ಒಂದೇ ದಿನ 200 ಕೋಟಿ ಬಾಚಿದ ಸುಶಾಂತ್ ಸಿಂಗ್ ಅಭಿನಯದ ‘ದಿಲ್ ಬೆಚಾರಾ’

ವಾಹಿನಿ ಸುದ್ದಿ ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿನಯದ ದಿಲ್ ಬೆಚಾರಾ ಸಿನಿಮಾ ಕಳೆದ ವಾರ ಡಿಸ್ನಿ ಪ್ಲಸ್ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಕಳೆದ ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಸುಶಾಂತ್ ಅಭಿನಯದ ಕೊನೆಯ ಸಿನಿಮಾ ‘ದಿಲ್ ಬೆಚಾರಾ’ ತುಂಬಾನೇ ಹೈಪ್ ಕ್ರಿಯೇಟ್ ಮಾಡಿತ್ತು. ಈ ಸಿನಿಮಾ ರಿಲೀಸ್ ಆದ ಜಸ್ಟ್ 24 ಗಂಟೆಗಳಲ್ಲಿ ಬರೋಬ್ಬರಿ 9.5 ಕೋಟಿ ವೀಕ್ಷಣೆಯೊಂದಿಗೆ ಭರ್ಜರಿ 200 ಕೋಟಿ ಸಂಪಾದನೆ ಆಗಿದೆ. ಇದು ಭಾರತೀಯ ಓಟಿಟಿ ಫ್ಲಾಟ್ ಫಾರ್ಮ್ ನಲ್ಲೇ ಹೊಸ ದಾಖಲೆ.