಮ್ಯೂಸಿಕ್ ಕಂಪನಿ. ಈ ಮೂಲಕ ಆಡಿಯೋ ಮಾರ್ಕೆಟ್ ನಲ್ಲಿ ಹೊಸ ದಾಖಲೆ ಬರೆದ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ. ಅಲ್ಲದೆ ಹೊಸ ನಾಯಕನ ಸಿನಿಮಾಗೆ ಸಿಕ್ತು ದಾಖಲೆಯ ಆಡಿಯೋ ಬೆಲೆ.

ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ, ರಕ್ಷಿತಾ ಫಿಲಂ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರೋ ಅದ್ಧೂರಿ ಸಿನಿಮಾ‌ ಈ ಏಕ್ ಲವ್ ಯಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಸಂಗೀತವಿದೆ. ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಅವ್ರ ಸಹೋದರ ರಾಣಾ ಅಭಿನಯದ ಚೊಚ್ಚಲ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಕುವರಿ ರೀಷ್ಮಾ ರಾಣಾಗೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.ಫೆಬ್ರುವರಿ 8ಕ್ಕೆ ಮೋಷನ್ ಪೋಸ್ಟರ್‌  ಹಾಗೂ ವ್ಯಾಲೆಂಟೈನ್ಸ್ ಡೇ ಚಿತ್ರದ ಟೀಸರ್ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ ಚಿತ್ರತಂಡ.