ಮಾಸ್ ಹೀರೋಗಳಿಗೆ ಆರೆಂಜ್ ಟ್ರೇಲರ್ ಮೂಲಕ ಮಸ್ತ್ ಕೌಂಟರ್ ಕೊಟ್ರು ಗಣಿ..!!

ಸಿನಿಮಾ

ಮಾಸ್ ಹೀರೋಗಳಿಗೆ ಆರೆಂಜ್ ಟ್ರೇಲರ್ ಮೂಲಕ ಮಸ್ತ್ ಕೌಂಟರ್ ಕೊಟ್ರು ಗಣಿ..!!

ಗೋಲ್ಡನ್ ಸ್ಟಾರ್ ಗಣೇಶ್ ಆರೆಂಜ್ ಸಿನಿಮಾದ ಮೂಲಕ ಮಾಸ್ ಆಗಿ ಕೂಡ ಕ್ಲಾಸ್ ಆಗಿ ಕಾಣ್ತಿದ್ದಾರೆ.. ಸದ್ಯಕ್ಕೆ ಇಂದು ಬಿಡುಗಡೆಯಾಗಿರುವ ಟ್ರೇಲರ್ ಖಡಕ್ ಆಗಿದೆ.. ಫೇರ್ ಆಗಿದ್ದ ಮಾತ್ರಕ್ಕೆ ಫೈಯರ್ ಇಲ್ಲ ಅಂತಲ್ಲ.. ನಗಿಸೋನಿಗೆ ಅಳಿಸೋದು ದೊಡ್ಡ ವಿಷ್ಯ ಅಲ್ಲವೇ ಅಲ್ಲ ಅಂತ, ಮಾಸ್ ಹೀರೊ ಆಗಿ ಎಂಟ್ರಿಕೊಟ್ಟಿದ್ದಾರೆ.. ಮೊದಲೇ ಸ್ಟೈಲಿಶ್ ಆಗಿ ಕಾಣೋ ಗಣಿ, ಆರೆಂಜ್ ನಲ್ಲಿ ಮಾಸ್ ಅವತಾರದಲ್ಲಿ ಮೋಡಿ ಮಾಡ್ತಿದ್ದಾರೆ.. ಪ್ರಶಾಂತ್ ರಾಜ್ ಜೂಮ್ ಬಳಿಕ ಗಣೇಶ್ ಅವರಿಗೆ ಮತ್ತಷ್ಟು ಮಾಸ್ ಫೀಲ್ ಕೊಟ್ಟಿದ್ದು, ಡೈಲಾಗೆ ತಕ್ಕ ಖದರ್, ಅದಕ್ಕೆ ತಕ್ಕ ಬಾಡಿ ಲಾಗ್ವೇಜ್, ಅದರಲ್ಲು ಗೋಲ್ಡನ್ ಹುಡುಗನ ಸ್ಟೈಲ್ ಎಲ್ಲವು ಗಣಿ ಮಾಸ್ ಮಹಾರಾಜನೇ ಬಿಡು ಗುರು ಎನ್ನುವಂತಿದೆ..

ಪ್ರಶಾಂತ್ ರಾಜ್ ಮೇಕಿಂಗ್ ಸ್ಟೈಲ್ ತುಂಬಾ ಡಿಫರೆಂಟ್ ಅನ್ನೋದಕ್ಕೆ ಈ ಚಿತ್ರದ ಟ್ರೇಲರ್ ಮತ್ತೆ ಸಾಕ್ಷಿಯಾಗ್ತಿದೆ.. ಪ್ರತಿಯೊಂದು ಫ್ರೇಮ್ ನಲ್ಲು ಕ್ವಾಲಿಟಿ ಮೇಕಿಂಗ್ ಎದ್ದು ಕಾಣ್ತಿದೆ.. ಮತ್ತೆ ಪ್ರಶಾಂತ್ ರಾಜ್ ಆರೆಂಜ್ ಮೂಲಕ ಗೆಲುವಿಗೆ ಜೂಮ್ ಹಾಕಿದ್ದಾರೆ ಅನ್ನೋದು ಈ ಮೂಲಕ ಸಾಭೀತಾಗುತ್ತಿದೆ..ಇನ್ನೂ ಗೋಲ್ಡನ್ ಸ್ಟಾರ್ ಗೆ ರಾಜಕುಮಾರನ ರಾಣಿ ಪ್ರಿಯ ಆನಂದ್ ಜೋಡಿಯಾಗಿದ್ದಾರೆ.. ಇಬ್ಬರು ಫ್ರೇಮ್ ನಲ್ಲಿ ಕ್ಯೂಟ್ ಆಗಿ ಕಾಣ್ತಿದ್ದು, ಫ್ರೆಶ್ ಫೀಲ್ ನೀಡ್ತಿದ್ದಾರೆ.. ಗಣಿ ಈಕೆಯನ್ನ ನೋಡೋದೆ ಆರೆಂಜ್ ಬಟ್ಟೆಯಲ್ಲಿ, ಆಮೇಲೆ ಆಕೆ ಕೊಡುವ ಆರೆಂಜ್ ಹೀಗೆ ಸಿನಿಮಾದ ಟೈಟಲ್ ಗೂ ಈ ಆರೆಂಜ್ ಆದೇನೊ ಲಿಂಕ್ ಇಟ್ಟು, ಈಗ್ಲೇ ಪ್ರೇಕ್ಷಕರ ತಲೆಗೆ ಹುಳ ಬಿಡ್ತಿದ್ದಾರೆ ಡೈರೆಕ್ಟರ್

ಅಕ್ಷನ್ ಆಯ್ತು ಲವ್ ಆಯ್ತು, ಕಾಮಿಡಿಗೆ ಸಾಧು ಮಹರಾಜ್, ರಂಗಾಯಣ ರಘು, ರವಿಶಂಕರ್ ಇದ್ದಾರೆ.. ಸಾಧುಕೋಕಿಲಾ ಈ ಬಾರಿ ಮತ್ತಷ್ಟು ಭಿನ್ನ ಗೆಟಪ್ ತೊಟ್ಟಿದ್ದಾರೆ.. ಇನ್ನೂ ಗಣಿ ಮಾಸ್ ಗೆಟಪ್ ಗೆ ಸೂಟ್ ಆಗುವ ವಿಲನ್ ಸಹ ಸಿನಿಮಾದಲ್ಲಿದ್ದು ಮಗಧೀರ ಖ್ಯಾತಿಯ ದೇವ್ ಗಿಲ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ರವಿವರ್ಮಾ ಫೈಟ್ ಕಂಫೋಸ್ ಮಾಡಿದ್ದು, ಗಣಿ ಸಹ ಸಖತ್ತಾಗೆ ಸ್ಟೆಂಟ್ ಮಾಡಿದ್ದಾರೆ.. ಇದು ಸಿನಿಮಾದ ತಾಕತ್ತನ್ನ ಮತ್ತಷ್ಟು ಹೆಚ್ಚಿಸಿದೆ..

ಗಣೇಶ್ ಸಿನಿಮಾ ಅಂದ್ರೆ ಅಲ್ಲಿ ಹಾಡುಗಳು ಮೋಡಿ ಮಾಡೋದು ಕಾಮನ್.. ಇಲ್ಲು ಸಹ ಎಸ್.ಎಸ್.ತಮನ್ ಸಂಗೀತದಲ್ಲಿ ಆರೆಂಜ್ ಸಾಂಗ್ ಹಿಟ್ ಲೀಸ್ಟ್ ಸೇರಿಬಿಟ್ಟಿವೆ.. ಒಟ್ಟಾರೆ ಗಣಿಯ ಆರೆಂಜ್ ಪಕ್ಕಾ ಪ್ಯಾಕೆಡ್ ಮನರಂಜನೆಯ ರಸದೌತಣದಂತಿದ್ದು, ಡಿಸೆಂಬರ್ 7ಕ್ಕೆ ತೆರೆಗೆ ಬರ್ತಿದೆ