ಈ ವರ್ಷದ ಅಂತ್ಯಕ್ಕೆ ಗಗನಕ್ಕೇರಿರುವ ಚಿನ್ನದ ಬೆಲೆ 10 ಗ್ರಾಂಗೆ 40 ಸಾವಿರಕ್ಕೆ ಇಳಿಯಲಿದೆ

ಲೈಫ್‍ಸ್ಟೈಲ್ ವಾಹಿನಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಸಂಕಷ್ಟ ಶುರುವಾದಾಗಿನಿಂದ ಚಿನ್ನದ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಜನ ಆತಂಕವಿದ್ದರೂ ಚಿನ್ನವನ್ನು ಕೊಳ್ಳುವುದನ್ನು ನಿಲ್ಲಿಸಿಲ್ಲ. ಚಿನ್ನದ ಮೇಲೆ ಹೂಡಿಕೆಯನ್ನು ಮಾಡುವುದನ್ನು ನಿಲ್ಲಿಸಿಲ್ಲ. ಈ ಕಾರಣದಿಂದಾಗಿ 10 ಗ್ರಾಂ ಚಿನ್ನದ ಬೆಲೆ ಹತ್ತಿರ ಹತ್ತಿರ  50000 ಮುಟ್ಟಿದೆ. ದಿನದಿಂದ ದಿನಕ್ಕೆ ಕೊರೋನಾ ಭಯ ಇಳಿಮುಖ ವಾಗ್ತಾ ಇರೋದ್ರಿಂದ ಚಿನ್ನದ ಹೊರತಾಗಿಯೂ ಜನ ಹೂಡಿಕೆ ಮಾಡುವುದನ್ನು ಶುರು ಮಾಡಿದ್ದಾರೆ. ಹಾಗಾಗಿ ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ 40,000ವನ್ನು ತಲುಪಲಿದೆ.

ಏಪ್ರಿಲ್ ಆರಂಭದಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3000 ಡಾಲರ್ ಇತ್ತು. ಆದರೆ ಇಂದಿಗೆ ಕೇವಲ 1900 ಡಾಲರ್ ಪ್ರತಿ ಔನ್ಸ್ ಗೆ ಚಿನ್ನದ ಬೆಲೆಯಾಗಿದೆ.ಇದೇ ರೀತಿ ಮುಂದುವರೆದರೆ ಈ ವರ್ಷದ ಅಂತ್ಯಕ್ಕೆ ಚಿನ್ನ ಮೊದಲಿನ ತರವೇ ಪ್ರತಿ 10 ಗ್ರಾಂಗೆ ನಲವತ್ತು ಸಾವಿರ ರೂಪಾಯಿಗಳಿಗೆ ಬಂದು ನಿಲ್ಲಲಿದೆ ಅಂತ ತಜ್ಞರು ಹೇಳ್ತಾರೆ.