ರಕ್ತದಾನ ಮಾಡಿ ನಕ್ಸಲ್ ಪ್ರಾಣ ಉಳಿಸಿದ ವೀರ ಯೋಧ..!

ವಾಹಿನಿ ಸುದ್ದಿ

ದೇಶ ಕಾಯುವ ಯೋಧರು ಶತ್ರುಗಳ ಎದೆ ಹೇಗೆ ಸೀಳುತ್ತಾರೋ ಅದರ ಜೊತೆಜೊತೆಗೆ ಮಾನವೀಯ ಮೌನ್ಯಗಳನ್ನು ಕೂಡ ಅಳವಡಿಸಿಕೊಂಡಿರುತ್ತಾರೆ.. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಇಂದು ನಡೆದಿರುವ ಘಟನೆ ನಮ್ಮ ಮುಂದಿದೆ.. ನಕ್ಸಲರು ಹಾಗು ಸೈನಿಕರ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತವೆ.. ನಕ್ಸಲರ ಕೈಲಿ ಸೈನಿಕರು, ಹಾಗೆ ಸೈನಿಕರ ಗುಂಡಿಗೆ ನಕ್ಸಲರು ಬಲಿಯಾಗಿರೋದನ್ನ ನೋಡಿದ್ದೀವಿ ಕೇಳಿದ್ದೀವಿ..

ಆದರೆ ಇದೇ ನಕ್ಸಲನ ಜೀವವನ್ನ ಉಳಿಸಲು ತನ್ನ ರಕ್ತ ನೀಡಿದ ಯೋಧನ ಬಗ್ಗೆ ಕೇಳಿದ್ದೀರಾ..? ಹೌದು ಇಂತಹದೊಂದು ಅಪರೂಪದ ಮಾನವೀಯ ಘಟನೆ ರಾಂಚಿಯಲ್ಲಿ ನಡೆದಿದೆ.. ಇಲ್ಲಿನ ಸಿಆರ್ ಪಿಎಫ್ ಯೋಧ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ನಕ್ಸಲ್ ಗೆ ತಮ್ಮ ರಕ್ತದಾನ ಮಾಡುವ ಮೂಲಕ ಆ ವ್ಯಕ್ತಿಗೆ ಜೀವದಾನ ಮಾಡಿದ್ದಾರೆ…

ಸಿಆರ್ ಪಿಎಫ್ ನ 133 ಬೆಟಾಲಿಯನ್ ಕಾನ್ಸ್ ಟೇಬಲ್ ರಾಜ್ ಕಮಲ್ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಕ್ಸಲ್ ಗೆ ರಕ್ತದಾನ ಮಾಡಿದವರು.. ಹೀಗಾಗೆ ಈ ಸೈನಿಕನ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಸಂಶೆ ವ್ಯಕ್ತವಾಗಿದೆ..