ಹುಷಾರ್..! ನಿಮ್ಮ ಕಾರ್, ಬೈಕ್ ನಲ್ಲೇ ಅಡಗಿದೆ ಲಕ್ಷಾಂತರ ಕೊರೊನಾ ವೈರಸ್..!

ವಾಹಿನಿ ಸುದ್ದಿ

ಲಾಕ್ ಡೌನ್ ತೆರವಾಗಿದ್ದು, ಬಹುತೇಕ ಎಲ್ಲರೂ ಈಗ ತಮ್ಮ ತಮ್ಮ ಕೆಲಸಕ್ಕೆ ಎಂದಿನಂತೆ ಮರಳುತಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ, ಸೋಂಕಿತರ ಸಂಪರ್ಕವೇ ಇಲ್ಲ ಅಂದವರಿಗೂ ಕೊರೊನಾ ಕಾಡೋಕೆ ಶುರು ಮಾಡಿದ. ನಾನು ಸಾರ್ವಜನಿಕ ಸ್ಥಳದಲ್ಲಿ ಓಡಾಡಲ್ಲ, ಸಾರ್ವಜನಿಕ ಸಾರಿಗೆ ಬಳಸಲ್ಲ, ಹೆಚ್ಚು ಜನ ಇರುವ ಕಡೆ ಹೋಗೋದಿಲ್ಲ. ನಮ್ಮ ಸ್ವಂತ ಕಾರ್, ಬೈಕ್ ಬಳಸಿ ಓಡಾಡ್ತಿನಿ ಅನ್ನೋರಿಗೆ ಇಲ್ಲಿದ ಶಾಕಿಂಗ್ ನ್ಯೂಸ್. ನಿತ್ಯ ಬಳಸುವ ಕಾರ್ ಹ್ಯಾಂಡಲ್, ಸ್ಟಿಯರಿಂಗ್, ಬಟನ್ ಗಳು, ಕಾರ್ ಕೀ, ಬೈಕ್ ಕೀ, ಬೈಕ್ ಹ್ಯಾಂಡಲ್ ಸೇರಿದಂತೆ ಸಂಪೂರ್ಣ ಬೈಕ್ ಅಥವ ಕಾರ್ ಕೊರೊನಾ ವೈರಸ್ ತಾಣವಾಗಿರಬಹುದು. ಇದರಿಂದಲೂ ಕೊರೊನಾ ಹರಡುವ ಸಾಧ್ಯತೆ ಶೇ.20 ರಷ್ಟಿದೆ ಅಂತಿದೆ ಇಲ್ಲೊಂದು ವರದಿ. ಹಾಗಾಗಿ ಪ್ರತಿ ಬಾರಿ ಬಳಸುವಾಗ ಹ್ಯಾಂಡ್ ಗ್ಲೌಸ್ ಬಳಸೋದು ಹಾಗು ಪ್ರತಿದಿನ ಕಾರ್ ಮತ್ತು ಬೈಕ್ ಅನ್ನು ಸ್ಯಾನಿಟೈಸರ್ ನಿಂದ ಶ್ವಚ್ಚ ಗೊಳಿಸುವುದು ಉತ್ತಮ.