ಐಪಿಎಲ್ ಆಟಗಾರರ ಕೊರೊನ ಟೆಸ್ಟ್ ಗೆ 10 ಕೋಟಿ..!!

ಸ್ಪೋರ್ಟ್ಸ್

ಬಿಸಿಸಿಐನ ಪ್ರತಿಷ್ಠಿತ ಶ್ರೀಮಂತ ಟೂರ್ನಿ ಕೊರೊನಾ ನಡುವೆಯು ಟೇಕ್ ಆಫ್ ಆಗ್ತಿದೆ.. ಭಾರತದಿಂದ ಯುಎಇ ಗೆ ಐಪಿಎಲ್ ಎರಡನೆ ಬಾರಿ ಶಿಫ್ಟ್ ಆಗಿದ್ದು, ವಿಶ್ವ ಕ್ರಿಕೆಟ್ ನ ದಿಗ್ಗಜರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.. ಹೀಗಾಗೆ ಪ್ರತಿಯೊಬ್ಬ ಆಟಗಾರ ಕೊರೊನಾ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಬಿಸಿಸಿಐನ ಮೇಲಿದೆ..

ಅಪ್ಪಿತಪ್ಪಿ ಯಾವುದಾದರೂ ಒಬ್ಬ ಆಟಗಾರ ಕೋವಿಡ್ ಪಾಸಿಟಿವ್ ಆದರೆ ಅದರ ಪರಿಣಾಮ ಇಡೀ ತಂಡ ಹಾಗು ಟೂರ್ನಿಯ ಮೇಲೆ ಪರಿಣಾಮ ಬೀರಲಿದೆ.. ಹೀಗಾಗೆ ಇಡೀ ಟೂರ್ನಿಯನ್ನ ಯಶಸ್ವಿಯಾಗಿ ಮುಗಿಸಲು ತೀರ್ಮಾನಿಸಿರೋ ಬಿಸಿಸಿಐ ಬೇಕಾದ ಎಲ್ಲ ಪೂರ್ವ ಸಿದ್ದತೆಗಳನ್ನ ಮಾಡಿಕೊಂಡಿದೆ.. ಅದರಲ್ಲಿ ಮುಖ್ಯವಾಗಿ ಕೊರೊನಾದಿಂದ ಆಟಗಾರರನ್ನ ರಕ್ಷಿಸುವುದೆ ಆಗಿದೆ..

ಇದಕ್ಕಾಗಿ ಆಟಗಾರರನ್ನು ಟೆಸ್ಟ್ ಗೆ ಒಳಪಡಿಸಲು ಬರೋಬ್ಬರಿ 10 ಕೋಟಿ ಹಣವನ್ನ ವ್ಯಯಿಸಲಿದೆ.. ಈ ಮೂಲಕ 20 ಸಾವಿರದಷ್ಟು ಟೆಸ್ಟ್ ಅನ್ನ ಕೈಗೊಳ್ಳಲಿದೆ..

ಒಂದು ಟೆಸ್ಟ್ ಗೆ ಅಂದಾಜು 4000 ಹಣ ವ್ಯಯಿಸಲಿದೆ.. ಹೀಗಾಗೆ ಟೂರ್ನಿಯ ಉದ್ದಕ್ಕೂ ಟೆಸ್ಟ್ ಗಳು ನಡೆಯುವುದರಿಂದ 10 ಕೋಟಿ ಹಣವನ್ನ ಅದಕ್ಕಾಗಿಯೇ ಮೀಸಲಿಡಲಾಗಿದೆ..