ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..! ಯಾರು ಗೊತ್ತ ಆ ದೇವರು?

ಧಾರ್ಮಿಕ ಲೈಫ್‍ಸ್ಟೈಲ್ ವಾಹಿನಿ ಸುದ್ದಿ

ದೇವರುಗಳಿಗೆ ದೇವನಂತೆ ಈ ದೇವರು.. ಹರಿಹರ ಬ್ರಹ್ಮ ಸರಸ್ವತಿ ಹುಟ್ಟಿದ್ದೇ ಇವನಿಂದಂತೆ!!

ಸುಮಾರು 3 ರಿಂದ 12ನೆ ಶತಮಾನದಲ್ಲಿ ಕಾಣಸಿಗುವ ಪ್ರಾಚ್ಯವಸ್ತುಗಳ ಸಂಶೋಧನೆಯ ಪ್ರಕಾರ ತಿಳಿದುಬಂದ ಸತ್ಯವಿದು..

ತಿರುಪತಿಯಲ್ಲಿ ನೀವು ಕೊಡುವ ಮುಡಿ ಹರಕೆ ವೆಂಕಟೇಶ್ವರ ಸ್ವಾಮಿಗಲ್ಲ..! ಅದು ಸಲ್ಲುವುದು ಈ ತಾಯಿಗೆ

ಹಿಂದೂ ಹಾಗೂ ಬೌದ್ಧ ಧರ್ಮಗಳ ಸಂಗಮದಿಂದಾದುದೇ ಬೋಧಿಸತ್ವ.. ಆದ್ರೆ ಇದನ್ನ ಅಲ್ಲಗಳೆಯುತ್ತದೆ ಬೌದ್ಧ ಧರ್ಮ. ಇದು ಕೇವಲ ಸ್ವಧರ್ಮದಲ್ಲಿ ಇರುವ ರೂಪ ಎನ್ನುತ್ತದೆ ಬೌದ್ಧ ಧರ್ಮ.. ಈ ಬೋಧಿಸತ್ವದ ಒಂದು ರೂಪವೇ “ಅವಲೋಕಿತೇಶ್ವರ”.. ಈಗ ಹೇಳುತ್ತಿರುವುದು ಈ ದೇವರ ಬಗ್ಗೆಯೇ..

ಹೌದು.. ಈ ಕಾಲಘಟ್ಟದಲ್ಲಿ ಪೂರ್ವಾತ್ಯ ಏಷ್ಯಾ ರಾಷ್ಟ್ರಗಳಾದ ಭಾರತ, ಬರ್ಮಾ, ಚೀನಾ ಜಾವ, ಸುಮಾತ್ರಾ, ಸಿಂಗಾಪುರ, ಮಲೇಷಿಯ, ಇಂಡೋನೇಷ್ಯಾ, ತೈಪೈ, ಗಿನಿಯ, ಟಿಬೆಟ್, ಕಾಂಬೋಡಿಯಾ, ವಿಯೆಟ್ನಾಮ್, ಜಪಾನ್ ಹಾಗೂ ಇನ್ನಿತರ ದೇಶಗಳಲ್ಲಿ ಈ ದೇವರು ಅಸ್ತಿತ್ವದಲ್ಲಿತ್ತು.

ಶಂಖ ಊದುವುದರಿಂದ ಈ ಎಲ್ಲ ಖಾಯಿಲೆಗಳು ಮಂಗಮಾಯ

ದೇವರ ದೇವ ಈ ದೇವ:
ಪಾಲಿ ಭಾಷೆಯಲ್ಲಿ ದೊರೆತ ಶಾಸನಗಳಿಂದ ತಿಳಿದುದೇನೆಂದರೆ ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ!!
ಅವಲೋಕಿತೇಶ್ವರ ಎಂದರೆ ಕರುಣೆಯಿಂದ ಜಗತ್ತನ್ನು ನೋಡುವವನು ಅಂತ..

82ರ ಶ್ರೀ ಶರಣ ಬಸವಪ್ಪನವರಿಗೆ 8 ಹೆಣ್ಣು ಮಕ್ಕಳ ಬಳಿಕ ಹುಟ್ಟಿದ ಗಂಡು ಮಗು..

ಈ ದೇವರ ಬಗ್ಗೆ ಇನ್ನೂ ಒಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ಈ ದೇವರು ಕೆಲವೆಡೆ ಗಂಡಾಗಿಯೂ ಕೆಲವೆಡೆ ಹೆಣ್ಣಾಗಿಯೂ ಪೂಜಿಸಲ್ಪಡುವುದು!! ಈ ದೇವರ ಒಂದು ಕಣ್ಣೀರ ಬಿಂದುವಿನಿಂದ ಹುಟ್ಟಿದ್ದು ತಾರಾ ಎಂಬ ಹೆಣ್ಣು ದೇವರಂತೆ..

ದೇವನೊಬ್ಬ ನಾಮ ಹಲವು:
ಈ ದೇವರ 33 ಉಪ ರೂಪಗಳು ಇದುವರೆಗೆ ತಿಳಿದುಬಂದಿದೆ. ಶ್ರೀಲಂಕಾದಲ್ಲಿ ನಾಥದೇವ, ಜಪಾನ್ ನಲ್ಲಿ ಕಣ್ಣೊನ್, ಬರ್ಮಾದಲ್ಲಿ ಲೋಕನಾಥ, ಥೈಲ್ಯಾಂಡ್ ನಲ್ಲಿ ಲೋಕೇಶ್ವರನಾಗಿ ಪೂಜಿಸಲ್ಪಡುವನು ಈ ಅವಲೋಕಿತೇಶ್ವರ…ಇದು ದೀಪಾವಳಿ ಆಚರಿಸದ ಕರ್ನಾಟಕದ ಏಕೈಕ ಹಳ್ಳಿ… ಇದರ ಹಿಂದಿದೆ ಒಂದು ರೋಚಕ ಕಥೆ.

ಈ ದೇವರ ರೂಪ ಲಕ್ಷಣಗಳು:
3ನೇ ಶತಮಾನದಲ್ಲಿ ದೊರೆತ ತಾಳೆ ಗರಿಯಲ್ಲಿ ಈ ದೇವರಿಗೆ 2 ಕೈಗಳಿದ್ದು ಅಭಯಮುದ್ರೆಹೊಂದಿದ್ದರೆ, ಟಿಬೆಟ್ ನಲ್ಲಿ ಪೂಜೆಗೊಳ್ಳುವ ದೇವರಿಗೆ 4 ಕೈಗಳು 11 ತಲೆ ಇದೆ. ಚೀನಾದ ಅವಲೋಕಿತೇಶ್ವರನಿಗೆ 18 ಕೈಗಳಿದೆ,ಕೆಲವೆಡೆ 6 ಕೈಗಳ ರೂಪವೂ ಉಂಟು. ಇನ್ನೂ ಇಂಟರೆಸ್ಟಿಂಗ್ ಅಂದ್ರೆ ಗಿನಿಯಾ ದೇಶದಲ್ಲಿ ಮಿಂಗ್ ವಂಶ ಆಳುತ್ತಿದ್ದಾಗ ಈ ದೇವರ ರೂಪದಲ್ಲಿ 1000 ಕೈಗಳು ಇದೆ!!

ದೇಶವೇ ಹೆಮ್ಮೆ ಪಡುವಂತ ಸಂಗತಿ.. ನಡೆದಾಡುವ ದೇವರ ಸಾಧನೆ ಗಿನ್ನಿಸ್ ದಾಖಲೆ ಸೇರಲಿದ್ಯಂತೆ

ಭಾರತದಲ್ಲಿ ಅವಲೋಕಿತೇಶ್ವರ:
ಅಜಂತಾ ಗುಹೆಗಳಲ್ಲಿ 6ನೆ ಶತಮಾನದಲ್ಲಿ ಬರೆದ ಚಿತ್ರಗಳಿಂದ ಈ ದೇವರ ಅಸ್ತಿತ್ವ ಭಾರತದಲ್ಲಿತ್ತು ಎಂದು ತಿಳಿಯಬಹುದು.. 12ನೆ ಶತಮಾನದಲ್ಲಿ ಮುಸಲ್ಮಾನರ ಆಳ್ವಿಕೆಯಿಂದಾಗಿ ಬೌದ್ಧ ಧರ್ಮದ ಪ್ರಭಾವ ಭಾರತದಲ್ಲಿ ಕ್ರಮೇಣ ಕಡಿಮೆಯಾಯಿತು. ಬಿಹಾರದ ನಳಂದಾದಲ್ಲೂ ಈ ದೇವರ ಕುರಿತ ಸಾಕ್ಷ್ಯಗಳು ದೊರೆತಿವೆ.

ಸಿಂಗಾಪುರ, ಮಲೇಷ್ಯಾ, ಕಾಂಬೋಡಿಯಾದ ಆಂಗ್ಕೋರ್ ವಾಟ್,… ಟೂರ್ ಪ್ಲಾನ್ ಮಾಡಿದ್ರೆ ಈ ದೇವರ ಬಗ್ಗೆ ವಿಷಯ ಸಂಗ್ರಹಿಸಿ ಮತ್ತು ಅಲ್ಲಿನ ಅತೀ ಪ್ರಾಚೀನ ಹಿಂದೂ ದೇವಾಲಯಗಳನ್ನು ನೋಡಲು ಮರೆಯದಿರಿ..