ವರಮಹಾಲಕ್ಷ್ಮಿ ಹಬ್ಬದಂದು ಮುತ್ತೈದೆಯರಿಗೆ ಅರಿಶಿನ ಕುಂಕುಮವನ್ನು ಶಾಸ್ತ್ರೋಕ್ತವಾಗಿ ಹೇಗೆ ನೀಡಬೇಕು ಗೊತ್ತಾ..? ಇಲ್ಲಿ ನೋಡಿ

ವಿಡಿಯೋ

ಸೌಭಾಗ್ಯದಾಯಿನಿ ಶ್ರೀ ವರಮಹಾಲಕ್ಷ್ಮಿ ದೇವಿಯ ಪ್ರೀತ್ಯರ್ಥ ಮನೆಗೆ 9 ಜನ ಸುಮಂಗಳೆಯರನ್ನು ಕರೆದು ಫಲ ತಾಂಬೂಲ ನೀಡುವುದು ಸಂಪ್ರದಾಯ. ಶ್ರಾವಣ ಮಾಸದ ಎರಡನೇ ಶುಕ್ರವಾರ ದೇವಿಯ ಪೂಜೆ ಕೈಗೊಳ್ಳುವುದು ಮೊದಲಿನಿಂದಲೂ ನಡೆದು ಬಂದಿದೆ. ಈ ದಿನ ಮನೆಗೆ ಬರುವ ಮುತ್ತೈದೆಯರಿಗೆ ಫಲ ತಾಂಬೂಲ ನೀಡುವ ಬಗ್ಗೆ ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ.

ಸಂಜೆ ವೇಳೆ ಸೂರ್ಯ ಮುಳುಗಿದ ಮೇಲೆ ದೇವಿಗೆ ಪೂಜೆ ಮಾಡಿ ಆಕೆಯನ್ನು ಬರಮಾಡಿಕೊಳ್ಳಬೇಕು. ನಂತರ 9 ಜನ ಮುತ್ತೈದೆಯರನ್ನು ಮನೆಗೆ ಕರೆದು ಮುತ್ತೈದೆ ಚಿನ್ನ ನೀಡಬೇಕು. ಅಂದರೆ ಅರಿಸಿನ ಕುಂಕುಮ.. ಅದನ್ನು ನೀಡುವ ವಿಧಾನ ಹೀಗಿದೆ. ಒಂದು ತಟ್ಟೆಯಲ್ಲಿ ಅರಿಶಿನ ಕುಂಕುಮ ಹಾಗೂ ಹೂಗಳನ್ನು ಇಡಿ. ಮತ್ತೊಂದು ತಟ್ಟೆಯಲ್ಲಿ 2 ಎಲೆ, 2 ಅಡಿಕೆ, 2ಬಾಳೆಹಣ್ಣು ಅಥವಾ ಕಾಶ್ಮೀರ ಫಲ (ದಾಳಿಂಬೆ) ಮೂಸಂಬಿ ಅಥವಾ ಸೇಬು ಈ ಹಣ್ಣನ್ನು ಇಟ್ಟು, 1 ನಾಣ್ಯ, 4 ಬಳೆ ಇಟ್ಟು ಒಟ್ಟು 5 ವಸ್ತುಗಳನ್ನು ಕೊಡಬೇಕು.ಇನ್ನು ಮುಖ್ಯವಾದ ವಿಚಾರ ಅಂದ್ರೆ ತಾಂಬೂಲ ನೀಡುವಾಗ ವೀಳ್ಯೇದೆಲೆಯ ತೊಟ್ಟಿನ ಭಾಗ ನಿಮ್ಮ ಕಡೆಗಿರಲಿ ಏಕೆಂದರೆ ತೊಟ್ಟಿನಲ್ಲಿ ಮೃತ್ಯುದೇವ ವಾಸಿಸುತ್ತಾನೆ ಎನ್ನುವುದು ಪುರಾಣ ಲಿಖಿತ.

ಇದರ ಮೇಲೆ ಕೊಡುವವರು ಅಕ್ಕಿ, ವಸ್ತ್ರ, ಖರ್ಜೂರ ನೀಡಬಹುದು. ಇನ್ನು ಮತ್ತೊಬ್ಬರಿಂದ ಸ್ವೀಕರಿಸಿದ ತಾಂಬೂಲವನ್ನ ಮೊದಲು ದೇವರ ಮುಂದೆ ಇಟ್ಟು ಸ್ವೀಕರಿಸತಕ್ಕದ್ದು. ಅರಿಶಿನ, ಕುಂಕುಮ, ಹೂವು, ಬಳೆ ತೊಟ್ಟುಕೊಳ್ಳಬೇಕು. ಹೀಗೆ ಪಡೆದ ಹಾಗೂ ನೀಡಿದ ಫಲ ತಾಂಬೂಲದಿಂದ ನಿಮ್ಮ ಸಂಕಲ್ಪ ಈಡೇರುತ್ತದೆ ಹಾಗೂ ವ್ರತ ಪೂರ್ಣವಾಗಿ ಸಕಲ ಇಷ್ಟಾರ್ಥ ನೆರವೇರುತ್ತದೆ ಎಂದು ಪುರಾಣ ಹೇಳುತ್ತದೆ.