ವಾತ ಹಾಗು ಮಲಬದ್ಧತೆಗೆ ಈ ಮನೆಮದ್ದನ್ನು ಮಾಡಿದರೆ ನಿಮ್ಮ ತೊಂದರೆ ಮಟಾಮಾಯ!!

ಲೈಫ್‍ಸ್ಟೈಲ್

ಭಾರತದಲ್ಲಿ ಆಹಾರವೇ ಔಷಧಿ ಹಾಗು ಔಷಧಿಯೇ ಆಹಾರ. ಇದು ಇಲ್ಲಿನ ಅನಾದಿಕಾಲದ ಆಯುರ್ವೇದ ಹಾಗು ಸಿದ್ದೌಷಧದ ಮೂಲತತ್ತ್ವ. ಹೌದು, ಹಾಗಾಗಿಯೇ ಸುಲಭವಾದ ಮನೆಯಲ್ಲೇ ಸಿಗುವ ವಸ್ತುಗಳಿಂದ ಮಾನವನ ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ಮದ್ದು ತಯಾರಿಸಿ ಉಪಯೋಗಿಸುತ್ತಿದ್ದನ್ನ ನಾವು ಮರೆಯಬಾರದು. ಹಿತ್ತಲ ಗಿಡ ಮದ್ದು ಅನ್ನೋದನ್ನು ಪ್ರೂವ್ ಮಾಡಬೇಕು. ಈಗ ಈ ಸರಣಿಗೆ ನಿಮಗೆ ಇಲ್ಲಿದೆ ಒಂದು ಬಹಳ ಸುಲಭ ಹಾಗು ಉಪಯುಕ್ತ ಟಿಪ್ಸ್.
ತಮಿಳುನಾಡು ಕೇರಳದಲ್ಲಿ ಕುಡಿಯಲು ಜೀರಿಗೆ ಹಾಕಿ ಕುದಿಸಿದ ನೀರನ್ನು ಕೊಡುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು. ಇದು ಯಾಕೆ ಅಂತ ಯಾವಾಗಲಾದರೂ ಯೋಚಿಸಿದ್ದೀರಾ?. ಊಟವಾದ ಬಳಿಕ ಆಹಾರ ಪಚನ ಕ್ರಿಯೆ ಸರಿಯಾಗಿ ಆಗಿ ಹೆಚ್ಚಿನ ಶಕ್ತಿ ಪಡೆಯಲು ಇದು ವಿಶೇಷವಾಗಿ ಸಹಾಯ ಮಾಡುತ್ತದೆ. ಈ ಜೀರಿಗೆ ಜಾತಿಯದೇ ಆದ ಸೋಂಪು ಕಾಳುಗಳನ್ನು ಇದೇ ಕಾರಣಕ್ಕೆ ತಿನ್ನುವುದು ಎನ್ನುವುದನ್ನು ಗಮನಿಸಬೇಕು. ಈಗ ನಾವು ಹೇಳಹೊರಟಿರುವುದು ಜೀರಿಗೆ ಕಾಳಿನ ಬದಲಿಗೆ ಜೀರಿಗೆ ಸೊಪ್ಪಿನ ಬಗ್ಗೆ.
ಇದೇನು ಇದರ ಬಗ್ಗೆ ನಾವು ಕೇಳೇ ಇಲ್ಲವಲ್ಲ ಅಂತೀರಾ? ಜೀರಿಗೆ ಕಾಳುಗಳನ್ನು ಕೆಲದಿನ ಕುಂಡಗಳಲ್ಲಿ ಹಾಕಿ ಚೆನ್ನಾಗಿ ನೋಡಿಕೊಂಡರೆ ಸಾಕು ನಿಮಗೆ ಕೊತ್ತಂಬರಿ ಸೊಪ್ಪಿನಂತೆ ಕಾಣುವ ಒಳ್ಳೆಯ ಹಸಿರು ಗಿಡ ನಿಮ್ಮ ಸಂಗಾತಿಯಾಗುತ್ತದೆ. ಈ ಗಿಡದಲ್ಲೇ ಇರೋದು ಈಗ ನಾವು ಹೇಳುತ್ತಿರುವ ಆರೋಗ್ಯ ಸಂಜೀವಿನಿ. ಈ ಸೊಪ್ಪನ್ನು ವಾತ, ಹೊಟ್ಟೆ ಉಬ್ಬರ, ಕೈಕಾಲು ಉಬ್ಬರ ಹಾಗು ಮಲಬದ್ದತೆ ನಿವಾರಣೆ ಹಾಗು ನಿಯಂತ್ರಣಕ್ಕೆ ಬಳಸಿ. ಈ ಸೊಪ್ಪಿನಿಂದ ಪಲ್ಯ ಮಾಡಿದರೆ ಥೇಟ್ ಸಬ್ಬಸಿಗೆ ಸೊಪ್ಪಿನ ಪಲ್ಯದಂತೆಯೇ ಇರುತ್ತದೆ. ಹಾಗೆ ರುಚಿ ಕೂಡ ಅನನ್ಯ. ಈ ಪಲ್ಯ ಮಾಡುವಾಗ ಹೆಚ್ಚಾಗಿ ಈರುಳ್ಳಿ ಸೊಪ್ಪು (ಹೂವು / ಕಾವು) ಹಾಕಿ ಪಲ್ಯ ಮಾಡಿ ನಿಯಮಿತವಾಗಿ ಬಳಸಿ ನೋಡಿ ನಿಮ್ಮ ಉದರ ಸಮಸ್ಯೆಗಳೆಲ್ಲವೂ ಕಾಲಕ್ರಮೇಣ ಮಂಗಮಾಯ.
ಇದೇ ರೀತಿಯ ಆರೋಗ್ಯ ಮಾಹಿತಿಯ ಬಗ್ಗೆ ಹೆಚ್ಚು ತಿಳಿಯಲು ಈ ತಾಣಕ್ಕೆ ಸಬ್ಸ್ಕ್ರೈಬ್ ಮಾಡಿ.