ಈ ಶೂ ಬೆಲೆ 2ಲಕ್ಷ..! ಆದ್ರೂ ನಿಮಿಷದಲ್ಲೇ ಮುಗಿಬಿದ್ದು ಕೊಂಡುಕೊಂಡ ಗ್ರಾಹಕರು!! ಏನಿದೆ ಅಂತದ್ದು ಇದರಲ್ಲಿ ಗೊತ್ತಾ..?!

ಲೈಫ್‍ಸ್ಟೈಲ್

ಇದು ಒಂದು ಸೀಮಿತ ಆವೃತ್ತಿಯ ನೈಕ್ ಕಂಪೆನಿಯ ಸ್ನೀಕರ್‌ಗಳು ಅಂದರೆ ಶೂಗಳು!! ಇದನ್ನು ಸ್ಟಾಕ್‌ನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ, ಅಷ್ಟೂ ಸ್ಟಾಕ್ ಗಳು ಬೆಣ್ಣೆ ದೋಸೆಯಂತೆ ಮಾರಾಟವಾಯ್ತು!! ಶೂ ಬೆಲೆ 3,000 ಡಾಲರ್‌ಗಳ ಅಂದರೆ ಸುಮಾರು 2.13ಲಕ್ಷ ರೂಪಾಯಿಗಳು. ಇಷ್ಟು ದೊಡ್ಡ ಮೊತ್ತವಿರುವ ಈ ಶೂಗಳನ್ನು ಹೀಗೆ ಮುಗಿಬಿದ್ದು ಖರೀದಿ ಮಾಡಲು ಕಾರಣ ಏನು ಗೊತ್ತಾ?

ಇದರ ಹೆಸರು ‘ಜೀಸಸ್ ಶೂಸ್’. ಇದು ವಿಶಿಷ್ಟವಾದ ಬಿಳಿ ನೈಕ್ ಏರ್ ಮ್ಯಾಕ್ಸ್ 97 ಮಾದರಿಯ ಶೂಗಳು. ಇದನ್ನು ಬ್ರೂಕ್ಲಿನ್ ಮೂಲದ ಸೃಜನಶೀಲ ಕಂಪೆನಿಗಳಾದ ಎಂಎಸ್ಸಿಎಚ್ಎಫ್ ಮತ್ತು ಯುಎಸ್ಪಿ ಸೇರಿ ವಿನ್ಯಾಸಗೊಳಿಸಿದ್ದವು. ಇದರಿದ್ದ ವಿಶೇಷತೆ ಏನು ಗೊತ್ತಾ? ಇದರಲ್ಲಿ, ಬೈಬಲ್ ನಲ್ಲಿ ಹೇಳಿರುವ ಪವಿತ್ರ ಜೋರ್ಡಾನ್ ನದಿಯಿಂದ ನೀರನ್ನು ಈ ಶೂ ನಲ್ಲಿ ಸೇರಿಸಲಾಗಿದೆ. ಹತ್ತಿರದಿಂದ ಈ ಶೂವನ್ನು ಗಮನಿಸಿದರೆ ಈ ನೀರು ಕಾಣುತ್ತದೆ. ಇದಲ್ಲದೆ, ಈ ಬೂಟುಗಳ ಮೇಲೆ ಬೈಬಲ್ ನ ಪದ್ಯವೊಂದರ ಭಾಗದ ಸಂಖ್ಯೆ ಪ್ರಿಂಟ್ ಮಾಡಲಾಗಿದೆ. ಇದು ಯೇಸು ನೀರಿನ ಮೇಲೆ ನಡೆಯುವುದನ್ನು ವಿವರಿಸುವ ಭಾಗವಾಗಿದೆ. ಹಾಗೆಯೇ ಕ್ರಿಸ್ತನ ರಕ್ತವನ್ನು ಪ್ರತಿನಿಧಿಸಲು ಒಂದು ರಕ್ತದ ಬಿಂದುವನ್ನು ಪ್ರಿಂಟ್ ಮಾಡಲಾಗಿದೆ. ಹಾಗೆಯೇ ಸುಗಂಧ ದ್ರವ್ಯ-ಪರಿಮಳಯುಕ್ತ ಶೂ ಸೋಲ್ ಹಾಗು ಶೂ ಲೇಸ್ ನಲ್ಲಿ ಶಿಲುಬೆ ಹೀಗೆ ಹಲವು ಯೇಸುವಿಗೆ ಸಂಬಂಧಿಸಿದ ಆಕೃತಿಗಳನ್ನು ಮೂಡಿಸಲಾಗಿದೆ.

ಇನ್ನು ಈ ಶೂ ಪ್ಯಾಕ್ ನಲ್ಲೂ ಸಹ ಅಧಿಕೃತ ಪಾಪಲ್ ಮುದ್ರೆಯನ್ನು ಪ್ರಿಂಟ್ ಮಾಡಲಾಗಿದೆಯಂತೆ!. ಹೀಗೆ ಅನೇಕ ಧಾರ್ಮಿಕ ವಿಷಯಗಳನ್ನು ಮುದ್ರಿಸಿರುವ ಈ ಶೂ ನಿಜಕ್ಕೂ ಕ್ಷಣದಲ್ಲಿ ಮಾರಾಟವಾಗಿದೆಯಂತೆ!! ಅಡಿಡಾಸ್ ಕಂಪೆನಿಯು ಈ ಮೊದಲು ಶೂನಲ್ಲಿ ಅರಿಜೋನಾ ಐಸ್ ಟೀ ಹಾಕಿ ಮಾರಾಟ ಮಾಡಿದ್ದ ಟ್ರಿಕ್ ಅನ್ನೇ ಮಾರ್ಪಡಿಸಿ ಈ ಶೂ ಮಾರಾಟ ಮಾಡಿದ್ದಾರಂತೆ!. ಜನರಲ್ಲಿ ಇನ್ನೂ ಈ ರೀತಿಯ ಧಾರ್ಮಿಕ ಭಾವನೆಗಳು ಈ ರೀತಿಯ ಕಂಪೆನಿಗಳಿಗೆ ಲಾಭ ಮಾಡಿಕೊಡುತ್ತಿರುವ ಸಂಗತಿಯೇ ಆಶ್ಚರ್ಯವಾಗಿದೆ.!