ಕಿಚ್ಚನ ಬಳಿಕ ‘ಉದ್ಘರ್ಷ’ ಚಿತ್ರಕ್ಕೆ ಯಜಮಾನ ‘ದರ್ಶನ್’ ಸಾಥ್..

ಸಿನಿಮಾ

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಬತ್ತಳಿಕೆಯಿಂದ ಹೊರ ಬರುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಅಂಶಗಳನ್ನ ಒಳಗೊಂಡ ಚಿತ್ರವೇ ಈ ಉದ್ಘರ್ಷ.. ಸೆಟ್ಟೇರಿದಾಗಿನಿಂದಲು ಬಾರಿ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೇಲರ್ ಇದೇ ಮಾರ್ಚ್ 5 ನೇ ತಾರೀಖು ಬಿಡುಗಡೆಗೊಳ್ಳಲಿದೆ.. ಕಿಚ್ಚ ಸುದೀಪ್ ಅವರ ಬೇಸ್ ವಾಯ್ಸ್ ನಲ್ಲಿ ಟ್ರೇಲರ್ ಖಡಕ್ ಆಗಿ ಮೂಡಿ ಬಂದಿರುತ್ತೆ ಅನ್ನೋದ್ರಲ್ಲಿ ಯಾವುದೇ ಡೌಟ್ ಬೇಡ..

ಈಗ ಇದೇ ಟ್ರೇಲರ್ ನ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಯಜಮಾನ, ದರ್ಶನ್ ಬಿಡುಗಡೆ ಮಾಡಲ್ಲಿದ್ದಾರೆ.. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರೋಕೆ ಸಿದ್ದವಾಗಿರುವ ಉದ್ಘರ್ಷದ ಟ್ರೇಲರ್ ಅನ್ನ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಶುಭ ಹಾರೈಸಲ್ಲಿದ್ದಾರೆ ಡಿ ಬಾಸ್..

ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗ್ತಿರೋದ್ರಿಂದ ಸೌತ್ ನಲ್ಲಿ ಹೆಸರು ಮಾಡಿದ ತಾರೆಯರ ದಂಡೆ ಚಿತ್ರದಲ್ಲಿದೆ, ಯಜಮಾನ ಚಿತ್ರದಲ್ಲಿ ವಿಲನ್ ಆಗಿರೋ ಅನೂಪ್ ಸಿಂಗ್ ಉದ್ಘರ್ಷ ನಾಯಕನಾಗಿದ್ರೆ, ಕಬಾಲಿಯ ಧನ್ಸಿಕಾ, ಬಸಣ್ಣಿ ಬಾ ಹಾಡಿನಲ್ಲಿ ಟಪಗುಚ್ಚಿ ಸ್ಟೆಪ್ ಹಾಕಿರುವ ತಾನ್ಯಾ ಹೋಪ್ ಇಬ್ಬರು ನಾಯಕಿಯರಿದ್ದಾರೆ… ಇಷ್ಟೆ ಅಲ್ಲದೇ ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್ ತಮ್ಮ ವಿಲನ್ ಗಿರಿ ತೋರಿಸಲ್ಲಿದ್ದಾರೆ…

ದೇವರಾಜ್ ಆರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಉದ್ಘರ್ಷ ಚಿತ್ರಕ್ಕೆ ದಿವಂಗತ ವಿಷ್ಣುವರ್ಧನ್ ಹಾಗು ಖ್ಯಾತ ಛಾಯಾಗ್ರಹಕ ಪಿ.ರಾಜನ್ ಸಿನಿಮಾಟೊಗ್ರಫಿ ಇದೆ.. ಜೊತೆಗೆ ಬಾಲಿವುಡ್‌ನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧರಿ ಸಂಗೀತ ನೀಡಿದ್ದಾರೆ.. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಟ್ರೇಲರ್ ಅನ್ನ ಡಿ ಬಾಸ್ ಬಿಡುಗಡೆ ಮಾಡುತ್ತಿದ್ದು, ಕುತೂಹಲದ ಕೇಂದ್ರ ಬಿಂದುವಾಗಿದೆ ಉದ್ಘರ್ಷ ಚಿತ್ರ..