ಸ್ವೀಟಿ ರಾಧಿಕರ ‘ದಮಯಂತಿ’ ಟೀಸರ್ ನೋಡಿ ದಂಗಾದ ಸಿನಿ ರಸಿಕ..!

ಸಿನಿಮಾ

ರಾಧಿಕ ಕುಮಾರಸ್ವಾಮಿ ಬಾರಿ ದೊಡ್ಡ ಮಟ್ಟಿಗೆ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದ್ದಾರೆ.. ತನ್ನ ಬ್ಯೂಟಿಯಿಂದಲೇ ಸ್ವೀಟಿಯಾಗಿ ಹೆಸರು ಗಳಿಸಿದ್ದ ನಟಿ ಈಗ ಹಾರರ್ ಚಿತ್ರದಲ್ಲಿ ತೆಲುಗಿನ ಅರುಂಧತಿಯನ್ನ ಸೈಡಿಗೆ ತಳ್ಳುವಂತೆ ಮಿಂಚು ಹರಿಸುತ್ತಿದ್ದಾರೆ.. ಬರೀ ಫಸ್ಟ್ ಲುಕ್ ನಲ್ಲೇ ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ..

ಮೊದಲ ಬಾರಿಗೆ ರಾಧಿಕ ಅಭಿನಯದ ಸಿನಿಮಾವೊಂದು 5 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ದವಾಗಿದ್ದು, ತಮಿಳು, ತೆಲುಗು, ಹಿಂದಿ, ಮಲೆಯಾಳಂ ನಲ್ಲು ದಮಯಂತಿ ತೆರೆ ಕಾಣಲಿದೆ.. ಚಿತ್ರ ಮೇಕಿಂಗ್ ಹಾಗು ಗ್ರಾಫಿಕ್ಸ್ ಕ್ವಾಲಿಟಿ ಟೀಸರ್ ನಲ್ಲಿ ಎದ್ದು ಕಾಣ್ತಿದ್ದು, ಕನ್ನಡದ ಮತ್ತೊಂದು ಸಿನಿಮಾಗೆ ದೇಶಾದ್ಯಂತ ಜನಮನ್ನಣೆ ಸಿಗುವಂತಿದೆ..

ಭಜರಂಗಿ ಲೋಕಿ ದಮಯಂತಿ ಎದುರು ಅಭಿನಯಿಸಿದ್ದಾರೆ.. ನಟನಾಗಿ, ನಿರ್ದೇಶಕನಾಗಿ, ವಿತರಕನಾಗಿ ಹೆಸರು ಮಾಡಿರುವ ನವರಸನ್ ನಿರ್ಮಾಣ ಮಾಡಿರೋ ಚಿತ್ರವಿದು.. ಶ್ರೀ ವೃಶಾದ್ರಿ ಬ್ಯಾನರ್ ನಲ್ಲಿ ತಯರಾಗಿರೋ ಚಿತ್ರಕ್ಕೆ ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ.. ಸದ್ಯ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ವರ್ಷಾಂತ್ಯದಲ್ಲೆ ದಮಯಂತಿ ನಿಜ ರೂಪದ ದರ್ಶನ ಸಿಗುವ ಸಾಧ್ಯತೆಗಳಿವೆ..