ಈ ಇಬ್ಬರು ಸ್ಟಾರ್ ಕ್ರಿಕೆಟರ್ ಗಳು ಟಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ..

ಸ್ಪೋರ್ಟ್ಸ್

ಇಬ್ಬರು ಭಾರತೀಯ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮುಂಬರುವ ಚಿತ್ರ ‘ವಿಕ್ರಮ್ 58’ ಎಂದು ಹೆಸರಿಸಲಾಗಿರುವ ಪಠಾಣ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಈ ಚಿತ್ರವನ್ನು ಅಜಯ್ ಜ್ಞಾನಮುತ್ತು ನಿರ್ದೇಶಿಸಲಿದ್ದಾರಂತೆ. ಈ ಸೀಮ್ ಬೌಲರ್ ತನ್ನ ನಟನೆಯ ಚೊಚ್ಚಲ ಸುದ್ದಿಯನ್ನು ದೃಢೀಕರಿಸುವ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಹೊಸ ಸಾಹಸ ಮತ್ತು ಅದನ್ನು ಎದುರು ನೋಡುತ್ತಿರುವ ಹೊಸ ಸವಾಲು” ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಮತ್ತೊಂದೆಡೆ, ಹರ್ಭಜನ್ ಅವರು ಸಂತಾನಂ ನಾಯಕನಾಗಿರುವ ‘ಡಿಕ್ಕಿಲೂನಾ’ ಎಂಬ ಚಲನಚಿತ್ರದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಅದನ್ನು ಕಾರ್ತಿಕ್ ಯೋಗಿ ನಿರ್ದೇಶಿಸಲಿದ್ದಾರೆ. “ನನ್ನನ್ನು ಸಿನಿಮಾ ಲೋಕಕ್ಕೆ ಪರಿಚಯಿಸಿದ ಕೆಜೆಆರ್ ಸ್ಟುಡಿಯೋಸ್ ಗೆ ನಾನು ಆಭಾರಿ. ನಾನು ಈ ಸಂಬಂಧಕ್ಕೆ ಏನು ಹೇಳುವುದೋ ತಿಳಿಯದೆ ಮೂಕನಾಗಿದ್ದೇನೆ.” ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.

ಪಠಾಣ್ ಅವರು 2012 ರಿಂದ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಅವರು ಕೊನೆಯ ಬಾರಿಗೆ 2012 ರಲ್ಲಿ, ಶ್ರೀಲಂಕಾ ವಿರುದ್ಧ ಟಿ 20 ಪಂದ್ಯವನ್ನು ಆಡಿದ್ದರು. ಇವರು ಹರ್ಭಜನ್ ಸಿಂಗ್ ನಂತರ ಟೆಸ್ಟ್ ಹ್ಯಾಟ್ರಿಕ್ ಸಾಧಿಸಿದ ಎರಡನೇ ಭಾರತೀಯ ಬೌಲರ್. ಪಠಾಣ್ 29 ಟೆಸ್ಟ್ ಪಂದ್ಯಗಳನ್ನು ಆಡಿ 100 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಈ ವರೆಗೆ 102 ಏಕದಿನ ಪಂದ್ಯಗಳನ್ನು ಆಡಿ 173 ವಿಕೆಟ್‌ಗಳನ್ನು ಗಳಿಸಿದ್ದಾರೆ. 39 ವರ್ಷದ ಹರ್ಭಜನ್ ಸಿಂಗ್, ಕೊನೆಯ ಬಾರಿಗೆ ಭಾರತಕ್ಕಾಗಿ 2016 ರಲ್ಲಿ ಪಂದ್ಯ ಆಡಿದ್ದರು. ಈ ಸ್ಪಿನ್ನರ್ 236 ಏಕದಿನ, 103 ಟೆಸ್ಟ್ ಮತ್ತು 28 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 417 ವಿಕೆಟ್ ಕಬಳಿಸಿದ್ದಾರೆ. ಈಗ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅನ್ನು ಪ್ರತಿನಿಧಿಸುತ್ತಾ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸಕ್ರಿಯವಾಗಿದ್ದಾರೆ.