ಚಂದನವನದ ಸ್ಪೆಷಲ್ ಸಿನಿಮಾ ‘ಗಂಧದ ಕುಡಿ’ ಇದೇ 29ಕ್ಕೆ ರಿಲೀಸ್..!

ಸಿನಿಮಾ

ಕನ್ನಡದಲ್ಲಿ ಇದುವರೆಗು ಹಲವು ಮಕ್ಕಳ ಸಿನಿಮಾಗಳ ಬಂದು ಹೋಗಿವೆ.. ಅವುಗಳಲ್ಲಿ ನೆನಪಿನಲ್ಲಿ ಉಳಿದಿರುವವು ಕೆಲವೇ ಕೆಲವು.. ಇದೇ ರೀತಿ ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ಉಳಿಯುವ ಸಾಲಿಗೆ ಸೇರುವ ಚಿತ್ರವಾಗಿ ಗುರುತಿಸಿಕೊಳ್ತಿದೆಗಂಧದ ಕುಡಿ’ ಸಿನಿಮಾ..

ಸಂತೋಷ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಿವಧ್ವಜ್, ನಿಧಿ ಶೆಟ್ಟಿ ಹಾಗು ಹಿರಿಯ ನಟರಾದ ರಮೇಶ್ ಭಟ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ, ಕನ್ನಡದ ಈಗಂಧದ ಕುಡಿಈಗ ಹಿಂದಿಗೆಚಂದನ್ ವನ್ಹೆಸರಿನಲ್ಲಿ ಡಬ್ ಆಗಿದೆ.. ಈ ಮೂಲಕ ಕನ್ನಡದ  ಮತ್ತೊಂದು ಸಿನಿಮಾ ಹಿಂದಿಗೆ ಡಬ್ ಆಗುವ ಮೂಲಕ ಹೊಸ ಕುತೂಹಲವನ್ನ ಹುಟ್ಟು ಹಾಕ್ತಿದೆ..

ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದು, ಹಾಡುಗಳು ಕೇಳುಗರನ್ನ ಅಟ್ರ್ಯಾಕ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಸತ್ಯೇಂದ್ರ ಪೈ ಹಾಗು ಕೃಷ್ಣ ಮೋಹನ್ ಪೈ ನಿರ್ಮಾಣದಲ್ಲಿಗಂಧದ ಕುಡಿನಿರ್ಮಾಣವಾಗಿದೆ..  ಇನ್ನೂ ಹೈದ್ರಾಬಾದ್ ನಲ್ಲಿ ನಡೆದ ಇಂಡಿಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಸಿನಿಮಾಟೋಗ್ರಾಫಿ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.. ಇದಿಷ್ಟೆ ಅಲ್ಲ ಕೆಲವು ಪ್ರಶಸ್ತಿಗಳನ್ನ ಪಡೆಯುವಲ್ಲಿ ಯಶಸ್ವಿಯಾಗಿರುವಗಂಧದ ಕುಡಿಇದೇ ಮಾರ್ಚ್ 29 ಕ್ಕೆ ತೆರೆಗೆ ಬರ್ತಿದೆ..