ಶಿವಣ್ಣನ ಸಾರಥ್ಯದಲ್ಲಿ ಸಲಗ ‘ಸೂರಿ ಅಣ್ಣ’ ಸಾಂಗ್ ರಿಲೀಸ್..! ಟ್ರೆಂಡಿಂಗ್ ನಲ್ಲಿ ಸಲಗ ಸಖತ್ ಸೆನ್ಸೇಷನ್..!

ಸಿನಿಮಾ

ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನ ಮಾಡಿರುವ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಸೂರಿ ಅಣ್ಣ ಹಾಡು ಬಿಡುಗಡೆಯಾಗಿದ್ದು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಸಲಗ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಎ2 ಆಡಿಯೋ ಮೂಲಕ ಈ ಹಾಡು ಲೋಕಾರ್ಪಣೆಗೊಂಡಿದೆ. ಸೂರಿ ಅಣ್ಣ, ಸಾಂಗ್ ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್​ನಲ್ಲಿ ಹೊಸ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.

ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಸಲಗ ಸಿನಿಮಾದ ಫಸ್ಟ್ ಸಾಂಗ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಸೂರಿ ಅಣ್ಣ ಹಾಡಿನ ವಿಡಿಯೋವನ್ನ ಅಧಿಕೃತವಾಗಿ ರಿಲೀಸ್ ಮಾಡಿದ್ದು, ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಸಲಗ ಚಿತ್ರವೂ ಕೂಡ ಟಗರು ಸಿನಿಮಾದಂತೆ ದೊಡ್ಡ ಯಶಸ್ಸು ಕಾಣಲಿ ಎಂದು ಸಲಗ ಚಿತ್ರತಂಡಕ್ಕೆ ಶಿವಣ್ಣ ಶುಭ ಹಾರೈಸಿದರು.

ಇನ್ನು ಸೂರಿ ಅಣ್ಣ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ, ದುನಿಯಾ ವಿಜಯ್ ಆ್ಯಂಡ್​ ಟೀಂ ಸಾಹಿತ್ಯ, ಆಂಟೋನಿ ದಾಸ್ ವಾಯ್ಸ್ ಕಾಂಬಿನೇಷನ್​ನಲ್ಲಿ ಸಾಂಗ್​ ಸಖತ್​ ಸೆನ್ಸೇಷನ್​ ಸೃಷ್ಟಿಸಿದೆ. ಟಿಕ್ ಟಾಕ್ ಸೇರಿದಂತೆ ಎಲ್ಲೆಡೆ ಹೊಸ ಟ್ರೆಂಡ್ ಸೃಷ್ಟಿಸಿದೆ ಸೂರಿ ಅಣ್ಣ ಸಾಂಗ್. ಇನ್ನು ಸೂರಿ ಅಣ್ಣ ಹಾಡು ಈ ವರ್ಷ ಟ್ರೆಂಡಿಂಗ್ ಸೃಷ್ಟಿಸಿದ ಮೊದಲ ಸಾಂಗ್ ಎನ್ನಬಹುದಾಗಿದೆ.

ದುನಿಯಾ ವಿಜಿ ಚೊಚ್ಚಲ ನಿರ್ದೇಶನದ ಸಲಗ ಚಿತ್ರಕ್ಕೆ
ತರುಣ್ ಸುಧೀರ್, ಎಪಿ ಅರ್ಜುನ್, ಬಹದ್ದೂರ್ ಚೇತನ್, ಪವನ್ ಒಡೆಯರ್, ಲಕ್ಕಿ ಸೂರಿ, ಮಹೇಶ್ ಕುಮಾರ್ ಉಪಸ್ಥಿತಿಯಲ್ಲಿ, ದುನಿಯಾ ವಿಜಯ್ ಅವರನ್ನು ನಿರ್ದೇಶಕರ ಬಳಗಕ್ಕೆ ಸ್ವಾಗತಿಸಿದ್ರು. ಜೊತೆಗೆ ಸಾರಾ ಗೋವಿಂದು, ರಾಮೂರ್ತಿ, ಕೆ. ಮಂಜು, ಎನ್.ಎಸ್ ರಾಜ್ ಕುಮಾರ್, ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕಾರ್ಯಕಾರಿ ನಿರ್ಮಾಪಕ ನಾಗಿ ಹಾಗೂ ಬಡವ ರಾಸ್ಕೆಲ್ ಮೂಲಕ ನಿರ್ಮಾಪಕರಾಗಿರೋ ಡಾಲಿ ಧನಂಜಯ ಅವರನ್ನು ಗೌರವಿಸಿ, ಸಲಗ ಚಿತ್ರಕ್ಕೆ ಶುಭ ಹಾರೈಸಿದ್ರು.