ಈ ರೀತಿ ಕನಸುಗಳು ಬಿದ್ದರೆ ನೀವೂ ಶ್ರೀಮಂತರಾಗುತ್ತೀರಿ ಎಂದರ್ಥ…!!

ಲೈಫ್‍ಸ್ಟೈಲ್

ನಮ್ಮಲ್ಲಿಕನಸುಗಳಿಗೆ ಹಲವು ಅರ್ಥಗಳಿವೆಒಂದೊಂದು ಕನಸಿಗೂ ಒಂದು ಅರ್ಥವಿದ್ದು, ಒಳ್ಳೆಯದು ಹಾಗೂ ಕೆಟ್ಟದರ ಮುನ್ಸೂಚನೆ ಅಂತ ಹೇಳಲಾಗುತ್ತೆ. ಆದರೆ ಹಲವರಿಗೆತಾವು ಕಂಡ ಕನಸು ಬೆಳಗ್ಗೆ ಎದ್ದಾಗ ನೆನಪಿನಲ್ಲಿಉಳಿಯುವುದೆ ಇಲ್ಲ. ಕೆಲವರಂತು ಕನಸನ್ನಕಣ್ಣಿಗೆ ಕಟ್ಟುವ ಹಾಗೆ, ಹೀಗೆ ನಡೆಯಿತು ಅಂತ ವಿವರಣೆ ನೀಡ್ತಾರೆ. ಕನಸಿನಲ್ಲಿ ನಡೆದ ಘಟನೆ, ಬಂದ ವ್ಯಕ್ತಿಗಳು, ನೋಡಿದ ಸ್ಥಳ ಅಥವಾ ಪ್ರಾಣಿಗಳ ಮೇಲೆ ಕನಸು ಒಳ್ಳೆಯದೋ ಕೆಟ್ಟದೋ ಅಂತ ಒಂದು ನಿಲುವಿಗೆ ಬರಲಾಗುತ್ತೆ.

ಈಗ ನಾವಿಲ್ಲಿ ನಿಮಗೆ ಬೀಳುವ ಒಳ್ಳೆಕನಸುಗಳ ವಿವರಣೆಯನ್ನ ನೀಡಲು ಹೊರಟ್ಟಿದ್ದೇವೆ. ರೀತಿ ಕನಸುಗಳುನಿಮಗೆ ಬಿದ್ದರೆ ಆದಷ್ಟು ಬೇಗ ನಿಮ್ಮ ಬಾಳಲ್ಲಿಲಕ್ಷ್ಮೀ ಕಟಾಕ್ಷವಾಗಲಿಯೆಂದೆ ಅರ್ಥ. ಹಾಗಿದ್ರೆ ಕನಸುಗಳ್ಯಾವುವು ಬನ್ನಿ ನೋಡೋಣ.

ನಿಮಗೆ ಗೊತ್ತಿರುವ ಹಾಗೆ ಕನಸು ಬಿದ್ದ ಘಳಿಗೆಯ ಮೇಲೆ ಕನಸುನನಸಾಗುತ್ತದ ಅಂತ ಹೇಳಲಾಗುತ್ತದೆ.. ಅದರಲ್ಲೂ ಬೆಳಗ್ಗಿನ ಜಾವದ ಕನಸು ಬೇಗ ನನಸಾಗುತ್ತದೆ ಅಂತ ಹೇಳಲಾಗುತ್ತೆ.. ಇದರಲ್ಲಿ ಹಸುವೊಂದು ಕನಸಲ್ಲಿಕಂಡರೆ ಅಥವಾ ಗೋ ಮಾತೆ ತನ್ನ ಕರುವಿಗೆ ಹಾಲುಣಿಸುತ್ತಿದ್ದರೆ ಅದು ಅದೃಷ್ಟ ಲಕ್ಷ್ಮೀ ನಿಮ್ಮ ಬಾಳಲ್ಲಿಪಾದಾರ್ಪಣೆಗೆ ಸುಸಮಯ ಬಂದಿದೆ ಎಂದೇ ಅರ್ಥವಂತೆ. ಯಾಕೆಂದರೆ ಗೋ ಮಾತೆಗೆ ನಮ್ಮ ಸಂಸ್ಕ್ರತಿಯಲ್ಲಿ ಉನ್ನತ ಸ್ಥಾನವಿದ್ದು ಸಹಸ್ರಾರು ದೇವತೆಗಳು ನೆಲೆಸಿದ್ದಾರೆ.

ಇನ್ನೂ ಪುಟ್ಟ ಕಂದಮ್ಮವೊಂದು ನಿಮ್ಮ ಕನಸಿನಲ್ಲಿನಡೆದು ಬಂದರೆ ಅದರೊಂದಿಗೆ ನಿಮ್ಮ ಬಾಳಿಗೆ ಲಕ್ಷ್ಮೀ ಒಲಿದು ಬರುತ್ತಿದ್ದಾರೆ ಎಂದೇ ಅರ್ಥವಂತೆ. ದೇವಸ್ಥಾನ, ಕಳಸ, ಲಕ್ಷ್ಮೀ ದೇವಿಯ ಫೋಟೊ ಕನಸಿನಲ್ಲಿ ಬಂದರೆ ಅದು ನಿಮ್ಮಜೀವನದಲ್ಲಿನಡೆಯಲಿರುವ ಶುಭ ಸಂಕೇತದ ಮುನ್ಸೂಚನೆ ಎಂದೆ ತಿಳಿಯಿರಿ ಅಂತ ಹೇಳಲಾಗುತ್ತೆ.
ಕನಸು ಬೀಳೋದುಸಹಜ. ಕನಸು ನನಸಾಗಬೇಕಾದರೆನಿದ್ದೆಯಿಂದೆದ್ದು ದುಡಿಮೆಗೆ ಕೈ ಹಾಕಬೇಕು ಅನ್ನೋದು ಅಷ್ಟೇ ನಿಜ ಏನಂತೀರಾ?