ಮಲೇಷಿಯಾದ ರ್ಯಾಪರ್ ಯೋಗಿ ಧನಿಯಲ್ಲಿ ವಿಜಿ ಸಲಗದ ಟೈಟಲ್ ಸಾಂಗ್…!

ಸಿನಿಮಾ
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸದ್ದು ಮಾಡ್ತಿರುವ ಸಿನಿಮಾ ಅಂದ್ರೆ ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಚಿತ್ರ ಸಲಗ.. ಹೌದು, ಗಾಂಧಿನಗರದಲ್ಲಿ ಸಲಗ ಚಿತ್ರ ಹೊಸ ಸಂಚಲನವನ್ನು ಮೂಡಿಸಿದೆ. ಇದೀಗ ಸಲಗ ಚಿತ್ರತಂಡದಿಂದ ಹಾಟ್ ನ್ಯೂಸ್ ವೊಂದು ಹೊರ ಬಂದಿದೆ. ಅದುವೆ ಇಂಟರ್ ನ್ಯಾಷನಲ್ ಸಿಂಗರ್ ವಾಯ್ಸ್ ಲ್ಲಿ ಸಲಗ ಚಿತ್ರದ ಟೈಟಲ್ ಸಾಂಗ್ ಬರ್ತಿದೆ…
ಹೌದು, ದುನಿಯಾ ವಿಜಿ‌ ಅಭಿನಯದ ಸಲಗ ಚಿತ್ರಕ್ಕೆ ಇಂಟರ್ ನ್ಯಾಷನಲ್ ಸಿಂಗರ್ ಧ್ವನಿ‌ ನೀಡ್ತಿದ್ದಾರೆ. ಯಾರು ಆ ಸಿಂಗರ್ ಅಂತಿರಾ? ಅವರು ಬೇರೆ ಯಾರು ಅಲ್ಲ ಯೋಗಿ ಬಿ. ಇವರು ಮಲೆಷಿಯನ್ ರ್ಯಾಪರ್.  ‘ಟಗರು ಬಂತು ಟಗರು’ ಖ್ಯಾತಿಯ ಚರಣ್ ರಾಜ್ ಕಂಪೋಸ್ ನಲ್ಲಿ, ಈ ಇಂಟರ್ ನ್ಯಾಷನಲ್ ಸಿಂಗರ್ ಕಂಠದಲ್ಲಿ ಸಲಗನ ಟೈಟಲ್ ಟ್ಯ್ರಾಕ್ ಹಾಡು ಸಖತ್ತಾಗಿ ಮೂಡಿ ಬಂದಿದೆ ಎನ್ನಲಾಗಿದೆ.
ಈ ಹಿಂದೆ ರ್ಯಾಪರ್ ಯೋಗಿ ಅವರು ರಜನಿಕಾಂತ್ ಅಭಿನಯದ ‘ದರ್ಬಾರ್’, ‘ಕಾಲ’, ಧನುಷ್ ಅಭಿನಯದ  ‘ಪಟಾಸ್’ ಸಿನಿಮಾಗಳಲ್ಲಿ ಹಾಡಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಯೋಗಿ ಅವರನ್ನ‌ ನೋಡಲು ಸಂಗೀತ ನಿರ್ದೇಶಕ ಚರಣ್ ರಾಜ್ ಸ್ಟುಡಿಯೋಗೆ ಸ್ಯಾಂಡಲ್ ವುಡ್ ಸಿಂಗರ್ಸ್ ಸಂಚಿತ್ ಹೆಗ್ಡೆ ಸೇರಿದಂತೆ ಹಲವರು ಭೇಟಿ ನೀಡಿದರು.