ನವೀನ್ ನಂತರ ಫಿನಾಲೆಗೆ ಎಂಟ್ರಿ ಪಡೆದ ಸ್ಪರ್ಧಿ ಇವರೇ‌ ನೋಡಿ.. 

ವಾಹಿನಿ ಸುದ್ದಿ

ಫಿನಾಲೆಗೆ ಕೇವಲ ಎರಡು ವಾರಗಳು ಇರುವಾಗಲೇ ನವೀನ್ ಫಿನಾಲೆಗೆ ಟಿಕೆಟ್‌ ಸಿಕ್ಕಿದೆ. ನವೀನ್ ಹೊರತ್ತು ಪಡಿಸಿ ಬಿಗ್ ಬಾಸ್ ಮನೆಯಲ್ಲಿ ಉಳಿಕೊಂಡಿರುವುದು 6 ಸ್ಪರ್ಧಿಗಳು ಮಾತ್ರ. ಬಿಗ್ ಬಾಸ್ ಮನೆಯಲ್ಲಿ‌ ಉತ್ತಮ ಆಟ‌ ಪ್ರರ್ದಶಿಸಿ, ಮೊದಲು ಟಿಕೆಟ್ ಪಡೆದುಕೊಂಡ ಅದೃಷ್ಟ ಸ್ಪರ್ಧಿ ನವೀನ್ ಸಜ್ಜು. 

ಈಗ ನವೀನ್ ನಂತರ ಮತ್ತೋರ್ವ ಸ್ಪರ್ಧಿಗೆ ಟಿಕೆಟ್ ಸಿಕ್ಕಿದೆ. ಗಾಯಕ ನವೀನ್ ಸಜ್ಜು ನಂತರ ವೀಕ್ಷಕರ ಮನಗೆದಿದ್ದ ಸ್ಪರ್ಧಿ ಅಂದ್ರೆ ಧನರಾಜ್. ವೀಕ್ಷಕರ ನೀರಿಕ್ಷೆಯಂತೆ ಧನರಾಜ್ ಫಿನಾಲೆಗೆ ಆಯ್ಕೆಯಾಗಿದ್ದಾರೆ. ನಿನ್ನೆ ಮನೆಗೆ ಬಂದ ಹಳೇ ಸ್ಪರ್ಧಿಗಳು ಧನರಾಜ್ ಅರ್ಹ ಸ್ಪರ್ಧಿ ಎಂದು ಆಯ್ಕೆ‌ ಮಾಡಿದ್ದಾರೆ. ಹೀಗಾಗಿ ನವೀನ್ ನಂತರ ಫಿನಾಲೆಗೆ ಪ್ರವೇಶಿಸಿದ ಎರಡನೇ ಅದೃಷ್ಟ ಸ್ಪರ್ಧಿ ಧನರಾಜ್.