ಇಂದಿನ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ.

ಧಾರ್ಮಿಕ ವಾಹಿನಿ ಸುದ್ದಿ

(ಜ್ಯೋತಿಷ್ಯ ಮತ್ತು ಸಲಹೆಗಾರರು)
ಪಂಡಿತ್ ಯತೀಂದ್ರ ಭಟ್
9901225989

ಬುಧವಾರ
ಶ್ರಾವಣ ಮಾಸ ಶುಕ್ಲ ಪಕ್ಷ
ರಾಹುಕಾಲ :೧೨:೦೦_೧:೩೦(12:00_1:30)
ಗುಳಿ ಕಾಲ :೧೦:೩೦_೧೨:೦೦(10:30_12:00)

ಮೇಷ ರಾಶಿ:-
ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಮತ್ತು ಮಕ್ಕಳು ಬದ್ಧತೆ ಮೆರೆಯುತ್ತಾರೆ. ದಿನವಿಡಿ ನೀವು ಜೀವನವನ್ನು ಅನುಭವಿಸುವುದು ಮತ್ತು ವೆಚ್ಚ ಮಾಡುವುದಾಗಿರುವುದರಿಂದ, ನೀವು ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಇದಕ್ಕಾಗಿ ನೀವು ಸಾಕಷ್ಟು ಪರಿಶ್ರಮ ವಹಿಸಬೇಕು…

ವೃಷಭ ರಾಶಿ:-

ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿ ಕಡಿಮೆಯಾದ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನವನ್ನು ಸುಸ್ಥಿತಿಯಲ್ಲಿಡಲು ವಾಗ್ವಾದಗಳನ್ನು ದೂರವಿಡಬೇಕು. ಖರ್ಚು ಹೆಚ್ಚಾಗಬಹುದು. ಗಳಿಕೆಯೂ ಇರುತ್ತದೆ. ಆದರೆ ನಿಮ್ಮ ಹಣಕಾಸಿನಲ್ಲಿ ಅತಿಯಾದ ವೆಚ್ಚವು ಅಸಮತೋಲನ ಸೃಷ್ಟಿಸವುದರಿಂದ, ನೀವು ಅದನ್ನು ನಿರ್ವಹಿಸಬೇಕು..

ಮಿಥುನ ರಾಶಿ:-
ನೀವು ಗೌರವವನ್ನು ಗಳಿಸಬಹುದು ಮತ್ತು ವೃತ್ತಿ ಜೀವನವೂ ವೃದ್ಧಿಸಬಹುದು. ನಿಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬಹುದು.ಯಾವುದೇ ದೀರ್ಘಕಾಲೀನ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ನಿಮ್ಮ ಆರೋಗ್ಯದ ಮೇಲೆ ಕಾಳಜಿ ಇರಲಿ ದೂರದ ಪ್ರಯಾಣದಲ್ಲಿ ಎಚ್ಚರ.

ಕರ್ಕಾಟಕ ರಾಶಿ:-
ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು ಕಂಡುಬರಲಿದೆ ಮತ್ತು ನೀವು ಇತರರನ್ನು ಸಹಾಯ ಮಾಡುವೆರಿ . ನಿಮ್ಮ ಆತ್ಮೀಯರಲ್ಲಿ ಕೆಲವರು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರಬಹುದು ಮತ್ತು ಇದು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ ಕೌಟುಂಬಿಕ ಜೀವನ ಸೌಹಾರ್ದಯುತವಾಗಿರುತ್ತದೆ.

ಸಿಂಹ ರಾಶಿ:-
ನಿಮ್ಮ ಮಾತುಗಳು ಘರ್ಷಣೆಗೆ ಕಾರಣವಾಗಬಹುದಾದ್ದರಿಂದ, ನಿಮ್ಮ ಮಾತುಗಳ ಮೇಲೆ ಗಮನವಿರಲಿ. ನಿಮ್ಮ ಕೆಲಸದ ವತಿಯಿಂದ ದೂರದ ಪಯಣ ಹೋಗುವ ಸಾಧ್ಯತೆ ಇದೆ ಮತ್ತು ನೀವು ಅಲ್ಲಿ ಉತ್ತಮವಾಗಿ ಗಳಿಸಬಹುದು. ಆದರೆ, ಇದು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರರಿಂದ ಒಮ್ಮೆ ದೂರವಿಡಬಹುದು…

ಕನ್ಯಾ ರಾಶಿ:-

ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯವಿದೆ. ಕನ್ಯಾ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ ಮಕ್ಕಳು ತುಂಟರಾಗಿರುತ್ತಾರೆ. ಆದರೆ ಅವರು ಹೊಸ ಸ್ನೇಹದ ಬಗ್ಗೆ ತಿಳಿಯಲು ಆಸಕ್ತರಾಗಿರುತ್ತಾರೆ ಮತ್ತು ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ.ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಪ್ರಯಾಣದಲ್ಲಿ ಎಚ್ಚರವಿರಲಿ.

ತುಲಾ ರಾಶಿ:-

ನಿಮ್ಮ ಖರ್ಚು ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಗರ್ಭಿಣಿ ಹೆಂಗಸರು ಗಾಳಿ ಸಂಬಂಧಿ ರೋಗಗಳು, ಗಂಟು ನೋವು ಇತ್ಯಾದಿ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ಅತಿಯಾದ ನಾರಿನಂಶವಿರುವ ಆಹಾರ ಸೇವಿಸಬೇಡಿ. ನೀರು ಹೆಚ್ಚಾಗಿ ಕುಡಿಯಬೇಕು ಮೊಣಕಾಲು ನೋವು ಬರುತ್ತದೆ.

ವೃಶ್ಚಿಕ ರಾಶಿ:-

ನಿಮ್ಮ ಜೀವನದ ಸವಾಲುಗಳನ್ನು ಶೀಘ್ರವಾಗಿ ಎದುರಿಸಬೇಕಿದೆ. ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತದೆ . ಆಹಾರದ ಮೇಲೆ ನಿಗಾ ಇರಲಿ. ನೀವು ಬಾಳಸಂಗಾತಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ವೆಚ್ಚ ಮಾಡಬಹುದು.ಮೌನವಾಗಿ ಇರುತ್ತೀರಾ.

ಧನು ರಾಶಿ:-:

ನಿಮ್ಮ ವೃತ್ತಿರಂಗದಲ್ಲಿ ಕೆಲಸಕಾರ್ಯಗಳು ಸಫ‌ಲವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದ್ಯದ ಸ್ಥಿತಿಯಲ್ಲಿ ಒಪ್ಪಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವೇ ಮುಂದಿನ ಫ‌ಲಿತಾಂಶಕ್ಕೆ ಪೂರಕ ವಾಗುತ್ತದೆ. ಮನೆಯ ವಾತಾವರಣ ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು. ವ್ಯಾಪಾರ, ವ್ಯವಹಾರಗಳಲ್ಲಿ ಸಮಾಧಾನ ತೋರಿಬಂದು ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದೆ. ಗೃಹ ನಿರ್ಮಾಣ, ಭೂಖರೀದಿ, ವಾಹನ ಖರೀದಿಯಲ್ಲಿ.

ಮಕರರಾಶಿ:-

ನಿಮ್ಮ ಆರ್ಥಿಕ ಸ್ಥಿತಿಯನ್ನು ಹಿಡಿತದಲ್ಲಿರಿಸಿಕೊಳ್ಳಬೇಕಾದೀತು. ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿತಶತ್ರುಗಳಿಂದ ಅಡೆತಡೆಗಳು, ಕಿರುಕುಳಗಳು ಅನುಭವಕ್ಕೆ ಬರುತ್ತವೆ.ಅವರಿವರ ಮಾತಿನಿಂದ ನಿಮ್ಮ ಮಾನಸಿಕ ಸ್ಥಿತಿ ಹಾಳಾದೀತು. ವೃತ್ತಿರಂಗದಲ್ಲಿಅಕಸ್ಮಾತ್‌ ಬದಲಾವಣೆಯ ಸಾಧ್ಯತೆ ಇದೆ. ಸಾಂಸಾರಿಕವಾಗಿ ನೀವು ಅದೃಷ್ಟವಂತರು.ವಿದ್ಯಾರ್ಥಿಗಳ ಮುಂದಿನ ಗುರಿ ಉತ್ತಮ ಫ‌ಲಿತಾಂಶಕ್ಕೆ ಕಾರಣವಾಗಿರಲಿ. ಆರೋಗ್ಯಭಾಗ್ಯ,ವಾಹನ ಸಂಚಾರದಲ್ಲಿ ಗಮನ ಅಗತ್ಯವಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳಿಂದ ಕಂಕಣ ಭಾಗ್ಯ ಕೂಡು ಬರುತ್ತದೆ.

ಕುಂಭ ರಾಶಿ:-
ನಿಮ್ಮ ವೃತ್ತಿರಂಗದಲ್ಲಿ ಅಭಿವೃದ್ಧಿ ವಾತಾವರಣ ಕಂಡು ಬರುತ್ತದೆ. ಹಾಗೇ ಆರ್ಥಿಕವಾಗಿ ಧನಸಂಗ್ರಹವಾಗಲಿದೆ ಮನೆಯಲ್ಲಿ ಶುಭಮಂಗಲ ಕಾರ್ಯ.ವಿದ್ಯಾರ್ಥಿಗಳು ಅಭ್ಯಾಸ ಮೇಲೆ ಗಮನವಿರಲಿ ನಿರುದ್ಯೋಗಿಗಳಗೆ ಉದ್ಯೋಗ ಲಾಭ.ನಾಳೆಯ ಬಗ್ಗೆ ಯೋಚನೆ ಮಾಡಬಾರದು ಇವತ್ತಿನ ಬಗ್ಗೆ ಚಿಂತನೆ ಅಗತ್ಯವಿದೆ.

ಮೀನಾ ರಾಶಿ:-
ವಿನಾಕಾರಣ ಮನಸ್ಸು ಉದ್ವೇಗ- ಆತಂಕಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಿರಿ. ನಿಮ್ಮ ಸ್ವಭಾವ ಏನೆಂದು ಅರಿತು ನೀವೇ ಹೆಜ್ಜೆ ಇಡಿರಿ. ಸದ್ಯದಲ್ಲೇ ಅಚ್ಚರಿಯ ವಿದ್ಯಾಮಾನಗಳು ಘಟಿಸುವುವು. ಹಣದ ಹರಿವು ಹೆಚ್ಚಲಿದೆ.ನಿರೀಕ್ಷಿತ ಕೆಲಸಕಾರ್ಯಗಳಿಗೆ ಪೂರಕವಾಗಿ ಮುನ್ನಡೆ ಇದೆ. ನಿಮ್ಮ ಆಲೋಚನೆ, ನಿರ್ಧಾರಗಳು ಸರಿಯಾಗಿದ್ದಲ್ಲಿ ಬಯಸಿದ್ದು ನಿಶ್ಚಿತ ರೂಪದಲ್ಲಿ ಸಿಗುತ್ತದೆ ಎಂಬುದು ಅರಿವಿರಲಿ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸಬಲದ ಅಗತ್ಯವಿದೆ.

ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಪ್ರೇಮ ವಿಚಾರ, ಹಣಕಾಸಿನ ಸಮಸ್ಯೆ, ದಾಂಪತ್ಯ ಕಲಹ, ಮತ್ತು ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕರೆ ನೀಡಿ.

(ಪಂಡಿತ್ ಯತೀಂದ್ರ ಭಟ್)
9901225989