ಏನೇ ಮಾಡಿದ್ರೂ ಹಣ ಉಳಿಸೋಕೆ ಆಗ್ತಿಲ್ಲ ಅನ್ನೋರು ಯಾವ ರಾಶಿಯವರಾಗಿದ್ರೂ ಸರಿ ಈ ವಿಧಾನ ಅನುಸರಿಸಿ..

ಲೈಫ್‍ಸ್ಟೈಲ್

ಏನೇ ಮಾಡಿದ್ರೂ ಹಣ ಕೈಗೆ ಹತ್ತುತ್ತಿಲ್ಲ ಅನ್ನೋರು ಹಲವರಾದ್ರೆ, ಏನೂ ಮಾಡದೆ ಇದ್ರೂ ಹಣ ಕೆಲವರ ಬಳಿಯೇ ಸೇರುತ್ತಿರುವುದನ್ನು ನೀವು ಗಮನಿಸಿರಬಹುದು. ಏನ್ ಮಾಡೋದು ಗ್ರಹಚಾರ ಅಂತ ಸುಮ್ಮನಾಗಿಬಿಟ್ಟಿರುತ್ತೇವೆ. ಗ್ರಹಚಾರನ ಬದಲಿಸೋಕೆ ಆಗದಿದ್ರೂ ಗ್ರಹಗಳಿಂದ ಆಗೋ ಪರಿಣಾಮವನ್ನ ಕೊಂಚ ಮಟ್ಟಿಗೆ ತಗ್ಗಿಸಬಹುದು. ಇಲ್ಲಿ ಅಂತಹುದೇ ಕೆಲವು ವಿಧಾನಗಳನ್ನ ನೀಡಿದ್ದೇವೆ. ಆದಷ್ಟು ಅನುಸರಿಸಿ ಉತ್ತಮ ಲಾಭ ಪಡೆಯಿರಿ.

ಮೊದಲನೆಯದಾಗಿ ಕುಬೇರ ಲಕ್ಷ್ಮಿ ವ್ರತವನ್ನ ಆಚರಿಸಿ. ದಿನಂಪ್ರತಿ ಶ್ರೀಸೂಕ್ತವನ್ನ ಪಠಿಸಿ ದಿನ ಶುರು ಮಾಡಿ. 11 ಗೋಮತಿಚಕ್ರಗಳನ್ನು ಹಾಗು ಒಂದು ರೂಪಾಯಿಯ 11 ನಾಣ್ಯಗಳನ್ನು ತೆಗೆದುಕೊಂಡು ಹಾಗು ಇವುಗಳೊಂದಿಗೆ 6 ಖರ್ಜೂರಗಳನ್ನು ಒಂದು ಹಳದಿ ಬಟ್ಟೆಯಲ್ಲಿ ಇಟ್ಟು ಪೂಜೆ ಮಾಡುವಾಗ ಇದನ್ನು ಪೂಜಿಸಿ ಗಂಟುಕಟ್ಟಿ. ಒಂದು ಸಣ್ಣ ತಟ್ಟೆಯಲ್ಲಿ ನವಧಾನ್ಯಗಳನ್ನು ಇಟ್ಟು ಅದರ ಮಧ್ಯೆ ಈ ಗಂಟನ್ನಿಡಿ. ಇದರ ಮೇಲೆ ಒಂದು ಅಡಿಕೆಯನ್ನು ಇಟ್ಟರೆ, ಧನಲಾಭವಾಗುವುದೆಂದು ಹೇಳಲಾಗುತ್ತದೆ.

ಇನ್ನು ಶನಿವಾರದ ಸಾಯಂಕಾಲದಲ್ಲಿ 2 ದೊಡ್ಡ ಉದ್ದಿನವಡೆಗಳನ್ನು ಕುಂಕುಮ ಹಾಗು ಮೊಸರು ಹಾಕಿ, ಅವನ್ನು ಶ್ರೀ ಹರಿ ಸ್ವರೂಪವಾದ ಅರಳಿವೃಕ್ಷದ ಬುಡದಲ್ಲಿ ಇಟ್ಟು ತಿರುಗಿ ನೋಡದೆ ಬರಬೇಕು. ಈ ವಿಧಾನವನ್ನ ಸತತ 21 ದಿನಗಳು ಮಾಡಿದರೆ ಧನಲಾಭವಾಗುತ್ತದೆಂದು ಪುರಾಣಗಳು ಹೇಳುತ್ತದೆ.

ಇನ್ನು ವಾಸ್ತು ದೋಷದಿಂದ ನಿಮಗೆ ಹಣ ಉಳಿತಾಯವಾಗುತ್ತಿಲ್ಲವೆಂದರೆ ಈ ಕ್ರಮ ಅನುಸರಿಸಿ. ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ನವಿಲುಗರಿಯನ್ನು ಇಡೀ. ಇನ್ನು ಪುಷ್ಯಾ ನಕ್ಷತ್ರದ ಗುರುವಾರದಂದು ಅರಳಿವೃಕ್ಷವನ್ನು ಪೂಜಿಸಿ, ಹಾಲೆರೆದು ಮರಕ್ಕೆ 11 ಸುತ್ತು ದಾರ ಕಟ್ಟಿ. ನಂತರ ಹಾಲೆರೆದ ಬೇರನ್ನು ತಂದು ಮನೆಯ ಮುಖ್ಯದ್ವಾರಕ್ಕೆ ಅರಿಸಿನ ಕೊಂಬಿನ ಜೊತೆ ಸೇರಿಸಿ ಕಟ್ಟುವುದರಿಂದಲೂ ವಾಸ್ತು ದೋಷ ನಿವಾರಣೆಯಾಗಿ ಶುಭಫಲಗಳು ಹಾಗು ಧನಲಾಭವಾಗುತ್ತದೆಂದು ಹೇಳಲಾಗಿದೆ.