ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ ಗೆ ಗಾಯ; ಅವರ ಬದಲಿಗೆ ಯಾರು ಗೊತ್ತಾ?

ಸ್ಪೋರ್ಟ್ಸ್

ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು, ದಕ್ಷಿಣ ಆಫ್ರಿಕಾ ವಿರುದ್ಧದ ಪೇಟಿಎಂ ಗಾಂಧಿ-ಮಂಡೇಲಾ ಟ್ರೋಫಿ ಟೆಸ್ಟ್ ಸರಣಿಯಿಂದ ತೆಗೆದುಹಾಕಲಾಗಿದೆ ಎಂಬ ಆಘಾತಕಾರಿ ಹೇಳಿಕೆಯನ್ನು ಬಿಸಿಸಿಐ ಹೇಳಿದೆ.

“ಟೀಮ್ ಇಂಡಿಯಾ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಬೆನ್ನು ಮೂಳೆಯಲ್ಲಿ ಸಣ್ಣ ಒತ್ತಡದ ಮುರಿತವಾಗಿದೆ. ನಿತ್ಯದ ರೇಡಿಯೋಲಾಜಿಕಲ್ ತಪಾಸಣೆಯಲ್ಲಿ ಇದು ಪತ್ತೆಯಾಗಿದೆ. ಇದನ್ನು ಎನ್‌ಸಿಎ ಯಲ್ಲಿ ಮತ್ತು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತದೆ ” ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊರಡಿಸಿದ ಹೇಳಿಕೆಯಲ್ಲಿ ವರದಿಯಾಗಿದೆ.

ಬುಮ್ರಾ ಬದಲಿಗೆ ಯಾರು?
ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಮೇಶ್ ಯಾದವ್, ಬುಮ್ರಾ ಅವರ ಸ್ಥಾನದಲ್ಲಿರುತ್ತಾರೆ ಎಂದು ಹೇಳಲಾಗಿದೆ. “ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ, ಉಮೇಶ್ ಯಾದವ್ ಅವರನ್ನು ಬುಮ್ರಾ ಅವರ ಬದಲಿಯಾಗಿ ಹೆಸರಿಸಿದೆ” ಎಂದು ಹೇಳಿಕೆ ತಿಳಿಸಿದೆ. ಈ ಪಂದ್ಯದ ತಂಡದಲ್ಲಿ ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಬ್ಮನ್ ಗಿಲ್ ಇರುತ್ತಾರೆ ಎಂದು ಹೇಳಲಾಗಿದೆ.