ಏಕ್ ಲವ್ ಯಾ ಸೆಟ್ ನಲ್ಲಿ ಬೆಳಕಿನ ಹಬ್ಬದ ಸಂಭ್ರಮ..

ಸಿನಿಮಾ

ಏಕ್ ಲವ್ ಯಾ.. ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನ ಮಾಡ್ತಿರೋ, ರಕ್ಷಿತಾ ಅವರ ಸಹೋದರ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸಿನಿಮಾ.. ಪ್ರೇಮ್ಸ್ ಅವರ ಸಿನಿಮಾ ಅಂದಮೇಲೆ ಅದರ ಸೌಂಡ್ ಸ್ವಲ್ಪ ಜೋರಾಗೆ ಇರುತ್ತೆ.. ಇನ್ನು ದೀಪಾವಳಿ ಟೈಮ್ ನಲ್ಲಿ ಕೇಳಬೇಕಾ..? ಪ್ರೇಮ್ ಹಾಗು ಇಡೀ ಚಿತ್ರತಂಡ ಹಬ್ಬವನ್ನ ಸೆಟ್ ನಲ್ಲಿ ಆಚರಿಸುವ ಮೂಲಕ ಸಮಸ್ತ ಕನ್ನಡ ಜನತೆಗೆ ಹಬ್ಬದ ಶುಭಾಶಯಗಳನ್ನ ಹೇಳಿದೆ..

ನಾಯಕನಾಗಿ ಅಭಿನಯಿಸುತ್ತಿರುವ ನಟ ರಾಣಗೆ ಡಿಂಪಲ್ ಕ್ವೀನ್ ರಚಿತಾ ನಾಯಕಿಯಾಗಿದ್ದಾರೆ.. ಇನ್ನು ಹಬ್ಬದ ಸೆಲಬ್ರೆಷನ್ ಸಂದರ್ಭದಲ್ಲಿಯೆ ಜೋಗಿ ಪ್ರೇಮ್ ತಮ್ಮ ಚಿತ್ರತಂಡ ಸೇರಿಕೊಂಡಿರುವ ಹಿರಿಯ ಕಲಾವಿದರನ್ನ ಬಹಿರಂಗ ಪಡೆಸಿದ್ದು, ನಟ ಚರಣ್ ರಾಜ್ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ

ಅಂದಹಾಗೆ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡ್ತಿರೋ ಏಕ್ ಲವ್ ಯಾ ಚಿತ್ರದ ಶೂಟಿಂಗ್ ಈಗಾಗ್ಲೇ ಮೈಸೂರಿನಲ್ಲಿ ನಡೆಯುತ್ತಿದ್ದು, ಮಹೇಂದ್ರ ಸಿಂಹ ಕ್ಯಾಮರಾ ವರ್ಕ್ ಹಾಗು ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ..