ಧ್ರುವಾ ಸರ್ಜಾ ತಾನೇ ಡಿಸೈನ್ ಮಾಡಿಸಿರೋ ತನ್ನ ಮದುವೆಯ ಆಮಂತ್ರಣದ ಬೆಲೆ ಎಷ್ಟು ಗೊತ್ತಾ..?

ಸಿನಿಮಾ

ಸ್ಯಾಂಡಲ್ ವುಡ್ ಅಂಗಳ ಮತ್ತೆ ಶುಭಾ ಸಮಾರಂಭಗಳ ಮೂಲಕ ಜಗಮಗಿಸುತ್ತಿದ್ದು, ಮತ್ತೊಮ್ಮೆ ಚಿತ್ರರಂಗದ ದಿಗ್ಗಜರರ ಸಮಾಗಮಕ್ಕೆ ವೇದಿಕೆ ರೆಡಿಯಾಗಿದೆ.. ಅದು ಧ್ರುವಾ ಸರ್ಜಾ ಹಾಗು ಪ್ರೇರಣ ಮದುವೆ ಮೂಲಕ.. ಭರ್ಜರಿ ಹುಡುಗ ಅದ್ದೂರಿಯಾಗಿ ಅಂಬಾರಿ ಏರಿ ತಮ್ಮ ಕಲ್ಯಾಣಕ್ಕೆ ರೆಡಿಯಾಗಿಬಿಟ್ಟಿದ್ದಾರೆ.. ಈಗಾಗ್ಲೇ ಸೆಲೆಬ್ರಿಟಿಗಳನ್ನ ಭೇಟಿ ಮಾಡಿ ತಮ್ಮ ಮದುವೆಗೆ ಬರುವಂತೆ ಆಮಂತ್ರಣ ಪತ್ರಿಕೆಯನ್ನ ನೀಡುತ್ತಿದ್ದಾರೆ..

ಆಂಜನೇಯ ಪರಮ ಭಕ್ತರಾದ ಧ್ರುವಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ವತಃ ತಾವೇ ಡಿಸೈನ್ ಮಾಡಿಸಿದ್ದಾರಂತೆ.. ಹೀಗಾಗೆ ಶ್ರೀ ಆಂಜನೇಯನ ಫೋಟೊ ಮೂಲಕ ಆಮಂತ್ರಣ ಪತ್ರಿಕೆ‌ ಶುರುವಾಗುತ್ತದೆ..  ನಮ್ಮ ಸಂಸ್ಕೃತಿಯನ್ನ ಸಾರುವ ಇನ್ವಿಟೇಷನ್ ಇದಾಗಿದ್ದು ಹರಿಸಿನದ ಕೊಂಬು, ಹರಿಶಿನ-ಕುಂಕುಮ- ಕೇಸರಿ ಗಂಧವಿದೆ.. ಇನ್ನುಳಿದಂತೆ ಹೊಸ ಬಾಳಿನ ಹೊಸಿಲಲಿ ನಿಂತಿರುವ ಈ ಜೋಡಿಯ ಫೋಟೊ ಹಾಗು ವಿಳಾಸದ ವಿವರಗಳಿದ್ದು, ಒಂದು ಕಾರ್ಡಿಗೆ 12 ರಿಂದ 16 ಸಾವಿರ ಹಣವನ್ನ ಖರ್ಚು ಮಾಡಲಾಗಿದ್ಯಂತೆ…