15 ನಿಮಿಷಗಳಲ್ಲಿ ಮಾಡಿ ಸವಿಯಾದ ಹೆಸರುಬೇಳೆ ಪಾಯಸ..ವಿಡಿಯೋ ನೋಡಿ

ಸವಿರುಚಿ

ಸುಲಭವಾಗಿ ಮಾಡಿ ಸವಿಯಾದ ಹೆಸರುಬೇಳೆ ಪಾಯಸ..ವಿಡಿಯೋ ನೋಡಿ

ಸಹಿ ಪಾದಾರ್ಥಗಳನ್ನ ಇಷ್ಟ ಪಡುವವರಿಗೆ ಪಾಯಸ ತುಂಬ ಇಷ್ಟವಿರುತ್ತದೆ.. ಪಾಯಸದಲ್ಲಿ ಹಲವು ಬಗೆಗಳಿವೆ.. ಒಂದಕ್ಕಿಂತ ಒಂದು ರುಚಿಕರ, ಸ್ವಾದಿಷ್ಟಕರವಾಗಿರುತ್ತವೆ.. ಅದರಲ್ಲೂ ಹೆಸರು ಬೇಳೆ ಪಾಯಸ ಎಲ್ಲರಿಗೂ ಇಷ್ಟವಾಗುವ ಹಾಗೆ ಬೇಗನೆ ಸಿದ್ದ ಮಾಡಬಹುದಾದ ಆಹಾರವಾಗಿದೆ.. ಇದನ್ನ ಮಾಡುವ ವಿಧಾನಗಳು, ಬೇಕಾಗಿರುವ ಸಾಮಗ್ರಿಗಳ ಬಗ್ಗೆ ಸಂಪೂರ್ಣ ವಿವರದೊಂದಿಗೆ, ವಿಡಿಯೋ ಸಹ ಇಲ್ಲಿದೆ ನೋಡಿ

ಬೇಕಾಗುವ ಪದಾರ್ಥಗಳು

ಹೆಸರುಬೇಳೆ – 1 ಬಟ್ಟಲು

ಹಾಲು – 1 ಬಟ್ಟಲು

ಸಕ್ಕರೆ/ಬೆಲ್ಲ – 1 ಬಟ್ಟಲು

ಏಲಕ್ಕಿ ಪುಡಿ –  ಸ್ವಲ್ಪ

ಬಾದಾಮಿ ಪೌಡರ್ – 1

ದ್ರಾಕ್ಷಿ, ಗೋಡಂಬಿಸ್ವಲ್ಪ

ತುಪ್ಪ – 3ರಿಂದ4 ಚಮಚ

ಮಾಡುವ ವಿಧಾನ

ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ನೀರನ್ನು ಹಾಕಿ‌ ಕುದಿಸಬೇಕು. ನಂತರ ಅದಕ್ಕೆ ಹೆಸರುಬೇಳೆ ಸೇರಿಸಿ ಬೇಯಲು ಬಿಡಿ.. ಶೇ. 75ರಷ್ಟು ಬೆಂದ ಹೆಸರುಬೇಳೆಗೆ ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ, ಸಂಪೂರ್ಣ ಕರಗುವವರೆಗೂ ಕೈಯಿಂದ ಕೆದಕುತ್ತಿರಬೇಕು.. ನಂತರ ಕಾದ ಹಾಲನ್ನು ಇದಕ್ಕೆ ಹಾಕಿ 5ರಿಂದ 10 ನಿಮಿಷ ಕುದಿಸಬೇಕು

ಪ್ಯಾನ್ವೊಂದನ್ನುತೆಗೆದುಕೊಂಡುಅದಕ್ಕೆಸ್ವಲ್ಪತುಪ್ಪವನ್ನುಹಾಕಿದ್ರಾಕ್ಷಿಹಾಗೂಗೋಡಂಬಿಯನ್ನುಸೇರಿಸಿಕೆಂಪಗೆಹುರಿದುಕೊಳ್ಳಬೇಕು. ಬೆಂದ ಹೆಸರುಬೇಳೆಗೆ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಬಾದಾಮಿ‌ ಪೌಡರ್ ಹಾಕಿ ಸ್ವಲ್ಪ ಕುದಿಸಿದರೆ ರುಚಿಕರವಾದ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.

ವಿಡಿಯೋ ನೋಡಿ