ಅನುಪಮಾಗೆ ಮುಟ್ಟಿ ನೋಡಿಕೊಳ್ಳುವಂತೆ ತನ್ನ ಶೈಲಿಯಲ್ಲಿ‌ ಟಾಂಗ್ ಕೊಟ್ಟ ಜೆಕೆ..!

ವಾಹಿನಿ ಸುದ್ದಿ ಸಿನಿಮಾ

ಅನುಪಮಾ ಬಿಗ್ ಬಾಸ್ ಮನೆಯಲ್ಲಿ ಇರುವ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ.. ಹಲವರು ಈಕೆ ಮನೆಯಿಂದ ಹೊರಬರಬೇಕು ಅಂದ್ರೆ ಮತ್ತಷ್ಟು ಜನ ಅನುಪಮ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಹೇಳುತ್ತಿದ್ದಾರೆ.. ಈಗಾಗೇ ಈಕೆ ಕೂಡ ಮನೆಯಲ್ಲಿ ಉಳಿದುಕೊಂಡು ಬಂದಿರೋದು.

ಬಟ್ ಈಗ ಮನೆಯಲ್ಲಿ ಮತ್ತದೆ ಎರಡು ಗುಂಪು ಜಾಲ್ತಿಯಲ್ಲಿದೆ.. ಒಂದು ಗುಂಪು ಗಾರ್ಡನ್ ನಲ್ಲಿ ಮತ್ತೊಂದು ಗುಂಪು ಲಿವಿಂಗ್ ಏರಿಯಾದಲ್ಲಿ.. ಚಂದನ್ ರಿಯಾಜ್, ನಿವೇದಿತಾ ಸಮೀರ್ ಹೊರಗಡೆ ಇದ್ರೆ, ಕೃಷಿ, ಅನುಪಮಾ, ಜೆಕೆ, ಶೃತಿ ಒಳಗೆ ಇರ್ತಾರೆ.. ಅನುಪಮಾ ಈ ಗುಂಪಿನಲ್ಲಿ ಹೆಚ್ಚಾಗಿರೋದು.

ರಿಯಾಜ್ ಪ್ರಕಾರ ಚಂದನ್ ಈ ಹುಡುಗಿಯನ್ನ ಮದುವೆ ಆಗಬೇಕಂತೆ… ಹುಡುಗಿ ಯಾರು ಅಂತ ಗೊತ್ತಾದ್ರೆ ನೀವೆ ಶಾಕ್ ಆಗ್ತೀರಾ..?

ಈ ನಡುವೆ ಅನುಪಮಾರ ಬಗ್ಗೆ ಸದ್ಯಕ್ಕೆ ಕೃಷಿ, ಜೆಕೆ ಹಾಗೆ ಶೃತಿಗೆ ಬೇಸರವಾಗಿದೆ.. ಅದು ಇಂದಿನ ಸಂಚಿಕೆಯಲ್ಲಿ ಹೊರ ಬಂತು.. ಕೃಷಿ ಟಾಸ್ಕ್ ವಿಚಾರವಾಗಿ ಅನುಪಮಾ ವಿರುದ್ಧ ಮಾತನಾಡಿದ್ರು.. ಆದರೆ ಟಾಸ್ಕ್ ಅನ್ನ ಹೊರತುಪಡಿಸಿ ಜೆಕೆ ತನ್ನದೇ ಶೈಲಿಯಲ್ಲಿ ಅನುಪಮಾಗೆ ಸರಿಯಾಗೆ ಹೇಳಿದ್ರು..

ನಿಮಗೆ ಇಷ್ಟ ಬಂದಾಗ ಮಾತಾಡ್ತೀರ.. ಇಷ್ಟ ಇಲ್ಲದೇ ಇದ್ದಾಗ ನಾವ್ ನಿಮ್ಮ ಜೊತೆ ಮಾತಾಡಬಾರ್ದು.. ನೀವೂ ತುಂಬಾ ಒಳ್ಳೆಯವರು.. ಯಾವ್ ಟೈಮ್ ನಲ್ಲೂ ಏನು ತಪ್ಪು ಮಾಡಲ್ಲ.. ಎಲ್ಲ ನಾವೇ ಮಾಡ್ತೀವಿ.. ನೀನ್ ನಿನ್ನ ಇಷ್ಟ ಬಂದ ಹಾಗೆ ಇರಬಹುದು..ನೀನ್ ಮಾತಾಡಿಸಿದಾಗ ಮಾತ್ರ ಮಾತಾಡ್ಬೇಕು ಇಲ್ಲ ಅಂದ್ರೆ ಸುಮ್ಮನೆ ಇರ್ಬೆಕು ಅಲ್ವ.. ಅಂತ‌‌ ಜೆಕೆ‌‌ ಕೇಳಿದ್ರು..

ಚಂದನ್ ಕಣ್ಣೀರಿಗೆ ಕಾರಣವಾದ ದಿವಾಕರ್..!! ಮಿಸ್ ಮಾಡದೆ ಓದಲ್ಲೇ ಬೇಕಾದ ಸ್ಟೋರಿ

ಇದಕ್ಕೆ ಕೃಷಿ ಕೂಡ ಸಾಥ್ ಕೊಟ್ರು.. ಅನುಪಮಾ ತನಗೆ ಬೇಕು ಅಂದಾಗ ಅವರೊಂದಿಗೆ ಕೂತು ಮಾತನಾಡುವುದು, ಅವರು ಮತನಾಡಲು ಹೋದಾಗ ಸರಿಯಾಗೆ ರೆಸ್ಪಾನ್ಸ್ ಮಾಡದೆ ಇರುವುದು ಜೆಕೆ ಕೋಪಕ್ಕೆ ಕಾರಣವಾಗಿತ್ತು.. ಆದರೆ ಜೆಕೆ ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ತನ್ನದೇ ಸ್ಟೈಲ್ ನಲ್ಲಿ ಅನುಪಮಾಗೆ ತನ್ನ ತಪ್ಪಿನ ಅರಿವು ಮೂಡಿಸಿದ್ದು ವಿಶೇವಾಗಿತ್ತು..

ಬಿಗ್ ಬಾಸ್ ಮನೆಯಲ್ಲಿ ಬೆಟ್ಟಿಂಗ್ ಕಟ್ಟಿದ ಜೆಕೆ ಈ ವಾರ ಮನೆಯಿಂದ ಹೊರಕ್ಕೆ..!!

Image courtesy : Colors Kannada HD

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.