ಹಾಲಿವುಡ್ ನ ಜೋಕರ್ ಗೆ ಟಕ್ಕರ್ ಕೊಡೋಕೆ ಬಂದ್ರ ಡಾಲಿ ಧನಂಜಯ್.!!?

ಸಿನಿಮಾ

ಹಾಲಿವುಡ್ ಸಿನಿ ದುನಿಯಾದಲ್ಲಿ ಜೋಕರ್ ಹವಾ ದೊಡ್ಡ ಮಟ್ಟದ ಯಶಸ್ಸನ್ನ ಕಂಡಿದೆ.. ಈಗ ಇದೇ ಥರದ ಗೆಟಪ್ ನಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿರುವ ಪೋಸ್ಟರ್ ಎಲ್ಲೆಡೆ ವೈರಲ್ ಆಗ್ತಿದೆ.. ಇದು ಡಾಲಿಯ ಮುಂದಿನ ಸಿನಿಮಾನಾ..? ಡೈರೆಕ್ಟರ್ ಯಾರು..? ಯಾವಾಗ ಈ ಪೋಸ್ಟರ್ ರಿಲೀಸ್ ಆಯ್ತು..? ಶೂಟಿಂಗ್ ಶುರು ಯಾವಾಗಾ.? ಎಂಬ ಹಲವು ಪ್ರಶ್ನೆಗಳು ಮೂಡೋದು ಸಹಜ.. ಅದೆಲ್ಲದಕ್ಕು ಉತ್ತರ ಇಲ್ಲಿದೆ ನೋಡಿ..

ಫ್ಯಾನ್ ಮೇಡ್ ಪೋಸ್ಟರ್..!

ಡಾಲಿ ಅಭಿಮಾನಿಗಳು ತನ್ನ ನೆಚ್ಚಿನ ನಾಯಕನನ್ನ ಯಾವ್ ಯಾವ್ ಗೆಟಪ್ ನಲ್ಲಿ ನೋಡೋಕೆ ಭಯಸುತ್ತಿದ್ದಾರೆ ಅನ್ನೋದಕ್ಕೆ ಇದು ಒಂದು ಸಾಕ್ಷಿಯಾಗಿದೆ.. ಫ್ಯಾನ್ ಮೇಡ್ ಪೋಸ್ಟರ್ ಆದರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.. ಅಂದಹಾಗೆ ಅಸಲಿ ಫೋಟೊ ಬಂದು ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ್ದಾಗಿದೆ.. ಇದನ್ನ ಅಭಿಮಾನಿಗಳು ಜೋಕರ್ ಗೆ ಸಾಮ್ಯತೆ ಮಾಡಿ ಎಡಿಟ್ ಮಾಡಿದ್ದಾರೆ..

ಅಭಿಮಾನಿಗಳ ಕ್ರಿಯೇಟಿವಿಟಿಗೆ ತಲೆ ಬಾಗಿದ ಡಾಲಿ..

ಇನ್ನು ಅಭಿಮಾನಿಗಳು ತನ್ನ ಚಿತ್ರದ ಫೋಟೊವನ್ನ ತೆಗೆದುಕೊಂಡು ಹೀಗೆಲ್ಲ ಎಡಿಟ್ ಮಾಡಿ ಆನಂತರ ಅದು ವೈರಲ್ ಆಗಿ ಡಾಲಿ ಕಣ್ಣಿಗೆ ಬಿದ್ದಿದೆ.. ಸದ್ಯ ಈ ನಟ ಕೂಡ ಅಭಿಮಾನಿಗಳ ಕೆಲಸಕ್ಕೆ ಭೇಷ್ ಎಂದಿದ್ದಾರೆ.. ದುನಿಯಾ ಸೂರಿ ನಿರ್ದೇಶನದ ಚಿತ್ರ ಇದಾಗಿರೋದ್ರಿಂದ ಆಕ್ಷನ್, ಕ್ರೈಮ್, ಥ್ರಿಲ್ಲಿಂಗ್ ಇದ್ದೇ ಇರುತ್ತೆ. ‘ಪಾಪ್ ಕಾರ್ನ್ ಮಂಕಿ ಟೈಗರ್ಸಿನಿಮಾ ಸಹ ಪಕ್ಕಾ ಸೂರಿ ಫ್ಲೇವರ್ ನ ಸಿನಿಮಾ ಅನ್ನುವುದು ಫಸ್ಟ್ ಲುಕ್ ನಲ್ಲೇ ಗೊತ್ತಾಗುತ್ತಿದೆ. ಉಳಿದಂತೆ ಚಿತ್ರದಲ್ಲಿ ನಿವೇದಿತಾ, ಅಮೃತಾ, ಸಪ್ತಮಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.