ಅವನೇ ಶ್ರೀಮನ್ನಾರಾಯಣನಿಗೆ ತೆಲುಗಿನ ಸ್ಟಾರ್ ರೈಟರ್ ಲಿರಿಕ್ಸ್..

ಸಿನಿಮಾ

ಈ ಎರಡು ಸಿನಿಮಾಗಳ ಹಾಡುಗಳು ಹಿಟ್ ಲೀಸ್ಟ್ ಸೇರಿಕೊಂಡಿವೆ.. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲು ಸದ್ದು ಮಾಡಿದ ಈ ಸಿನಿಮಾದ ಹಾಡುಗಳಿಗೆ ತೆಲುಗಿನಲ್ಲಿ ಸಾಹಿತ್ಯ ಬರೆದಿದ್ದವರು ರಾಮಜೋಗಯ್ಯ ಶಾಸ್ತ್ರಿ ಅವರು.. ತೆಲುಗಿನಲ್ಲಿ ದೊಡ್ಡ ಹೆಸರು ಪಡೆದಿರುವ ಈ ಚಿತ್ರ ಸಾಹಿತಿ ಬರೆದ ಒಂದೊಂದು ಹಾಡುಗಳು ಕೂಡ ಯಶಸ್ಸು ಕಂಡಿವೆ.. ಬಿಗ್ ಸ್ಟಾರ್ ಸಿನಿಮಾಗಳಲ್ಲಿ ಇವರು ಬರೆದ ಹಾಡೊಂದು ಇದ್ದೆ ಇರುತ್ತೆ ಅಂದ್ರೆ ಅಲ್ಲಿಗೆ ಇವರ ಹಾಡಿನ ಸಾಹಿತ್ಯದ ಗಮ್ಮತ್ತು ಹೇಗಿರುತ್ತೆ ಅನ್ನೋದನ್ನ ಯೋಚಿಸಿ ನೋಡಿ..

ಈಗ ಇದೇ ಗೀತರಚನೆಕಾರ ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡದ ಮತ್ತೊಂದು ಬಹು ತಾರಾಗಣದ ಚಿತ್ರ ‘ಅವನೇ ಶ್ರೀಮನ್ನಾರಾಯಣ’ದ ತೆಲುಗು ಗೀತೆಗಳಿಗೆ ಗೀತ ರಚನೆ ಮಾಡುತ್ತಿದ್ದಾರೆ.. ಈ ವಿಚಾರವನ್ನ ಈ ಗೀತಸಾಹಿತಿಯೆ ಹೇಳಿಕೊಂಡಿದ್ದು, ಚಿತ್ರಕಥೆ ಹಾಗು ಸಿನಿಮಾದ ಮೇಕಿಂಗೆ ಮಾರು ಹೋಗಿದ್ದಾರೆ..

ಸಚಿನ್ ರವಿ ನಿರ್ದೇಶನ ಮಾಡಿರೋ ಈ ಸಿನಿಮಾವನ್ನ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದು, ಶಾನ್ವಿ ಶ್ರೀವಾಸ್ತವ ರಕ್ಷಿತ್ ಜೊತೆಯಾಗಿದ್ರೆ, ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮೋಹನ್ ಮುಖ್ಯಭೂಮಿಕೆಯಲ್ಲಿದ್ದು ಡಿಸಂಬರ್ ಗೆ ತೆರೆಗೆ ಬರುವ ಸಾಧ್ಯತೆಗಳಿದೆ..