ತುಪ್ಪ ಎಣ್ಣೆ ಬೆಣ್ಣೆ ಇವನ್ನು ತಿಂದರೆ ದಪ್ಪ ಆಗ್ತಾರೆ ಅನ್ಕೊಂಡಿದ್ರೆ ಒಂದು ಸಾರಿ ಈ ಅಂಕಣ ಓದಿ, ನಿಮ್ಮ ಅಭಿಪ್ರಾಯ ಸರೀನಾ ತಿಳಿದುಕೊಳ್ಳಿ..

ಲೈಫ್‍ಸ್ಟೈಲ್

ಆಗಲೇ ತುಂಬಾ ದಪ್ಪ ಆಗಿ ತೂಕ ಇಳಿಸೋಕೆ ಏನೇನೋ ಮಾಡ್ತಿದ್ದೀವಿ. ದಪ್ಪ ಆಗೋದಲ್ದೆ ಅದರ ಜೊತೆ ಅನೇಕ ರೋಗಗಳೂ ಕೂಡ ಬಂದುಬಿಡ್ತವೆ ಅನ್ನೋ ಭಯ ಬೇರೆ. ಇದರಲ್ಲಿ ಎಣ್ಣೆ ಬೆಣ್ಣೆ ತುಪ್ಪ ತಿನ್ನೋ ಮಾತ್ಯಾಕೆ ಅಂತಿದ್ದೀರಾ? ಹಾಗಿದ್ದರೆ ನಿಜವಾಗ್ಲೂ ಇವನ್ನು ತಿನ್ನೋದ್ರಿಂದ ತೂಕ ಹೆಚ್ಚುತ್ತಾ.. ಬನ್ನಿ ವೈಜ್ಞಾನಿಕವಾಗಿ ಈ ಆಹಾರ ಸೇವನೆನಿಂದ ಏನಾಗುತ್ತೆ ಅನ್ನೋ ಡೀಟೇಲ್ಸ್ ನಾವು ನಿಮಗೆ ಕೊಡ್ತೀವಿ..
ತುಪ್ಪದ ಮಾತು ಬಂದ್ರೆ ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಸರಿಸುವ ಮಂದಿ ಕಂಡು ಕಂಡರಿಯದೆಯೋ ಬೇರೆ ಕೊಬ್ಬಿನ ವಸ್ತುಗಳನ್ನು ಹೆಚ್ಚಾಗಿಯೇ ಸೇವಿಸುತ್ತಾರೆ. ಆದರೆ ಇದು ಬಹಳ ಡೇಂಜರ್! ತುಪ್ಪ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ!.. ಹೇಗೆ ಅಂತೀರಾ?

ತುಪ್ಪದಲ್ಲಿ ತೆಂಗಿನ ಎಣ್ಣೆಯಲ್ಲಿ ಇರುವಷ್ಟು ಪೌಷ್ಟಿಕ ಅಂಶಗಳು ತುಪ್ಪದಲ್ಲಿ ಇವೆ. ಇದರಲ್ಲಿ ಮಧ್ಯಮ ಕೊಬ್ಬಿನ ಆಮ್ಲಗಳು ದೇಹಕ್ಕೆ ಅತ್ಯಂತ ಉಪಕಾರಿ. ಇದನ್ನು ಸಣ್ಣ ಕರುಳು ನೇರವಾಗಿ ಹೀರಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗೂ ಇದು ಬೇಡವಾದ ಕೊಬ್ಬಿನ ಅಂಶಗಳನ್ನು ಹೀರಿಕೊಂಡು ಅದನ್ನು ಕರಗಿಸುತ್ತದೆ. ಆದ್ದರಿಂದ ದೇಹದ ತೂಕ ಹೆಚ್ಚುವ ಬದಲು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ದೈಹಿಕವಾಗಿ ಅತ್ಯಂತ ಕೆಲಸ ಮಾಡುವವರು ಮಾಡುವವರು ಅಥವಾ ಆಟಗಾರರಿಗೆ ತುಪ್ಪ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ಅತಿಯಾದ ಸ್ಥೂಲಕಾಯದ ವ್ಯಕ್ತಿಗಳು ಅಥವಾ ಕೊಲೆಸ್ಟರಾಲ್ ಸಮಸ್ಯೆಯಿಂದ ಬಳಲುವವರು ಮಾತ್ರ ತುಪ್ಪ ಸೇವಿಸದಿರುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಡಿ, ಈ ಹೇರಳವಾಗಿದೆ. ಮೂಳೆ ಹೃದಯ ಹಾಗೂ ಮೆದುಳಿಗೆ ಅವಶ್ಯಕ ಶಕ್ತಿಯನ್ನು ನೀಡುವುದರೊಂದಿಗೆ ದೇಹಕ್ಕೆ ರೋಗನಿರೋಧಕ ಕಾರ್ಯಕ್ಕೆ ಸಹಾಯಮಾಡುತ್ತದೆ.

ತುಪ್ಪದ ಮಹತ್ವ ಗುಣಗಳನ್ನು ಪುರಾತನ ಕಾಲದ ಆಯುರ್ವೇದ ಕೂಡ ಹೇಳುತ್ತದೆ. ಆದ್ದರಿಂದಲೇ ಇದೊಂದು ಸಾತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟಿದೆ. ದೇಹದ ಸರಿಯಾದ ಬೆಳವಣಿಗೆ ಹಾಗೂ ಬುದ್ಧಿಮತ್ತೆಯ ವಿಕಾಸ ಮತ್ತು ಮೆದುಳಿನ ಚಟುವಟಿಕೆಗಳಿಗೆ ಅತ್ಯಂತ ಸಹಕಾರಿ. ಇಷ್ಟೆಲ್ಲಾ ಉಪಯೋಗಕಾರಿ ಆಗಿರುವ ತುಪ್ಪವನ್ನು ಎಷ್ಟು ಸೇವಿಸಿದರೆ ಒಳ್ಳೆಯದು? ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಾಮಾನ್ಯ. ‘ಅತಿಯಾದರೆ ಅಮೃತವೂ ವಿಷವೇ’ ಇದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಆಯುರ್ವೇದ ಹಾಗೂ ಇಂದಿನ ವಿಜ್ಞಾನದ ಪುರಾವೆಗಳೊಂದಿಗೆ ಹೇಳುವುದಾದರೆ ದಿನಕ್ಕೆ ಕನಿಷ್ಠ 1 ಚಮಚ ತುಪ್ಪವನ್ನು ತಿನ್ನುವುದು ದೇಹದ ಬೆಳವಣಿಗೆ ಹಾಗೂ ಉತ್ತಮ ಆರೋಗ್ಯಕ್ಕೆ ಅವಶ್ಯಕ. ಹಾಗಾಗಿ ಎಣ್ಣೆ ಬೆಣ್ಣೆ ಅಥವಾ ಇನ್ಯಾವುದೇ ಕೊಬ್ಬಿನ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ, ದಿನಂಪ್ರತಿ ಕೇವಲ ಒಂದು ಚಮಚೆಯಷ್ಟು ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.