ಸೆಹ್ವಾಗ್, ಶಿಖರ್ ಧವನ್ ಬಳಿಕ ಹುತಾತ್ಮ ಯೋಧರ ಕುಟುಂಬಕ್ಕೆ ಮೊಹಮ್ಮದ್ ಶಮಿಯಿಂದ ಆರ್ಥಿಕ ನೆರವು..

ಸ್ಪೋರ್ಟ್ಸ್

ಈಗಾಗ್ಲೇ ಹುತಾತ್ಮ ಯೋಧರ ಕುಟುಂಬಕ್ಕೆ ದೇಶವ್ಯಾಪಿ ಹಲವರು ತಮ್ಮ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ.. ಇದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸೇರಿದ್ದಾರೆ.. ಈ ದುರ್ಘಟನೆ ನಡೆದ ಬಳಿಕ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಯೋಧರ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನ ತಾವೇ ವಹಿಸಿಕೊಳ್ಳುವುದಾಗಿ ತಿಳಿಸಿದ್ರು.. ಇನ್ನು ಶಿಖರ್ ಧವನ್ ಕೂಡ ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಜಿದ್ರು…

ಸದ್ಯ ಭಾರತೀಯ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಸಹ ಯೋಧರ ಕುಟುಂಬಕ್ಕೆ ನೆರವಿನ ಹಸ್ತಾ ಚಾಜಿದ್ದಾರೆ.. ಸಿಆರ್ ಪಿಎಫ್ ವೆಲ್ ಫೇರ್ ಆಸೋಶಿಯೇಷನ್ ಗೆ 5 ಲಕ್ಷ ನೀಡಿದ್ದಾರೆ.. ಇಡೀ ದೇಶವೇ ಹುತಾತ್ಮ ಯೋಧರ ಕುಟುಂಬದ ಜೊತೆಗೆ ಇರುವುದಾಗಿ ಹೇಳುತ್ತಿದ್ದು, ಅದರ ಭಾಗವಾಗಿ ಸಹಾಯ ಅಸ್ತವನ್ನ ಚಾಜಿದೆ.. ಇದು ತಮ್ಮ ತಮ್ಮ ಕುಟುಂಬದ ಆಧಾರ ಸ್ಥಂಭವನ್ನ ಕಳೆದುಕೊಂಡ ಯೋಧರ ಮನೆಗೆ ದೊಡ್ಡ ಸಹಾಯವಾಗಿದೆ..